ನಾಗರಿಕರಿಗೆ ಗುಡ್‌ನ್ಯೂಸ್: ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ಶುಕ್ರವಾರ ಫೋನ್-ಇನ್ ಕಾರ್ಯಕ್ರಮ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಪೈಕಿ ಪ್ರಮುಖವಾದ ಉತ್ತರ ನಗರ ಪಾಲಿಕೆಯಲ್ಲಿ ನಾಗರಿಕರ ಸೇವಾ ಸುಧಾರಣೆಗಾಗಿ ಪ್ರತೀ ಶುಕ್ರವಾರ ಫೋನ್-ಇನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಈ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ತ್ವರಿತ ಸ್ಪಂದನೆ ಮಾಡುವುದಾಗಿ ತಿಳಿಸಿರುವ ಪಾಲಿಕೆ ತನ್ನ ವ್ಯಾಪ್ತಿಯ ನಾಗರಿಕರಿಗೆ ಶುಭ ಸುದ್ದಿ ನೀಡಿದೆ.

ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರ ಅಹವಾಲುಗಳನ್ನು ನೇರವಾಗಿ ಆಲಿಸುವ ಉದ್ದೇಶದಿಂದ ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಇನ್ನು ಮುಂದೆ ಪ್ರತೀ ಶುಕ್ರವಾರ ಸಾರ್ವಜನಿಕರೊಂದಿಗೆ ಫೋನ್-ಇನ್ ಕಾರ್ಯಕ್ರಮ ಆರಂಭಿಸಲಾಗುತ್ತಿದೆ.

Phone-In Program

ಇದೇ ಶುಕ್ರವಾರ 2026ರ ಏಪ್ರಿಲ್ 24 ರಂದು ರಂದು ಬೆಳಗ್ಗೆ 7.00ರಿಂದ 9.00 ಗಂಟೆಯವರೆಗೆ ಉತ್ತರ ನಗರ ಪಾಲಿಕೆಯಿಂದ ಮೊದಲ ವಾರದ ಫೋನ್-ಇನ್ ಕಾರ್ಯಕ್ರಮವು ಜರುಗಲಿದೆ. ನಾಗರಿಕರು ತಾವು ನಿತ್ಯ ಎದುರಿಸುವ ಸಮಸ್ಯೆಗಳನ್ನು ನೇರವಾಗಿ ಪಾಲಿಕೆ ಆಯುಕ್ತರು, ಅಧಿಕಾರಿಗಳು ಗಮನಕ್ಕೆ ತರಬಹುದು.

KEA AO Recruitment: ಕೃಷಿ ಇಲಾಖೆಯಲ್ಲಿ ಬರೋಬ್ಬರಿ 890 ಹುದ್ದೆಗಳ ಭರ್ತಿ, ಮೇ 10ರೊಳಗೆ ಅರ್ಜಿ ಸಲ್ಲಿಸಿ
KEA AO Recruitment: ಕೃಷಿ ಇಲಾಖೆಯಲ್ಲಿ ಬರೋಬ್ಬರಿ 890 ಹುದ್ದೆಗಳ ಭರ್ತಿ, ಮೇ 10ರೊಳಗೆ ಅರ್ಜಿ ಸಲ್ಲಿಸಿ

ನಾಗರಿಕರು ರಸ್ತೆ ಗುಂಡಿಗಳು ಹಾಗೂ ದುರಸ್ತಿ ಕಾರ್ಯಗಳು, ಬೀದಿ ದೀಪಗಳ ನಿರ್ವಹಣೆ, ಮನೆಮನೆ ಕಸ ಸಂಗ್ರಹಣೆ ಮತ್ತು ವಿಲೇವಾರಿ, ಅಪಾಯಕಾರಿಯಾದ ಮರಗಳು/ಕೊಂಬೆಗಳ ತೆರವು, ಸೊಳ್ಳೆ ನಿಯಂತ್ರಣ ಕ್ರಮಗಳು, ಬೀದಿ ನಾಯಿಗಳ ನಿಯಂತ್ರಣ, ಉದ್ಯಾನವನಗಳ ಅಭಿವೃದ್ಧಿ ಹಾಗೂ ಸಂರಕ್ಷಣೆ, ಅನಧಿಕೃತ ಬ್ಯಾನರ್ ಮತ್ತು ಪೋಸ್ಟರ್ ಗಳ ತೆರವು, ಪಾದಚಾರಿ ಮಾರ್ಗಗಳ ಮೇಲಿನ ಒತ್ತುವರಿ ನಿವಾರಣೆ, ಇ-ಖಾತಾ ಸಂಬಂಧಿತ ಸಮಸ್ಯೆಗಳು ಸೇರಿದಂತೆ ವಿವಿಧ ನಾಗರಿಕ ಸಮಸ್ಯೆಗಳ ಕುರಿತು ಆಯುಕ್ತರೊಂದಿಗೆ ನೇರವಾಗಿ ಮಾತನಾಡಬಹುದಾಗಿದೆ.

ಫೋನ್-ಇನ್ ಕಾರ್ಯಕ್ರಮದಲ್ಲಿ ಸ್ವೀಕರಿಸಲಾದ ಎಲ್ಲಾ ಅಹವಾಲುಗಳನ್ನು 'ಸಹಾಯ 2.0' ಪೋರ್ಟಲ್ ನಲ್ಲಿ ದಾಖಲಿಸಲಾಗುತ್ತದೆ. ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ತಕ್ಷಣವೇ ಕಳುಹಿಸಲಾಗುತ್ತದೆ. ದೂರು ದಾಖಲಾಗಿರುವ ವಿವರಗಳು ಹಾಗೂ ಸಂಬಂಧಿತ ಅಧಿಕಾರಿಗಳ ಮಾಹಿತಿಯನ್ನು ನಾಗರಿಕರಿಗೆ ಎಸ್.ಎಂ.ಎಸ್ ಮೂಲಕ ತಿಳಿಸಲಾಗುವುದು.

