ಅಭಿಷೇಕ್‌ ಶರ್ಮಾ ಸಿಡಿಲಬ್ಬರದ ಆಟ, ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಎಸ್‌ಆರ್‌ಎಚ್‌ ಭರ್ಜರಿ ಗೆಲುವು

SRH VS DC IPL 2026: ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಂಗಳವಾರ (ಏಪ್ರಿಲ್‌ 21) ರಾತ್ರಿ ನಡೆದ ಐಪಿಎಲ್‌ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 47 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಎಸ್‌ಆರ್‌ಎಚ್‌ ಅಂಕಪಟ್ಟಿಯಲ್ಲಿ 8 ಪಾಯಿಂಟ್ಸ್‌ ಪಡೆದು ಮೂರನೇ ಸ್ಥಾನಕ್ಕೆ ಏರಿದೆ.

ಟಾಸ್‌ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕ ಅಕ್ಷರ್ ಪಟೇಲ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆಯೇ ಮೊದಲು ಬ್ಯಾಟ್‌ ಬೀಸಿದ ಸನ್‌ರೈಸರ್ಸ್‌ ಹೈದರಾಬಾದ್‌ ನಿಗದಿತ 20 ಓವರ್‌ಗಳಿಗೆ 2 ವಿಕೆಟ್‌ ನಷ್ಟಕ್ಕೆ 242 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಎಸ್‌ಆರ್‌ಎಚ್‌ ನೀಡಿದ 243 ರನ್‌ಗಳ ಗುರಿಯನ್ನು ಮುಟ್ಟಲಾಗದೇ ಡಿಸಿ 47 ರನ್‌ಗಳಿಂದ ಸೋಲು ಕಂಡಿತು. ಅಕ್ಷರ್ ಪಟೇಲ್ ಪಡೆ ನಿಗದಿತ 20 ಓವರ್‌ಗಳಲ್ಲಿ 195 ರನ್‌ ಗಳಿಸಲಷ್ಟೇ ಶಕ್ತವಾಯಿತು.

IPL 2026 Sunrisers Hyderabad Beat Delhi capitals by 47 Runs Climb to Third Spot in Points Table

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಎಸ್‌ಆರ್‌ಎಚ್‌ ಭರ್ಜರಿ ಜಯ

ಈ ರೋಚಕ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವರ ಸ್ಫೋಟಕ ಶತಕ (135*) ಶತಕ ಮತ್ತು ಈಶಾನ್ ಮಾಲಿಂಗ ಅವರ ಅದ್ಭುತ ಬೌಲಿಂಗ್ (4 ವಿಕೆಟ್) ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 47 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಎಸ್‌ಆರ್‌ಎಚ್‌ ಪರ ಬಹುತೇಕ ರನ್‌ಗಳ ಪಾಲು ಅಭಿಷೇಕ್ ಶರ್ಮಾ ಅವರದ್ದೇ ಇದೆ.

ಅಭಿಷೇಕ್ ಶರ್ಮಾ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ

ಹೈದರಾಬಾದ್ ಪರ ಅಭಿಷೇಕ್ ಶರ್ಮಾ ಕೇವಲ 68 ಎಸೆತಗಳಲ್ಲಿ 10 ಬೌಂಡರಿ, 10 ಸಿಕ್ಸರ್‌ಗಳೊಂದಿಗೆ ಅಜೇಯ 135 ರನ್ ಚಚ್ಚುವ ಮೂಲಕ ತಂಡದ ಮೊತ್ತವನ್ನು 242/2 ಕ್ಕೆ ಏರಿಸಿದರು. ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡವನ್ನು ಕಟ್ಟಿಹಾಕುವಲ್ಲಿ ಮಾಲಿಂಗ (4/32) ಯಶಸ್ವಿಯಾದರು.

ಎಸ್‌ಆರ್‌ಎಚ್‌ ಪರ ಯಾರು ಎಷ್ಟು ರನ್‌ ಬಾರಿಸಿದರು?

