ತಮಿಳುನಾಡು ವಿಧಾನಸಭೆ ಕದನಕ್ಕೆ ಸೂಪರ್ ಸ್ಟಾರ್ ರಜನಿ ಎಂಟ್ರಿ!

ಚೆನ್ನೈ, ಏಪ್ರಿಲ್ 19: ಅಭಿಮಾನಿಗಳ ಪಾಲಿನ ಆರಾಧ್ಯ ದೈವ ಸೂಪರ್ ಸ್ಟಾರ್ ಬಿರುದಾಂಕಿತ ರಜನಿಕಾಂತ್ ಅವರು ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಸದ್ಯ ನಡೆದಿರುವ ಲೋಕಸಭೆ ಚುನಾವಣೆ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ರಜನಿಕಾಂತ್ ಅವರು ಈ ರೀತಿ ಉತ್ತರಿಸಿದ್ದಾರೆ. ಎಐಎಡಿಎಂಕೆಗೆ ಒಂದು ವೇಳೆ ಮೇ 23ರಂದು ಬಹುಮತ ಸಿಗದಿದ್ದರೆ ಏನು ಮಾಡುತ್ತೀರಿ, ಸರ್ಕಾರ ಪತನವಾದರೆ ನಿಮ್ಮ ನಡೆಯೇನು? ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ? ಎಂಬ ಪ್ರಶ್ನೆಗೆ ರಜನಿ ಉತ್ತರಿಸಿ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಾಗಿ ಹೇಳಿದ್ದಾರೆ.

Superstar Rajinikanth says he will contest Tamil Nadu Assembly elections

ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಅಧಿಕಾರಕ್ಕೆ ಬರುತ್ತಾರೆಯೇ? ಎಂಬ ಪ್ರಶ್ನೆಗೆ ಉತ್ತರಿಸಿ, ಮೇ 23ಕ್ಕೆ ನಿಮಗೆ ಉತ್ತರ ಸಿಗಲಿದೆ ಎಂದಿದ್ದಾರೆ.

ತಮಿಳುನಾಡಿನಲ್ಲಿ ಲೋಕಸಭೆ ಚುನಾವಣೆ ಜೊತೆಗೆ 18 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಏಪ್ರಿಲ್ 18ರಂದು ನಡೆದಿದ್ದು, ಮೇ23ರಂದು ಫಲಿತಾಂಶ ಹೊರಬರಲಿದೆ.

ಈ ಬಾರಿಯ ಲೋಕಸಭೆ ಚುನಾವಣೆ ವೇಳೆಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರು ಯಾವ ಪಕ್ಷದ ಪರ ನಿಲ್ಲಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಆದರೆ, ಯಾರ ಪರವೂ ನಿಲ್ಲದೆ, ತಟಸ್ಥವಾಗಿರುವ ರಜನಿ ಅವರು ರಾಜಕೀಯ ಸಂಘಟನೆ ಬಗ್ಗೆ ಘೋಷಿಸಿದರೂ ಸಕ್ರಿಯವಾಗಿಲ್ಲ.

ಕೆಲ ವರ್ಷಗಳ ಹಿಂದೆ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ರಾಜಕೀಯ ಸಂಘಟನೆ ಆರಂಭಿಸಿದ ರಜನಿಕಾಂತ್ ಅವರು ಮುಂದಿನ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನೀರಿಕ್ಷೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+