ಚೆನ್ನೈನಲ್ಲಿ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಯಿತು ಇನ್ ಫೋಸಿಸ್ ಉದ್ಯೋಗಿ ಶವ
ಚೆನೈ, ಮೇ 31: ಇಳಯರಾಜ ಅರುಣಾಚಲಂ ಎಂಬ ಮೂವತ್ತು ವರ್ಷದ ಇನ್ ಫೋಸಿಸ್ ಉದ್ಯೋಗಿಯ ಶವ ಇಲ್ಲಿನ ಮಹೀಂದ್ರಾ ವರ್ಲ್ಡ್ ನಲ್ಲಿರುವ ಇನ್ ಫೋಸಿಸ್ ಕಚೇರಿಯಲ್ಲಿ ಪತ್ತೆಯಾಗಿದೆ. ವಾಷ್ ರೂಮ್ ನಲ್ಲಿ ಶವ ಪತ್ತೆಯಾಗಿರುವುದಾಗಿ ವರದಿ ಆಗಿದೆ.
"ನಮ್ಮ ಉದ್ಯೋಗಿಯೊಬ್ಬರ ಶವ ಕಚೇರಿ ಕಟ್ಟಡದಲ್ಲಿ ಬುಧವಾರ ಬೆಳಗ್ಗೆ ಪತ್ತೆಯಾಗಿದೆ. ನಾವು ಆತನನ್ನು ಗುರುತಿಸಿದ್ದೇವೆ. ಪೊಲೀಸರ ವಿಚಾರಣೆ ನಡೆಯುತ್ತಿರುವುದರಿಂದ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ" ಎಂದು ಇನ್ ಫೋಸಿಸ್ ನ ವಕ್ತಾರ ತಿಳಿಸಿದ್ದಾರೆ.
ಡಾರ್ಮಿಟರಿಯಲ್ಲಿ ಇನ್ ಫೋಸಿಸ್ ಕಂಪೆನಿ ಇಳಯರಾಜನನ್ನು ಪತ್ತೆ ಮಾಡಿದೆ. ತಕ್ಷಣವೇ ಚೆಂಗಲ್ ಪೇಟ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆತ ಅದಾಗಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.[ಐಟಿ ಪಿಂಕ್ ಸ್ಲಿಪ್, ಇದು ದುಃಖಕರ ಎಂದ ಇನ್ಫಿ ಮೂರ್ತಿ]

ಇನ್ ಫೋಸಿಸ್ ಉದ್ಯೋಗಿ ಮೃತಪಟ್ಟಿದ್ದಾನೆ ಎಂಬ ಸುದ್ದಿ ನಮಗೆ ಬಂತು. ಅದೊಂದು ಡಾರ್ಮಿಟರಿ. ಉದ್ಯೋಗಿಗಳು ಅಲ್ಲಿ ವಿಶ್ರಾಂತಿ ಪಡೆಯುಬಹುದು. ಅಲ್ಲಿ ಬೆತ್ತಲೆಯಾಗಿದ್ದ ಆತನ ಮೇಲೆ ಎರಡು ಬೆಡ್ ಶೀಟ್ ಇತ್ತು ಎಂದು ಕಂಪೆನಿ ಅಧಿಕಾರಿ ಮಾಹಿತಿ ನೀಡಿದ್ದಾರೆ. ಕಾಂಚೀಪುರಂ ಎಸ್ ಪಿ ಈ ಬಗ್ಗೆ ಮಾತನಾಡಿ, ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.












Click it and Unblock the Notifications