ಈ ರಾಶಿಯವರ ಖರ್ಚು ವೆಚ್ಚಗಳು ಹೆಚ್ಚಾಗಬಹುದು: ವೃತ್ತಿ ಬದುಕಿನಲ್ಲಿ ಎದುರಾಗುವುದು ಸವಾಲು

Horoscope April 22: ಬುಧವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಬುಧವಾರ ರಾಹುಕಾಲವು ಸಾಮಾನ್ಯವಾಗಿ ಮಧ್ಯಾಹ್ನ 12:00 ರಿಂದ 1:30 ರವರೆಗೆ ಇರುತ್ತದೆ. ಏಪ್ರಿಲ್ 22 ರ ದಿನ ಭವಿಷ್ಯ: 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ.

ಮೇಷ ರಾಶಿ:

ಇಂದು ಹಣಕಾಸಿನ ವಿಷಯಗಳು ಸಾಮಾನ್ಯವಾಗಿಯೇ ಇರುತ್ತವೆ. ಹೆಚ್ಚುವರಿ ಲಾಭಕ್ಕಾಗಿ ಕಠಿಣ ಶ್ರಮ ಪಡಬೇಕಾಗುತ್ತದೆ. ತಲೆ ಅಥವಾ ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುವುದು.

Horoscope April 22

ವೃಷಭ ರಾಶಿ:

ಇಂದು ಅದೃಷ್ಟ ನಿಮ್ಮ ಕಡೆಗೇ ಇರುವುದು.ಕೆಲಸದಲ್ಲಿ ಉತ್ತಮ ಅವಕಾಶಗಳು ಒಲಿದು ಬರುವುದು. ಆದಾಯದಲ್ಲಿ ಏರಿಕೆಯಾಗದಿದ್ದರೂ ವೆಚ್ಚಗಳು ಹೆಚ್ಚಾಗಬಹುದು. ಕಠಿಣ ಪರಿಶ್ರಮದ ಆಧಾರದ ಮೇಲೆ ಉತ್ತಮ ಫಲಿತಾಂಶ ಸಿಗುವುದು.

ಮಿಥುನ ರಾಶಿ:

ಬುದ್ಧಿವಂತಿಕೆಯಿಂದ ಖರ್ಚು ಮಾಡಿ. ಎದುರಾಗುವ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ. ಸ್ನೇಹಿತರೊಂದಿಗೆ ಸಮಯ ಕಳೆಯಲು ಉತ್ತಮ ದಿನವಾಗಿರುತ್ತದೆ.

ಕರ್ಕಾಟಕ ರಾಶಿ:

ಹಣಕಾಸಿನ ಸಮಸ್ಯೆಗಳಿಗೆ ಪರಿಹಾರ ಸಿಗುವುದು. ಕುಟುಂಬದೊಂದಿಗೆ ಸಮಯ ಕಳೆಯಲು ಉತ್ತಮ ಅವಕಾಶವಿರುವುದು. ಪ್ರವಾಸಕ್ಕೆ ತೆರಳುವ ಅವಕಾಶವಿದೆ.

ಸಿಂಹ ರಾಶಿ:

ವೃತ್ತಿ ಬದುಕಿನಲ್ಲಿ ಸವಾಲುಗಳು ಎದುರಾಗುವುದು. ವೆಚ್ಚಗಳು ಹೆಚ್ಚಾಗುವುದು. ಆರೋಗ್ಯವು ಉತ್ತಮವಾಗಿರುವುದು. ಅತಿಯಾದ ಕೆಲಸದ ಹೊರೆ ಆಯಾಸಕ್ಕೆ ಕಾರಣವಾಗಬಹುದು.

ಕನ್ಯಾ ರಾಶಿ:

ಅದೃಷ್ಟ ಒಲಿದು ಬರುವ ದಿನ. ಹಣಕಾಸಿನ ವಿಚಾರದಲ್ಲಿ ಲಾಭವಾಗುವುದು. ವೈವಾಹಿಕ ಸಂಬಂಧದಲ್ಲಿ ಮನಸ್ಥಾಪ ಮೂಡಬಹುದು. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲೂ ಬಹುದು.

ತುಲಾ ರಾಶಿ:

ಪ್ರೇಮ ಜೀವನದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವುದು ಅತ್ಯಗತ್ಯ. ಆರೋಗ್ಯ ಸಾಮಾನ್ಯವಾಗಿರುತ್ತದೆ, ಕುತ್ತಿಗೆ ನೋವು ಸಮಸ್ಯೆ ಉಂಟು ಮಾಡಬಹುದು.

ವೃಶ್ಚಿಕ ರಾಶಿ:

ಅದೃಷ್ಟ ಮತ್ತು ಕಠಿಣ ಪರಿಶ್ರಮ ಎರಡೂ ಒಟ್ಟಿಗೆ ಸೇರಿ ಕೆಲಸದಲ್ಲಿ ಯಶಸ್ಸು ಸಿಗುವುದು. ಆರ್ಥಿಕವಾಗಿ, ಈ ದಿನವು ಶುಭವಾಗಿರುವುದು. ಆರೋಗ್ಯವು ಉತ್ತಮವಾಗಿರುತ್ತದೆ.

ಧನು ರಾಶಿ:

ಕೆಲಸದಲ್ಲಿ ಹೊಸ ಅವಕಾಶ ಎದುರಾಗುವುದು.ಖರ್ಚುಗಳ ಜೊತೆಗೆ ಆರ್ಥಿಕ ಲಾಭವೂ ಆಗುವುದು. ಪ್ರಯಾಣ ಮಾಡುವಾಗ ಜಾಗರೂಕರಾಗಿರಿ.

ಮಕರ ರಾಶಿ:

ವಿದ್ಯಾರ್ಥಿಗಳಿಗೆ ಶುಭದಿನವಾಗಿರುವುದು.ಇಂದು ಮಾಡುವ ಹೂಡಿಕೆ ಲಾಭಕ್ಕೆ ಕಾರಣವಾಗಬಹುದು. ಆರ್ಥಿಕ ಪರಿಸ್ಥಿತಿ ಬಲವಾಗಿರುತ್ತದೆ.

ಕುಂಭ ರಾಶಿ:

ದೈಹಿಕ ಆರೋಗ್ಯ ಉತ್ತಮವಾಗಿರುತ್ತದೆ. ಮಾನಸಿಕ ಶಾಂತಿಯನ್ನು ಕಾಪಾಡಿಕೊಳ್ಳುವುದು ಮುಖ್ಯ. ಖರ್ಚು ವೆಚ್ಚಗಳು ಹೆಚ್ಚಾಗುವುದು. ಸ್ನೇಹಿತರೊಂದಿಗೆ ಸಮಯ ಕಳೆಯಲು ಉತ್ತಮ ಅವಕಾಶ ಸಿಗುವುದು.

ಮೀನ ರಾಶಿ:

ಮಾಡುವ ಕೆಲಸವನ್ನು ಗಮನವಿಟ್ಟು ಮಾಡಿ. ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ. ಆರೋಗ್ಯ ಸಮಸ್ಯೆಯೂ ಕಾಡಬಹುದು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+