ಚಿಕ್ಕಬಳ್ಳಾಪುರ ಕ್ಷೇತ್ರ ಉಪಚುನಾವಣೆ: ಜಾತಿ ಲೆಕ್ಕಾಚಾರ ಏನು?
ಚಿಕ್ಕಬಳ್ಳಾಪುರ, ಡಿಸೆಂಬರ್ 05: ಹದಿನೈದು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮತದಾನ ಇಂದು ನಡೆಯುತ್ತಿದ್ದು, ಮತದಾನದ ದಿನವೇ ಗೆಲುವಿನ ಲೆಕ್ಕಾಚಾರಗಳೂ ಪ್ರಾರಂಭವಾಗಿವೆ.
ಕುತೂಹಲ ಕೆರಳಿಸಿರುವ ಉಪಚುನಾವಣೆಯ ಪ್ರಮುಖ ಕ್ಷೇತ್ರಗಳಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರವೂ ಒಂದಾಗಿದ್ದು. ಇಲ್ಲಿನ ಜಾತಿ ಲೆಕ್ಕಾಚಾರ ಚುನಾವಣಾ ಗೆಲುವಿನ ಮೇಲೆ ನೇರ ಪರಿಣಾಮ ಬೀರಲಿದೆ.
ಒಕ್ಕಲಿಗರು ಮತ್ತು ಬಲಿಜಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಈ ಎರಡೂ ಸಮುದಾಯಗಳು ಯಾವ ಅಭ್ಯರ್ಥಿಗೆ ಬೆಂಬಲ ನೀಡುತ್ತಾರೋ ಅವರಿಗೆ ಗೆಲುವು ಸರಳ. ಆದರೆ ಈ ಬಾರಿ ಕಣದಲ್ಲಿರುವ ಮೂವರು ಅಭ್ಯರ್ಥಿಗಳು ಘಟಾನುಘಟಿ ಅಭ್ಯರ್ಥಿಗಳೇ ಆಗಿರುವ ಕಾರಣ ಸಮುದಾಯದ ಮತಗಳು ಒಡೆಯುವ ಸಾಧ್ಯತೆ ಇದೆ.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ ಬಯಸಿ ಬಿಜೆಪಿಯಿಂದ 'ಅನರ್ಹ' ಸುಧಾಕರ್ ಕಣಕ್ಕೆ ಇಳಿದಿದ್ದಾರೆ. ಇವರು ಈ ಮುನ್ನಾ ಕಾಂಗ್ರೆಸ್ ನಲ್ಲಿದ್ದರು. ಕಾಂಗ್ರೆಸ್ ಪಕ್ಷದಿಂದ ಹಿರಿಯ ಆಂಜಿನಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ. ಇನ್ನು ಜೆಡಿಎಸ್ ನಿಂದ ಅನಿತಾ ಕುಮಾರಸ್ವಾಮಿ ಅವರ ಸೋದರ ಸಂಬಂಧಿ ರಾಧಾಕೃಷ್ಣ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಮೂವರ ನಡುವೆ ತುರುಸಿನ ಪೈಪೋಟಿ ಇದೆ.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 200218, ಇದರಲ್ಲಿ ಮಹಿಳಾ ಮತದಾರರು 100747,
ಪುರುಷ ಮತದಾರರು 99449. ಇತರೆ 22, ಸರ್ವೀಸ್ ವೋಟರ್ಸ್ 46 ಇದ್ದಾರೆ.
ಕ್ಷೇತ್ರದ ಜಾತಿವಾರು ಲೆಕ್ಕಾಚಾರ ಇಂತಿದೆ.
ಒಕ್ಕಲಿಗರು-50000
ಬಲಿಜಿಗರು-30000
ಕುರುಬರು-15000
ಅಲ್ಪಸಂಖ್ಯಾತರು-15000
ಪರಿಶಿಷ್ಟ ಜಾತಿ-50000 ಪರಿಶಿಷ್ಟ ಪಂಗಡ-25000
ಇತರೆ ಸಮುದಾಯ-20000 (ಅಂದಾಜು)
ವಾರ್ಡ್ ಮತ್ತು ಹೋಬಳಿ
ಚಿಕ್ಕಬಳ್ಳಾಪುರ ನಗರಸಭೆ
ಕಸಬಾ ಹೋಬಳಿ
ಮಂಚೇನಹಳ್ಳಿ
ನಂದಿ
ಮಂಡಿಕಲ್ಲು












Click it and Unblock the Notifications