ಬಾಷಾ ರಜನಿಕಾಂತ್ ಜೊತೆಗಿನ ಚಿತ್ರ ಹಂಚಿಕೊಂಡ ನಟಿ ನಗ್ಮಾ

ಚೆನ್ನೈ, ಡಿ. 22: ತಮಿಳುನಾಡು ವಿಧಾನಸಭೆ ಚುನಾವಣೆ 2021ಗಾಗಿ ವಿವಿಧ ರಾಜಕೀಯ ಪಕ್ಷಗಳು ಈಗಾಗಲೇ ಪ್ರಚಾರ ಆರಂಭಿಸಿವೆ. ರಾಜಕೀಯ ರಂಗಕ್ಕೆ ಧುಮುಕುವ ತವಕದಲ್ಲಿರುವ ಸೂಪರ್ ಸ್ಟಾರ್ ರಜನಿ ಕಾಂತ್ ಅವರು ಈ ವರ್ಷಾಂತ್ಯಕ್ಕೆ ಹೊಸ ಪಕ್ಷದ ಸ್ಪಷ್ಟ ಚಿತ್ರಣ ನೀಡಲಿದ್ದಾರೆ. ಈ ನಡುವೆ ನಟಿ ಕಮ್ ರಾಜಕಾರಣಿ ನಗ್ಮಾ ಅವರು ರಜನಿಕಾಂತ್ ಜೊತೆಗಿನ ಅಪರೂಪದ ಚಿತ್ರವೊಂದನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ.

ತಮಿಳುನಾಡು ವಿಧಾನಸಭೆ ಚುನಾವಣೆ ಹತ್ತಿರವಿರುವಾಗ ವಿವಿಧ ಪಕ್ಷಗಳಲ್ಲಿರುವ ಸಿನಿಮಾ ಕ್ಷೇತ್ರದ ಸೆಲೆಬ್ರಿಟಿಗಳ ಪೈಕಿ ಯಾರು ಯಾರಿಗೆ ಬೆಂಬಲ ವ್ಯಕ್ತಪಡಿಸುತ್ತಾರೆ ಎಂಬ ಕುತೂಹಲವಿದ್ದೇ ಇದೆ.

ರಜನಿ ಹಾಗೂ ನಗ್ಮಾ ಜೋಡಿಯ ತಮಿಳು ಚಿತ್ರ ಬಾಷಾ ಸೂಪರ್ ಹಿಟ್ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು, ರಜನಿಕಾಂತ್, ರಜನಿ ಅವರ ಪತ್ನಿ ಲತಾ ಜೊತೆಗೆ ನಗ್ಮಾ ಮಾತುಕತೆ ನಡೆಸುತ್ತಿರುವ ಚಿತ್ರ ಇದಾಗಿದ್ದು, ಲಂಡನ್ ಪ್ರವಾಸದ ಸಂದರ್ಭದಲ್ಲಿ ತೆಗೆದ ಚಿತ್ರ ಇದು ಎಂದು ಹೇಳಿಕೊಂಡಿದ್ದಾರೆ.

Viral throwback Picture: Nagma with Rajinikanth

ರಜನಿಕಾಂತ್ ಜೀ ಹಾಗೂ ಅವರ ಪತ್ನಿ ಲತಾ ಜಿ ಅವರನ್ನು ಲಂಡನ್ ಪ್ರವಾಸದಲ್ಲಿ ಭೇಟಿ ಮಾಡಿದ ಚಿತ್ರ ಇದ್ದಾಗಿದ್ದು, ಸ್ನೇಹಮಯ ಸ್ಮರಣೆ ಇದಾಗಿದೆ. ಬಾಷಾ ಚಿತ್ರದಲ್ಲಿ ಇಬ್ಬರು ಒಟ್ಟಿಗೆ ನಟಿಸಿದ್ದು , ಅತ್ಯಂತ ಸ್ಮರಣೀಯವಾಗಿತ್ತು ಎಂದು ನಗ್ಮಾ ಟ್ವೀಟ್ ಮಾಡಿದ್ದಾರೆ. ಸುಮಾರು 5ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಇದಲ್ಲದೆ, ಹಳೆ ಚಿತ್ರಗಳ ಸರಣಿ ಮುಂದುವರೆಸಿರುವ ನಗ್ಮಾ, ಸಲ್ಮಾನ್ ಖಾನ್ ಜೊತೆಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ.

ರಾಜಕೀಯ ಇನ್ನಿಂಗ್ಸ್ ಆರಂಭದ ಜೊತೆಗೆ ಸಿನಿಮಾ ಚಿತ್ರೀಕರಣದಲ್ಲೂ ನಿರತರಾಗಿರುವ ರಜನಿಕಾಂತ್ ಅವರು ಅಣ್ಣಾತೆ ಸಿನಿಮಾ ಮುಗಿಸಿದ ಬಳಿಕ ಪೂರ್ಣಪ್ರಮಾಣವಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಮುಂಬರುವ ಏಪ್ರಿಲ್-ಮೇ ತಿಂಗಳಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ನಿಗದಿಯಾಗಿದ್ದು, ರಜನಿಕಾಂತ್ ಅವರು ಹೊಸ ಪಕ್ಷದೊಡನೆ ಸ್ಪರ್ಧೆಗಿಳಿಯಲಿದ್ದಾರೆ.

2004ರಲ್ಲಿ ನಟಿ ನಗ್ಮಾ ಅವರು ಬಿಜೆಪಿಯಿಂದ ಹೈದರಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಬಂದಿತ್ತು. ಆದರೆ, ಕಾಂಗ್ರೆಸ್ ಪಕ್ಷದ ಪರ ಪ್ರಚಾರ ನಡೆಸಿದರು. 2009ರ ವಿಧಾನಸಭಾ ಚುನಾವಣೆಗಳಲ್ಲಿ ಮುಂಬೈನಿಂದ ಸ್ಫರ್ಧಿಸಲು ಕಾಂಗ್ರೆಸ್‌ ಹೈಕಮಾಂಡ್‌ನಿಂದ ಟಿಕೆಟ್‌ ಕೇಳಿದ್ದರು. ನಗ್ಮಾ ಅವರಿಗೆ ಟಿಕೆಟ್ ಸಿಗದಿದ್ದರೂ ಪಕ್ಷದ ಪರ ಬಿರುಸಿನ ಪ್ರಚಾರ ಮಾಡಿ ಹಿರಿಯ ಮುಖಂಡರ ಕೃಪೆಗೆ ಒಳಗಾಗಿದ್ದರು. 2014ರಲ್ಲಿ ಮೀರತ್ ನಿಂದ ಲೋಕಸಭೆಗೆ ಆಯ್ಕೆ ಬಯಸಿ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧಿಸಿದರೂ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. 2015ರಲ್ಲಿ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು.

ನಗ್ಮಾ ನಟಿಯಾಗಿ ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಕರ್ನಾಟಕದಲ್ಲಿ ಹೆಸರು ಮಾಡಿದ್ದಲ್ಲದೆ, ಭೋಜ್ ಪುರಿ ನಟಿಯಾಗಿ ಜನಪ್ರಿಯತೆ ಗಳಿಸಿದ್ದಾರೆ. ಮುಸ್ಲಿಂ, ಹಿಂದೂ ಸಮ್ಮಿಶ್ರ ಕುಟುಂಬ ಹೊಂದಿರುವ ನಗ್ಮಾ ಅವರು ಕಾಂಗ್ರೆಸ್ ಪಕ್ಷ ಸೇರಲು ಜಾತ್ಯಾತೀತ ಸಿದ್ಧಾಂತವೇ ಕಾರಣ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+