• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಾರ್ಷಿಕ ಫುಲ್ ಬ್ರೈಟ್‌ ಫೆಲೋಶಿಪ್‌ಗಳಿಗಾಗಿ ಅರ್ಜಿ ಆಹ್ವಾನ

|

ಚೆನ್ನೈ,ಫೆಬ್ರವರಿ 26: ಯುನೈಟೆಡ್ ಸ್ಟೇಟ್ಸ್-ಇಂಡಿಯಾ ಎಜುಕೇಷನಲ್ ಫೌಂಡೇಷನ್ ವಾರ್ಷಿಕ ಫುಲ್ ಬ್ರೈಟ್ ಫೆಲೋಶಿಪ್‌ಗಳಿಗಾಗಿ ಅರ್ಜಿ ಆಹ್ವಾನಿಸಿದೆ.

USIEF ನಿರ್ವಹಿಸುವ ವಿನಿಮಯ ಮತ್ತು ವಿದ್ಯಾರ್ಥಿವೇತನ ಕಾರ್ಯಕ್ರಮಗಳ ಹಳೆಯ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ವಿಭಾಗಗಳು ಮತ್ತು ವೃತ್ತಿಗಳಲ್ಲಿ ಗರಿಷ್ಠ ಮಟ್ಟದ ನಾಯಕತ್ವ ಗುಣಗಳನ್ನು ಪ್ರದರ್ಶಿಸಿದ್ದಾರೆ.

ಭಾರತದ ಅತ್ಯುತ್ತಮ ವಿದ್ಯಾರ್ಥಿಗಳು, ವಿದ್ವಾಂಸರು, ಶಿಕ್ಷಕರು, ಕಲಾವಿದರು ಮತ್ತು ಎಲ್ಲಾ ಹಿನ್ನೆಲೆಯ ವೃತ್ತಿಪರರಿಗೆ ಈ ಅರ್ಜಿ ಸಲ್ಲಿಸಲು ಈ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ.

ಫುಲ್ ಬ್ರೈಟ್-ನೆಹರು ಮಾಸ್ಟರ್ಸ್ ಫೆಲೋ ಗೌತಮನ್ ರಂಗನಾಥನ್ ಅವರು "ಅಮೆರಿಕ ಮತ್ತು ಭಾರತ ಸರ್ಕಾರಗಳ ಉದಾರ ಬೆಂಬಲದಿಂದ ಅಮೆರಿಕದ ಆಸ್ಟಿನ್‌ನ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ನನ್ನ ಎಲ್.ಎಲ್.ಎಂ. ಕೋರ್ಸ್ ಅನ್ನು ಪೂರ್ಣಗೊಳಿಸಲು ಸಾಧ್ಯವಾಯಿತು.

ಅಲ್ಲಿ ಕಳೆದ ಸಮಯವು ನನ್ನ ಜೀವನಕ್ಕೆ ಹೊಸ ತಿರುವು ಕೊಟ್ಟಿದೆ. . ಉತ್ಕೃಷ್ಟ ಮಟ್ಟದ ತರಗತಿಗಳು ಮತ್ತು ಕಾನೂನು ಶಾಲೆಯಲ್ಲಿನ ಸಂಶೋಧನಾ ಕೇಂದ್ರಗಳೊಂದಿಗಿನ ನನ್ನ ಒಡನಾಟದ ಜೊತೆಗೆ, ಇತಿಹಾಸ ಮತ್ತು ಸರ್ಕಾರದ ಕೋರ್ಸ್‌ಗಳನ್ನು ತೆಗೆದುಕೊಳ್ಳುವುದರಿಂದ ನನಗೆ ಉತ್ತಮ ಪ್ರಯೋಜನ ದೊರಕಿದೆ, ಹಾಗೂ ಇಲ್ಲಿನ ಕಲಿಕೆ ಕಾನೂನಿನ ಬಗ್ಗೆ ನನ್ನ ದೃಷ್ಟಿಕೋನಗಳನ್ನು ಬಹಳ ವಿಸ್ತರಿಸಿತು. " ಎಂದರು.

ಪೆನ್ಸಿಲ್ವೇನಿಯಾ ಸ್ಟೇಟ್ ಯೂನಿವರ್ಸಿಟಿಯ ಫುಲ್‌ಬ್ರೈಟ್-ನೆಹರು ಡಾಕ್ಟರಲ್ ರಿಸರ್ಚ್ ಫೆಲೋಶಿಪ್ ಪಡೆದಿರುವ ಆಕರ್ಷ್ ವರ್ಮಾ ಪ್ರಕಾರ "ನೀರಿನಿಂದ ಲವಣಾಂಶ ತೆಗೆಯುವ ಸಾಧ್ಯತೆಗಳನ್ನು ವಿಸ್ತರಿಸಲು ಸಹಾಯ ಮಾಡುವ ಸಂಶೋಧನೆ ನಡೆಸಲು ಈ ಫೆಲೋಶಿಪ್ ಅನುವು ಮಾಡಿತು. ಅಮೆರಿಕದಲ್ಲಿ ಉತ್ತಮ-ಗುಣಮಟ್ಟದ ಸಂಶೋಧನೆ ಮತ್ತು ಉತ್ತಮ ಶೈಕ್ಷಣಿಕ ಮೂಲಸೌಕರ್ಯಗಳನ್ನು ಪಡೆದದ್ದು ನನಗೆ ಎಂಜಿನಿಯರಿಂಗ್ ಸಮಸ್ಯೆಗಳನ್ನು ನಿಭಾಯಿಸಲು ಒಂದು ಜಾಗತಿಕ ದೃಷ್ಟಿಕೋನ ಹೊಂದುವುದು ಸಾಧ್ಯವಾಯಿತು."