10 ಬೌಂಡರಿ ಮತ್ತು 10 ಸಿಕ್ಸರ್‌ಗಳನ್ನು ಸಿಡಿಸಿದ ಅಭಿಷೇಕ್ ಶರ್ಮಾ, ಇನ್ನಿಂಗ್ಸ್‌ನ ಆರಂಭದಿಂದ ಅಂತ್ಯದವರೆಗೆ ಅಬ್ಬರಿಸಿದರು. ಟ್ರಾವಿಸ್ ಹೆಡ್ 37(26), ಇಶಾನ್ ಕಿಶನ್ 25(13), ಹೆನ್ರಿಚ್ ಕ್ಲಾಸೆನ್ ಅಜೇಯ 37 ರನ್ ಸಿಡಿಸಿ ತಂಡದ ಬೃಹತ್ ಮೊತ್ತಕ್ಕೆ ಪ್ರಮುಖ ಸಾಥ್ ನೀಡಿದರು. ಇನ್ನೂ ಬೌಲಿಂಗ್ ವಿಭಾಗಕ್ಕೆ ಬಂದರೆ ಎಸ್‌ಆರ್‌ಎಚ್‌ ಪರ ಈಶಾನ್ ಮಾಲಿಂಗ 32 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ, ಹರ್ಷ್ ದುಬೆ 3, ಸಾಕಿಬ್ ಹುಸೇನ್ ಹಾಗೂ ದಿಲ್ಶ್ಯಾನ್ ಮದುಶಂಕರ ತಲಾ 1 ವಿಕೆಟ್ ಪಡೆದರು.

ಅಭಿಷೇಕ್ ಶರ್ಮಾ ಅಮೋಘ ಸಾಧನೆ

ಇನ್ನೂ ಇದು ಟಿ20 ಮಾದರಿಯಲ್ಲಿ ಅಭಿಷೇಕ್ ಶರ್ಮಾ ಅವರ 9ನೇ ಶತಕವಾಗಿದ್ದು, ಈ ಮೂಲಕ ಅತಿ ಹೆಚ್ಚು ಟಿ20 ಶತಕ ಸಿಡಿಸಿದ ಭಾರತೀಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಒಂದು ಇನ್ನಿಂಗ್ಸ್‌ನಲ್ಲಿ 10 ಸಿಕ್ಸರ್ ಸಿಡಿಸುವ ಮೂಲಕ ಹೈದರಾಬಾದ್ ಪರ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ತಮ್ಮದೇ ದಾಖಲೆಯನ್ನ ಸರಿಗಟ್ಟಿದರು.

ಇಶಾನ್ ಕಿಶನ್ ಮತ್ತು ಹೆನ್ರಿಚ್ ಕ್ಲಾಸೆನ್ ಅವರ ಸ್ಫೋಟಕ ಬ್ಯಾಟಿಂಗ್ ಹೈದರಾಬಾದ್ ಬೃಹತ್ ಮೊತ್ತ ಪೇರಿಸಲು ನೆರವಾಯಿತು. ಬೃಹತ್ ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಹೈದರಾಬಾದ್‌ನ ಶಿಸ್ತುಬದ್ಧ ಬೌಲಿಂಗ್ ದಾಳಿಯನ್ನು ಎದುರಿಸುವುದು ಕಷ್ಟವಾಯಿತು.

ಡೆಲ್ಲಿ ಪರ ನಿತೀಶ್ ರಾಣಾ (57) ಅರ್ಧಶತಕ ಗಳಿಸಿ ಏಕಾಂಗಿ ಹೋರಾಟ ನಡೆಸಿದರು. ಇನ್ನೂ ಬೌಲಿಂಗ್‌ನಲ್ಲಿ ಆಫ್ ಸ್ಪಿನ್ನರ್ ಆಗಿ ಕಣಕ್ಕಿಳಿದಿದ್ದ ಅವರು 4 ಓವರ್‌ ಎಸೆದು ಯಾವುದೇ ವಿಕೆಟ್‌ ಪಡೆಯದೇ, 55 ರನ್ ನೀಡಿ ದುಬಾರಿಯಾದರು. ಒಟ್ಟಿನಲ್ಲಿ ಡೆಲ್ಲಿ ಸೋಲಿಗೆ ಪ್ರಮುಖ ಕಾರಣವೆಂದರೆ, ಬೌಲಿಂಗ್‌ ವೇಳೆ ಹೆಚ್ಚು ರನ್‌ ಬಿಟ್ಟುಕೊಟ್ಟಿದ್ದು, ಬಳಿಕ ಬ್ಯಾಟಿಂಗ್‌ನಲ್ಲಿ ಉತ್ತಮ ಪರದರ್ಶನ ತೋರದೇ ಇದ್ದಿದ್ದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+