ಖ್ಯಾತ ತಮಿಳು ಚಿತ್ರ ನಿರ್ದೇಶಕ ಕೆ. ಬಾಲಚಂದರ್ ವಿಧಿವಶ

ಚೆನ್ನೈ, ಡಿ. 23: ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಕೆ. ಬಾಲಚಂದರ್ ಮಂಗಳವಾರ ಸಂಜೆ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.

ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಲಚಂದರ್ ಅವರನ್ನು ಕಳೆದ ಸೋಮವಾರವಷ್ಟೇ ಚೆನ್ನೈ ನಗರದಲ್ಲಿರುವ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

bala

ತಮಿಳು ಚಿತ್ರರಂಗದಲ್ಲಿ 'ಐಯಕುನಾರ್ ಸಿಗಾರಮ್' ಎಂದೇ ಬಾಲಚಂದರ್ ಜನಪ್ರಿಯತೆ ಪಡೆದಿದ್ದಾರೆ. ಅವರಿಗೆ ಭಾರತೀಯ ಚಿತ್ರರಂಗದಲ್ಲಿ ಅತ್ಯುನ್ನತ ಗೌರವ ಎನ್ನಿಸಿಕೊಂಡಿರುವ 'ದಾದಾಸಾಹೇಬ್ ಫಾಲ್ಕೆ' ಪ್ರಶಸ್ತಿಯನ್ನು 2010ರಲ್ಲಿ ನೀಡಲಾಗಿದೆ.

100ಕ್ಕೂ ಹೆಚ್ಚು ಚಲನಚಿತ್ರಗಳಿಗೆ ಬಾಲಚಂದರ್ ಆಕ್ಷನ್, ಕಟ್ ಹೇಳಿದ್ದಾರೆ. 1960ರಿಂದ 1980ರ ವರೆಗೆ ಮೂರು ದಶಕಗಳ ಕಾಲ ನಿರಂತರವಾಗಿ ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ.

ತಮ್ಮ 'ಕವಿತಾಲಯ ಪ್ರೊಡಕ್ಷನ್ಸ್' ಬ್ಯಾನರ್‌ನಡಿ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅಲ್ಲದೆ, ಭಾರತದ ಇಬ್ಬರು ಮಹಾನ್ ನಟರಾದ ಕಮಲ್ ಹಾಸನ್ ಹಾಗೂ ರಜನಿಕಾಂತ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಹೆಗ್ಗಳಿಕೆಯೂ ಬಾಲಚಂದರ್ ಹೆಸರಿನಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+