ಫುಲ್‌ಬ್ರೈಟ್-ನೆಹರು ಅಕಾಡೆಮಿಕ್ ಮತ್ತು ಪ್ರೊಫೆಷನಲ್ ಎಕ್ಸಲೆನ್ಸ್ ಸ್ಕಾಲರ್ ಅಬಿದ್ ಬಂಡೆ "ಹೊಸ ಸಂಪರ್ಕಗಳನ್ನು ಹೊಂದಲು ಸಹಾಯಕವಾಯಿತು. ಕ್ಯಾನ್ಸರ್ ಕೋಶಗಳ ಗುರಿ-ನಿರ್ದಿಷ್ಟ ಕೀಮೋಥೆರಪಿಗಾಗಿ ನವೀನ ತಂತ್ರಗಳನ್ನು ಕಲಿತು, ಪ್ರತಿಕಾಯಗಳನ್ನು ಔಷಧ ವಿತರಣಾ ವಾಹನಗಳಾಗಿ ಬಳಸುವುದು ಮತ್ತು ಜಾಗತಿಕ ಸಾರ್ವಜನಿಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ಅನುವಾಗುವ ನವೀನ ಸಹಯೋಗಗಳನ್ನು ರೂಪಿಸಲು ಇದು ನನಗೆ ಸಹಕಾರಿಯಾಯಿತು. ವೈಯಕ್ತಿಕ ದೃಷ್ಟಿಯಿಂದ, ಸ್ಥಳೀಯ ಸಮುದಾಯದೊಂದಿಗಿನ ನನ್ನ ಸಂವಹನಗಳು ಈ ಜಗತ್ತನ್ನು ಉತ್ತಮಗೊಳಿಸಲು ನಾನು ಏನು ಕೊಡುಗೆ ನೀಡಬಲ್ಲೆ ಎಂಬುದನ್ನು ಅರಿಯಲು ಸಹಾಯ ಮಾಡಿದವು. "

ಈ ವರ್ಷದ ಫುಲ್ ಬ್ರೈಟ್ ಕಾರ್ಯಕ್ರಮದಲ್ಲಿ ಭಾಗವಹಿಸುವವರು, ಬಳಗದವರು ಮತ್ತು ಮಿತ್ರರು ವಿಶ್ವಾದ್ಯಂತ ಅಮೆರಿಕ ಸರ್ಕಾರದ ಫುಲ್ ಬ್ರೈಟ್ ಕಾರ್ಯಕ್ರಮದ 75 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದಾರೆ.

ಕಾಲಾತೀತ ಸಂಪರ್ಕಗಳನ್ನು ರೂಪಿಸುವುದು, ತಪ್ಪುಗ್ರಹಿಕೆಯನ್ನು ಎದುರಿಸುವುದು, ಹಾಗೂ ಜನರು ಮತ್ತು ರಾಷ್ಟ್ರಗಳು ಒಟ್ಟಾಗಿ ಸಮಗ್ರ ಗುರಿಗಳತ್ತ ಕೆಲಸ ಮಾಡುವ ಉದ್ದೇಶವನ್ನು ಮತ್ತೆ ಮನನ ಮಾಡಿಕೊಳ್ಳಲಿದ್ದಾರೆ. ಈ ಆಚರಣೆಯು ಸೆನೆಟರ್ ಜೆ. ವಿಲಿಯಂ ಫುಲ್‌ಬ್ರೈಟ್ ಅವರ "ಕೊಂಚ ಹೆಚ್ಚು ಜ್ಞಾನ, ಕೊಂಚ ಹೆಚ್ಚು ಕಾರಣ, ಮತ್ತು ವಿಶ್ವ ವ್ಯವಹಾರಗಳಲ್ಲಿ ಸ್ವಲ್ಪ ಹೆಚ್ಚು ಸಹಾನುಭೂತಿ" ತರುವ ಗುರಿಯನ್ನು ಪೂರೈಸುವ ಬದ್ಧತೆಯನ್ನು ಎತ್ತಿ ಹಿಡಿಯಲಿದೆ. ಜೊತೆಗೆ "ರಾಷ್ಟ್ರಗಳು ಶಾಂತಿ ಮತ್ತು ಸ್ನೇಹದಿಂದ ಬದುಕುವತ್ತ ಕಾಲಾತೀತವಾಗಿ ಕಲಿಯುವ ಅವಕಾಶವನ್ನು ಹೆಚ್ಚಿಸುತ್ತದೆ. ಹೆಚ್ಚಿನ ವಿವರಗಳಿಗಾಗಿ, usief.org.in ಗೆ ಭೇಟಿ ನೀಡಿ.

ಅರ್ಜಿದಾರರು ಯಾವುದೇ ಪ್ರಶ್ನೆಗಳನ್ನುip@usief.org.in ಗೆ ಕಳುಹಿಸಬಹುದು ಅಥವಾ ನವದೆಹಲಿ, ಚೆನ್ನೈ, ಹೈದರಾಬಾದ್, ಕೋಲ್ಕತಾ, ಅಥವಾ ಮುಂಬೈಯಲ್ಲಿರುವ ಯುಎಸ್ಐಇಎಫ್ ಕಚೇರಿಗಳಲ್ಲಿ ಒಂದನ್ನು ಸಂಪರ್ಕಿಸಬಹುದು. ತಮಿಳುನಾಡು, ಕರ್ನಾಟಕ, ಕೇರಳ, ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಲಕ್ಷದ್ವೀಪ ದ್ವೀಪಗಳು, ಪುದುಚೇರಿ, ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ನಿರೀಕ್ಷಿತ ಅರ್ಜಿದಾರರು usiefchennai@usief.org.in ಗೆ ಬರೆಯಬಹುದು.

English summary
United States-India Educational Foundation Invites application for full bright fellowship.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X