ಶಾಲೆಯಲ್ಲಿ ವಿದ್ಯಾರ್ಥಿಗಳ ಎದುರೇ ಶಿಕ್ಷಕಿಯ ಬರ್ಬರ ಕೊಲೆ

ಮುಧುರೈ, ಜುಲೈ 23: ಶಾಲೆಯ ಮಕ್ಕಳ ಎದುರೇ ಶಿಕ್ಷಕಿ ಕೊಲೆಯಾಗಿರುವ ದುರ್ಘಟನೆ ಮಧುರೈನಲ್ಲಿ ನಡೆದಿದೆ.

ಶಾಲೆಯ ಕೊಠಡಿಯಲ್ಲೇ ಶಿಕ್ಷಕಿಗೆ ಚೂರಿ ಇದು ಆಕೆಯ ಪತಿಯೇ ಕೊಲೆ ಮಾಡಿದ್ದಾರೆ. ಶಿಕ್ಷಕಿಯನ್ನು ಜಿ ರತಿದೇವಿ(35) ಎಂದು ಗುರುತಿಸಲಾಗಿದೆ. ಅವರು ಕರಿಯಪಟ್ಟಿಯ ಚಿತನೆಂತಲ್‌ ನಿವಾಸಿಯಾಗಿದ್ದಾರೆ. ಅವರು ಪಿಕೆಎನ್ ಬಾಯ್ಸ್‌ ಹೈಸ್ಕೂಲ್‌ನಲ್ಲಿ 2019ರ ಜೂನ್ 1ರಿಂದ ಸಮಾಜ ವಿಜ್ಞಾನ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಆಕೆಯ ಪತಿ ಗುರು ಮುನೇಶ್ವರ ನನ್ನು ಪೊಲೀಸರು ಬಂಧಿಸಿದ್ದಾರೆ. ಎಂಟನೇ ತರಗತಿ ಕೊಠಡಿ ಎದುರೇ ಶಿಕ್ಷಕಿಯನ್ನು ಕೊಲೆ ಮಾಡಲಾಗಿದೆ. ಚೆನ್ನೈನಲ್ಲಿ ಸಿವಿಲ್ ಎಂಜಿನಿಯರ್ ಆಗಿದ್ದ ವ್ಯಕ್ತಿಯನ್ನು ರತಿದೇವಿ ಮದುವೆಯಾಗಿದ್ದರು. ಕಳೆದ ಎಂಟು ವರ್ಷಗಳ ಹಿಂದೆ ರತಿ ದೇವಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಬಳಿಕ ಅವರು ತವರು ಮನೆಯಲ್ಲೇ ವಾಸವಾಗಿದ್ದರು.

Teacher stabbed to death infront of students

ಗುರು ಏಕಾಏಕಿ ಶಾಲೆಯ ಒಳ ನುಗ್ಗಲು ಯತ್ನಿಸಿದ್ದಾನೆ, ಆದರೆ ವಾಚ್‌ಮನ್ ಅವರನ್ನು ತಡೆದಿದ್ದಾರೆ. ಬಳಿಕ ಆತನನ್ನು ತಳ್ಳಿಕೊಂಡು ಒಳನಡೆದ ಗುರು ಮಕ್ಕಳ ಎದುರೇ ಶಿಕ್ಷಕಿಯ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ. ರಕ್ತದ ಮಡುವಿನಲ್ಲಿದ್ದ ಶಿಕ್ಷಕಿ ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿದ್ದಾರೆ.

ರತಿದೇವಿಗೆ ಮನೆಗೆ ಬರುವಂತೆ ಗುರು ಪದೇ ಪದೇ ಪೀಡಿಸುತ್ತಿದ್ದ, ಒಂದೊಮ್ಮೆ ಒತ್ತಾಯ ಮಾಡಿದರೆ ಪೊಲೀಸರಿಗೆ ದೂರು ನೀಡುವುದಾಗಿ ಆಕೆ ಬೆದರಿಸಿದ್ದರು. ಇದಕ್ಕೆ ಕೋಪಗೊಂಡ ಗುರು ಆಕೆಯನ್ನು ಕೊಲ್ಲಲು ಹೊಂಚು ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+