ಚಲಿಸುತ್ತಿದ್ದ ರೈಲಿನ ಪಕ್ಕದ ಕಂಬಿ ತಗುಲಿ ನಾಲ್ವರು ಪ್ರಯಾಣಿಕರು ಸಾವು

ಚೆನ್ನೈ, ಜುಲೈ 24: ರೈಲ್ವೇ ಹಳಿಯ ಪಕ್ಕದಲ್ಲಿದ್ದ ಕಬ್ಬಿಣದ ಕಂಬಿಗಳು ಚುಚ್ಚಿದ ಪರಿಣಾಮ ರೈಲಿನಲ್ಲಿದ್ದ ನಾಲ್ವರು ಪ್ರಯಾಣಿಕರು ಮೃತರಾದ ಭೀಕರ ಘಟನೆ ತಮಿಳುನಾಡಿನ ಚೆನ್ನೈ ಬಳಿ ನಡೆದಿದೆ.

ಸ್ಥಳೀಯ ರೈಲಿನಲ್ಲಿ ಸಾಕಷ್ಟು ಜನ ತುಂಬಿದ್ದರಿದ ಕೆಲವರು ರೈಲಿನ ಬಾಗಿಲಿನಲ್ಲಿಯೇ ಜೋತುಬಿದ್ದು ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ಚೆನ್ನೈನ ಸೈಂಟ್ ಥಾಮಸ್ ಮೌಂಟ್ ಎಂಬಲ್ಲಿ ರೈಲ್ವೇ ಟ್ರ್ಯಾಕಿನ ಪಕ್ಕದಲ್ಲಿದ್ದ ಕಂಬಿಗಳು ಜೋರಾಗಿ ಚಲಿಸುತ್ತಿದ್ದ ರೈಲಿನ ಬಾಗಿಲಿನಲ್ಲಿ ನಿಂತಿದ್ದ್ ಪ್ರಯಾಣಿಕರಿಗೆ ಬಡಿದಿದ್ದು, ಇದರಿಂದ ನಾಲ್ವರು ಮೃತಪಟ್ಟಿದ್ದಾರೆ.

10 ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಗಳು ತಿಳಿಸಿವೆ.

Tamil Nadu: 4 passengers on a local train died hit by iron poles besides railway track

ಇತ್ತೀಚೆಗಷ್ಟೇ ಮುಂಬೈಯ ಪಾನ್ವೆಲ್ ರೈಲ್ವೆ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ರೈಲಿಗೆ ಹತ್ತುವುದಕ್ಕೆಂದು ತೆರಳಿ ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ರೈಲಿನಲ್ಲಿ ತುಂಬಿ ತುಳುಕುವ ಜನಸಂದಣಿ ಮತ್ತು ಪ್ರಯಾಣಿಕರ ಭಂಡ ಧೈರ್ಯದಿಂದ ಇಂಥ ಘಟನೆಗಳು ನಡೆಯುತ್ತಲೇ ಇವೆ.

ತಮಿಳುನಾಡಿನಲ್ಲಿ ಇಂದು ನಡೆದ ಘಟನೆ ಸಹ ಇದಕ್ಕೊಂದು ಉದಾಹರಣೆ. ಈ ಘಟನೆ ಕುರಿತಂತೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+