Cristiano Ronaldo: ನಿವೃತ್ತಿ ಬಗ್ಗೆ ಕೊನೆಗೂ ಕ್ಲಾರಿಟಿ ಕೊಟ್ಟ ಫುಟ್‌ಬಾಲ್ GOAT

Cristiano Ronaldo: 2026ರ ಫಿಫಾ ವಿಶ್ವಕಪ್‌ ಟೂರ್ನಿಯಿಂದ ಬ್ರೆಜಿಲ್ ತಂಡವು ಹೊರಬಿದ್ದ ಬಳಿಕ ಆ ದೇಶದ ಸ್ಟಾರ್ ಫುಟ್‌ಬಾಲ್ ಆಟಗಾರ ನೇಮರ್ ಅವರು ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ವಿದಾರ ಘೋಷಿಸಿದ್ದರು. ಇದರ ಬೆನ್ನಲ್ಲೇ ವಿಶ್ವ ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ರೊನಾಲ್ಡೋ ಸಹ ಇದೇ ಹಾದಿ ಅನುಸರಿಸುವ ಹೇಳಿಕೆ ನೀಡಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ಪೋರ್ಚುಗಲ್ ಫುಟ್‌ಬಾಲ್ ತಂಡದ ನಾಯಕ ಮತ್ತು ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಕ್ರಿಸ್ಟಿಯಾನೊ ರೊನಾಲ್ಡೊ 2026ರ ಫಿಫಾ ವಿಶ್ವಕಪ್ ತಮ್ಮ ವೃತ್ತಿಜೀವನದ ಕೊನೆಯ ವಿಶ್ವಕಪ್ ಆಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದು ಇದೀಗ ಫುಟ್‌ಬಾಲ್‌ ವಲಯದಲ್ಲಿ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿದೆ.

Cristiano Ronaldo Confirms FIFA World Cup 2026 Will Be His Last Makes Emotional Retirement Hint

ಕ್ರಿಸ್ಟಿಯಾನೊ ರೊನಾಲ್ಡೊ ಹೇಳಿದ್ದೇನು?

ಸ್ಪೇನ್ ವಿರುದ್ಧದ ನಾಕೌಟ್ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ 41 ವರ್ಷದ ಕ್ರಿಸ್ಟಿಯಾನೊ ರೊನಾಲ್ಡೊ, ತಮ್ಮ ಕ್ರೀಡಾ ಭವಿಷ್ಯದ ಕುರಿತಾದ ದೀರ್ಘಕಾಲದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. 'ಇದು ನನ್ನ ಕೊನೆಯ ವಿಶ್ವಕಪ್ ಪಂದ್ಯಾವಳಿ ಎಂಬುದು ನಿಜ. ಹೀಗಾಗಿ ಈ ವಿಶ್ವಕಪ್‌ನ ಪ್ರತಿಯೊಂದು ಕ್ಷಣವನ್ನು ನಾನು ಪೂರ್ಣ ಪ್ರಮಾಣದಲ್ಲಿ ಆನಂದಿಸಲು ಬಯಸುತ್ತೇನೆ,' ಎಂದು ಅವರು ಭಾವನಾತ್ಮಕವಾಗಿ ಹೇಳಿದ್ದಾರೆ.

ಟೀಕೆಗಳಿಗೆ ತುರುಗೇಟು ನೀಡಿದ ರೊನಾಲ್ಡೊ

ಸತತವಾಗಿ ತಮ್ಮ ಫಾರ್ಮ್ ಮತ್ತು ವಯಸ್ಸಿನ ಕಾರಣಕ್ಕೆ ಎದುರಿಸುತ್ತಿದ್ದ ಟೀಕೆಗಳ ಬಗ್ಗೆ ಮಾತನಾಡಿದ ಅವರು, ಮಾಧ್ಯಮಗಳ ವಿರುದ್ಧ ಅಸಮಾಧಾನ ಹೊರಹಾಕಿದರು. 'ನಾನು ಮತ್ತೆ ಮೈದಾನಕ್ಕೆ ಬರಬಾರದು ಎಂದು ನೀವು ಬಯಸುತ್ತೀರಾ? ಆದರೆ ನಾನು ಯಾವಾಗ ನಿವೃತ್ತಿಯಾಗಬೇಕು ಎಂಬುದನ್ನು ನಾನೇ ನಿರ್ಧರಿಸುತ್ತೇನೆ, ಬೇರೆಯವರಲ್ಲ,' ಎಂದು ಹೇಳಿದರು.

ಅಲ್ಲದೆ ಪಂದ್ಯಾವಳಿಯಲ್ಲಿ ತಂಡ ಮುನ್ನಡೆದರೆ ಮಾಧ್ಯಮಗಳಿಗೆ ತಮ್ಮನ್ನು ಮತ್ತಷ್ಟು ಟೀಕಿಸಲು ಅವಕಾಶ ಸಿಗುತ್ತದೆ ಎಂದು ಹಾಸ್ಯಭರಿತವಾಗಿ ಪ್ರತಿಕ್ರಿಯಿಸಿದರು. ತಾವೊಬ್ಬ ಬದ್ಧತೆಯುಳ್ಳ ಆಟಗಾರನಾಗಿದ್ದು, ಮೈದಾನದಲ್ಲಿದ್ದರೂ ಇಲ್ಲದಿದ್ದರೂ ದೇಶಕ್ಕಾಗಿ ಆಡುವುದೇ ಮುಖ್ಯ ಎಂದು ಕ್ರಿಸ್ಟಿಯಾನೊ ರೊನಾಲ್ಡೊ ಸ್ಪಷ್ಟಪಡಿಸಿದರು.