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಾಗರಿಕರು ಇಲ್ಲಿನ ನಿಯಂತ್ರಣ ಕೊಠಡಿಗೆ ಸಂಪರ್ಕಿಸಬೇಕು. ಮೊಬೈಲ್/ವಾಟ್ಸಪ್: 9480685705, ದೂರವಾಣಿ: 080-22975936 / 080-23636671 ಗೆ ಕರೆ ಮಾಡಿ ಮಾತನಾಡಬಹುದು. ಇದರೊಂದಿಗೆ ದೂರಗಳೇನಾದರೂ ಇದ್ದಲ್ಲಿ ನಾಗರಿಕರು 'ಸಹಾಯ 2.0' ಮೊಬೈಲ್ ಅಪ್ಲಿಕೇಶನ್ ಮೂಲಕವೂ ಸಲ್ಲಿಸಬಹುದೆಂದು ಪಾಲಿಕೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರು ನೀರಿನ ಅದಾಲತ್

ಪ್ರತಿ ಗುರುವಾರ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಸಾರ್ವಜನಿಕರು ಕುಂದು ಕೊರತೆ ಆಲಿಸಲು ಹಾಗೂ ಪರಿಹಾರಗಳನ್ನು ಒದಗಿಸಲು ನೀರಿನ ಅದಾಲತ್ ಹಮ್ಮಿಕೊಳ್ಳುತ್ತ ಬಂದಿದೆ. ಇದೇ ಗುರುವಾರ ಏಪ್ರಿಲ್ 23ರಂದು ಜಲಮಂಡಳಿ ವ್ಯಾಪ್ತಿಯ (ಆಗ್ನೇಯ-3), (ಆತ್ಮೀಯ-6) (ಪಶ್ಚಿಮ-1-3),(ವಾಯುವ್ಯ-5),(ಉತ್ತರ-2-3),(ದಕ್ಷಿಣ-1-3), (ನೈರುತ್ಯ-3), (ನೈರುತ್ಯ-6)ಮತ್ತು (ಪೂರ್ವ-2-4) ಉಪವಿಭಾಗಗಳಲ್ಲಿ ಅದಾಲತ್ ನಡೆಯಲಿದೆ.

ಅಂದು ಬೆಳಗ್ಗೆ 9.30 ರಿಂದ 11:00 ಗಂಟೆಯವರೆಗೆ ನಡೆಯಲಿರುವ ಅದಾಲತ್‌ನಲ್ಲಿ ಸಾರ್ವಜಕರ ನೀರಿನ ಬಿಲ್, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದುಕೊರತೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಅದಾಲತ್‌ ನಲ್ಲಿ ಪಾಲ್ಗೊಳ್ಳಬಹುದು. ಜಲಮಂಡಳಿ ಅಧ್ಯಕ್ಷರಾದ ಡಾ.ರಾಮ್ ಪ್ರಸಾತ್ ಮನೋಹರ್ ಅವರ ಅಧ್ಯಕ್ಷತೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರಗೊಳ್ಳಲಿವೆ.

ಸಂಪರ್ಕಿಸಬೇಕಾದ ಸಂಖ್ಯೆಗಳು

* ಸೆಂಟ್ರಲ್ ರೈಲು ರಸ್ತೆ, ಕೂಡ್ಲು ಜಿಎಲ್‌ಆರ್ (ಆಗ್ನೇಯ-3)- 96328 61112
* ಬಿಟಿಎಂ ಎರಡನೇ ಹಂತ, 9ನೇ ಮುಖ್ಯ ರಸ್ತೆ (ಆಗ್ನೇಯ-6)- 98454 44042
* ಡಾ.ಎಂ.ಸಿ ಮೋದಿ ರಸ್ತೆ, ರಾಜಾಜಿನಗರ (ಪಶ್ಚಿಮ-1-3)- 98454 44073
* ಇಎಂಐ ಲೇಔಟ್, ಹೆಸರಘಟ್ಟ ಮುಖ್ಯರಸ್ತೆ, ಏಳನೇ ಮುಖ್ಯರಸ್ತೆ (ವಾಯುವ್ಯ-5)-98459 67847
* ಪಿನಾಕಿನಿ ಭವನ, ದೊಡ್ಡಬಳ್ಳಾಪುರ ರಸ್ತೆ, ಮೇಜರ್ ಉನ್ನಿಕೃಷ್ಣನ್ ರಸ್ತೆ, ಯಲಹಂಕ (ಉತ್ತರ-2-3)- 95905 95245
* ಅಂಜನಾಪುರ 21ನೇ ಮುಖ್ಯ ರಸ್ತೆ (ದಕ್ಷಿಣ-1-3)- 98454 11488
* ಎಂಎನ್‌ಕೆ ಪಾರ್ಕ್, ಬಸವನಗುಡಿ (ನೈರುತ್ಯ-3)- 22945155
* ಪವನಪುರ ರಾಘವೇಂದ್ರ ಸ್ವಾಮಿ ದೇವಸ್ಥಾನ, ಲಿಂಗಧೀರನಹಳ್ಳಿ (ನೈರುತ್ಯ-6)- 98444 40129
* ಬಿ ಅಡ್ಡ ರಸ್ತೆ, ಪೂರ್ವ ಎನ್‌ಜಿಇಎಫ್ ಬಡಾವಣೆ ಕಸ್ತೂರಿನಗರ (ಪೂರ್ವ-2-4)- 25663688 ಗೆ ಸಂಪರ್ಕಿಸುವಂತೆ ಜಲಮಂಡಳಿ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+