ತಮಿಳುನಾಡಿದ ಪೊಲೀಸ್ ಅಧಿಕಾರಿಯ 'ಸಿಂಗಂ' ಆವಾಜ್ ವೈರಲ್
ಚೆನ್ನೈ, ಜನವರಿ 05: ಬಸ್‌ಗೆ ಕಲ್ಲು ಹೊಡೆಯಲು ಮುಂದಾದ ಪುಂಡ ಪ್ರತಿಭಟನಾಕಾರರ ಗುಂಪನ್ನು ತಡೆದ ತಮಿಳುನಾಡಿನ ಪೊಲೀಸ್ ಅಧಿಕಾರಿಯೊಬ್ಬರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರು ಪ್ರವೇಶಿಸಿದ್ದನ್ನು ತಮಿಳುನಾಡಿನ ಕಳಿಯಕ್ಕಾವಿಳೈ ಎಂಬಲ್ಲಿ ಪ್ರತಿಭಟನೆ ಮಾಡುತ್ತಿದ್ದ ಗುಂಪೊಂದು ಕೇರಳ ರಾಜ್ಯಕ್ಕೆ ಸೇರಿದ ಬಸ್ ಮೇಲೆ ದಾಳಿ ಮಾಡಿ ಕಲ್ಲು ತೂರಾಡಲು ಮುಂದಾಯಿತು.
ತಕ್ಷಣವೇ ಧಾವಿಸಿದ ಪೊಲೀಸರು ಪ್ರತಿಭಟನಾಕಾರರಿಂದ ಧ್ವಂಸವಾಗಲಿದ್ದ ಬಸ್ ಅನ್ನು ರಕ್ಷಿಸಿದರು. ಆದರೆ ಪ್ರತಿಭಟನಾಕಾರರ ಮೇಲೆ ಎರಗಿ ಬಿದ್ದ ಪೊಲೀಸ್ ಅಧಿಕಾರಿ ಮೋಹನ್ ಅಯ್ಯರ್ ಸಿನಿಮೀಯ ಶೈಲಿಯಲ್ಲಿ ಪ್ರತಿಭಟನಾಕಾರರ ಗುಂಪುಗೆ ಆವಾಜ್ ಹೊಡೆದಿದ್ದಾರೆ.

'ಬನ್ನಿ ಮುಟ್ಟಿ ಬನ್ನಿ, ನಿಮಗೆ ತಾಕತ್ ಇದ್ದರೆ ಬಸ್ಸನ್ನು ಮುಟ್ಟಿ ನೋಡುತ್ತೀನಿ' ಎಂದು ಥೇಟ್ ಸಿಂಗಂ ಶೈಲಿಯಲ್ಲಿ ಒಬ್ಬರೇ ನಿಂತು ಪ್ರತಿಭಟನಾಕಾರರಿಗೆ ಸವಾಲು ಹಾಕಿದ್ದಾರೆ.
ಮೋಹನ್ ಅಯ್ಯರ್ ಪ್ರತಿಭಟನಾಕಾರರಿಗೆ ಆವಾಜ್ ಹಾಕುತ್ತಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಪೊಲೀಸ್ ಎಸ್‌ಐರ ಧೈರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಕೇರಳ ಸಂಚಾರ ಇಲಾಖೆ ಸಹ ಮೋಹನ್ ಅಯ್ಯರ್‌ಗೆ ಧನ್ಯವಾದ ಹೇಳಿದೆ. ಜೊತೆಗೆ ನಗದು ಬಹುಮಾನವನ್ನೂ ಸಹ ನೀಡುವುದಾಗಿ ಹೇಳಿದೆ.












Click it and Unblock the Notifications