ಅದ್ಭುತ ಫಾರ್ಮ್‌ನಲ್ಲಿರುವ ರೊನಾಲ್ಡೊ

ಐದು ಬಾರಿ ಬ್ಯಾಲನ್ ಡಿ ಓರ್ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಕ್ರಿಸ್ಟಿಯಾನೊ ರೊನಾಲ್ಡೊ ಅವರು, ಪ್ರಸಕ್ತ ವಿಶ್ವಕಪ್‌ನಲ್ಲೂ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಪೋರ್ಚುಗಲ್ ಆಡಿರುವ ಆರಂಭಿಕ ಪಂದ್ಯಗಳಲ್ಲಿ ಅವರು ಈಗಾಗಲೇ 3 ಪ್ರಮುಖ ಗೋಲುಗಳನ್ನು ಗಳಿಸಿದ್ದಾರೆ. ಕ್ರೊಯೇಷಿಯಾ ವಿರುದ್ಧದ ಪಂದ್ಯದಲ್ಲೂ ಪೆನಾಲ್ಟಿ ಮೂಲಕ ಗೋಲು ಬಾರಿಸಿ ಜಯ ತಂದುಕೊಟ್ಟಿದ್ದರು. ಆ ಮೂಲಕ ವಿಶ್ವಕಪ್ ಇತಿಹಾಸದಲ್ಲಿ ಗೋಲು ಗಳಿಸಿದ ಅತ್ಯಂತ ಹಿರಿಯ ಆಟಗಾರರಲ್ಲಿ ಒಬ್ಬರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

'ವಿಶ್ವಕಪ್ ಗೆಲ್ಲುವುದು ನನ್ನ ದೊಡ್ಡ ಕನಸು'

'ನಾವು ವಿಶ್ವಕಪ್ ಗೆಲ್ಲುವ ಉದ್ದೇಶ ಹೊಂದಿಲ್ಲದಿದ್ದರೆ ಇಲ್ಲಿಗೆ ಬರುತ್ತಲೇ ಇರಲಿಲ್ಲ. ಪೋರ್ಚುಗಲ್ ಪರ ವಿಶ್ವಕಪ್ ಮುಡಿಗೇರಿಸಿಕೊಳ್ಳುವುದು ನನ್ನ ದೊಡ್ಡ ಕನಸು,' ಎಂದು ರೊನಾಲ್ಡೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ 'ಈ ಪಂದ್ಯಾವಳಿ ಹೇಗೆಯೇ ಮುಗಿದರೂ, ತಾವು ಯಾವುದೇ ಪಶ್ಚಾತ್ತಾಪವಿಲ್ಲದೆ ನೂರಕ್ಕೆ ನೂರರಷ್ಟು ಪ್ರಾಮಾಣಿಕ ಮನಸ್ಸಾಕ್ಷಿಯೊಂದಿಗೆ ಜಾಗತಿಕ ವೇದಿಕೆಯಿಂದ ನಿರ್ಗಮಿಸುವುದಾಗಿ,' ಅವರು ಹೇಳಿದ್ದಾರೆ.

ಬ್ರೆಜಿಲ್‌ನ ನೇಮರ್ ಜೂನಿಯರ್ ಅವರ ನಿವೃತ್ತಿ ಬೆನ್ನಲ್ಲೇ ರೊನಾಲ್ಡೋ ಅವರ ಈ ಪ್ರಕಟಣೆಯು ಹೊರಬಿದ್ದಿದ್ದು, ಜಾಗತಿಕ ಫುಟ್‌ಬಾಲ್ ಇತಿಹಾಸದ ಸುವರ್ಣ ಯುಗವೊಂದು ಅಂತ್ಯದತ್ತ ಸಾಗುತ್ತಿರುವುದನ್ನು ಸೂಚಿಸುತ್ತಿದೆ. ಇದು ಅವರ ಕೊನೆಯ ವಿಶ್ವಕಪ್ ಆಗಿರುವುದರಿಂದ ಪೋರ್ಚುಗಲ್ ತಂಡವನ್ನು ಚಾಂಪಿಯನ್ ಮಾಡಲು ರೊನಾಲ್ಡೋ ತಮ್ಮ ಸಂಪೂರ್ಣ ಶಕ್ತಿಯನ್ನು ಧಾರೆ ಎರೆಯಲಿದ್ದಾರೆ ಎಂದು ಕ್ರೀಡಾ ಪ್ರೇಮಿಗಳು ನಿರೀಕ್ಷಿಸುತ್ತಿದ್ದಾರೆ. ಒಟ್ಟಿನಲ್ಲಿ ಇದೀಗ ಕ್ರಿಷ್ಟಿಯಾನೊ ರೊನಾಲ್ಡೊ ಅವರು ನೀಡಿರುವ ಹೇಳಿಕೆ ಫುಟ್‌ಬಾಲ್‌ ವಲಯದಲ್ಲಿ ಸಂಚಲನ ಸೃಷ್ಟಿಸಿರುವುದಂತೂ ನಿಜ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+