21 ಲಕ್ಷದ 27 ಸಾವಿರ ಬಿರಿಯಾನಿ ಕೆಜಿ ಅಕ್ಕಿ ಕದ್ದು ಪರಾರಿಯಾದ ಚಾಲಕ

ಚೆನ್ನೈ, ನವೆಂಬರ್ 22: ಟ್ರಕ್ ಚಾಲಕನೊಬ್ಬ 21 ಲಕ್ಷ ರೂಪಾಯಿ ಮೌಲ್ಯದ 27 ಸಾವಿರ ಕೆ.ಜಿ ಬಿರಿಯಾನಿ ಅಕ್ಕಿಯೊಂದಿಗೆ ಪರಾರಿಯಾಗಿರುವ ಘಟನೆ ಚೆನ್ನೈನ ತಿರುವತ್ತಿರಿಯೂರಿನಲ್ಲಿ ನಡೆದಿದೆ.

ಕೆ.ಕೆ.ಸಾಮಿ ಎಂಬಾತ 21 ಲಕ್ಷ ರೂಪಾಯಿ ಮೌಲ್ಯದ ಬಿರಿಯಾನಿ ಅಕ್ಕಿಯೊಂದಿಗೆ ಪರಾರಿಯಾಗಿದ್ದಾನೆ. ತಿರುವತ್ತಿರಿಯೂರಿನ ಅಣ್ಣಾಮಲೈ ನಗರದ ಮರತುಮುತ್ತು ಎಂಬುವರಿಗೆ ಸೇರಿದ ಟ್ರಕ್ ಇದಾಗಿದೆ.

ಸರಕು ಸಾಗಾಟ ವಾಹನವನ್ನು ಬಾಡಿಗೆಗೆ ನೀಡುವ ಸಾರಿಗೆ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಸಾಮಿ ಹಾಗೂ ಸಹೋದ್ಯೋಗಿ ಸುಂದರ್‌ರಾಜ್ ಎಂಬವರಿಗೆ 27 ಟನ್ ಬಿರಿಯಾನಿ ಅಕ್ಕಿಯನ್ನು ಪೂನಮಲೈ ಅಕ್ಕಿ ವ್ಯಾಪಾರಿಯೊಬ್ಬರಿಗೆ ಸರಬರಾಜು ಮಾಡುವಂತೆ ಸೂಚಿಸಲಾಗಿತ್ತು. ಟ್ರಕ್ ‌ಗೆ ಅಕ್ಕಿ ಲೋಡ್ ಮಾಡಿದ ಬಳಿಕ ಸಾಮಿ ಹಾಗೂ ಸುಂದರ್ ಮನೆಗೆ ಹೋಗಿ ರಾತ್ರಿ ಊಟ ಮುಗಿಸಿಕೊಂಡು ಬರುವಂತೆ ಸೂಚಿಸಲಾಗಿದೆ. ಮನೆ ಸನಿಹದಲ್ಲೇ ಇದ್ದ ಕಾರಣ ಸುಂದರ್ ಮನೆಗೆ ಹೋಗಿ ಊಟ ಮುಗಿಸಿಕೊಂಡು ಬಂದಾಗ ಸಾಮಿ ಹಾಗೂ ಟ್ರಕ್ ನಾಪತ್ತೆಯಾಗಿತ್ತು ಎಂದು ಪೊಲೀಸರು ವಿವರಿಸಿದ್ದಾರೆ.

Truck Driver Theft Biriyani Rice Worth 21 Lakhs In Chennai

ಟ್ರಕ್ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಚಾಲಕನ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ದುರದೃಷ್ಟಕ್ಕೆ ಟ್ರಕ್ ‌ಗೆ ಜಿಪಿಎಸ್ ವ್ಯವಸ್ಥೆಯನ್ನೂ ಅಳವಡಿಸಿರಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+