2015-16ನೇ ಸಾಲಿನ ಎಬಿಸಿ ಅಧ್ಯಕ್ಷರಾಗಿ ಶಶಿಧರ್ ಸಿನ್ಹಾ ಆಯ್ಕೆ
ಚೆನ್ನೈ, ಸೆಪ್ಟೆಂಬರ್, 15 : ಶಶಿಧರ್ ನರೈನ್ ಸಿನ್ಹಾ ಅವರನ್ನು 2015-16ನೇ ಸಾಲಿನ ಎಬಿಸಿ (ಆಡಿಟ್ ಬ್ಯೂರೋ ಆಫ್ ಸರ್ಕ್ಯೂಲೇಷನ್)ಯ ನಿರ್ದೇಶಕರಾಗಿ ಆಯ್ಕೆ ಮಾಡಲಾಗಿದ್ದು, ಮೊದಲು ಐಪಿಜಿ ಮೀಡಿಯಾ ಬ್ರ್ಯಾಂಡ್ಸ್ ಇಂಡಿಯಾ ಕಂಪನಿಯ ಸಿಇಓ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಎಬಿಸಿ ಸಂಸ್ಥೆಯ 67ನೇ ವಾರ್ಷಿಕ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, 2016ನೇ ಸಾಲಿನ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಅಧ್ಯಕ್ಷರಾಗಿ ಶಶಿಧರ್ ಸಿನ್ಹಾ, ಉಪಾಧ್ಯಕ್ಷರಾಗಿ ಈ ನಾಡು ಸಂಸ್ಥೆಯ ಐ. ವೆಂಕಟೇಶ್ ರವರನ್ನು ಆಯ್ಕೆ ಮಾಡಲಾಗಿದೆ.[ಬೆಂಗಳೂರಿನ ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ಶ್ರೀಧರ್ ಅವಿರೋಧ ಆಯ್ಕೆ]

ಶಶಿಧರ ಸಿನ್ಹಾ ಅವರ ಕಿರು ಪರಿಚಯ:
ಶಶಿಧರ ಸಿನ್ಹಾ ಅವರು ಭಾರತದ ಐಪಿಜಿ ಮೀಡಿಯಾ ಬ್ರ್ಯಾಂಡ್ಸ್ , ಲೊಡೆಸ್ಟಾರ್ ಯೂನಿವರ್ಸಲ್ ಆಫ್ ಇಂಡಿಯಾದಲ್ಲಿ ಸಿಇಓ ಆಗಿ ಕಾರ್ಯ ನಿರ್ವಹಿಸಿದ್ದಾರೆ. 2014ರಲ್ಲಿ ಅಡ್ವಟೈಸಿಂಗ್ ಸ್ಟಾಂಡರ್ಡ್ಸ್ ಕೌನ್ಸಿಲ್ ಆಫ್ ಇಂಡಿಯಾದ ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದಾರೆ. ಮಾಧ್ಯಮ ನಿರ್ವಹಣೆ ಮತ್ತು ಬೆಳವಣಿಗೆಗೆ ಸಂಬಂಧಿಸಿದಂತೆ 26 ವರ್ಷದ ಅನುಭವ ಹೊಂದಿದ್ದಾರೆ.
ಎಬಿಸಿ ಸಂಸ್ಥೆಯ 2015-16 ನೇ ಸಾಲಿನ ಸದಸ್ಯರ ಪಟ್ಟಿ :
ಜಾಹೀರಾತು ಏಜೆನ್ಸಿ ಪ್ರತಿನಿಧಿಗಳು : ಶಶಿಧರ್ ಸಿನ್ಹಾ, ಐಪಿಜಿ ಮೀಡಿಯಾ ಬ್ರ್ಯಾಂಡ್ಸ್- ಅಧ್ಯಕ್ಷ, ಮಧುಕರ್ ಕಾಮತ್- ಮುದ್ರಾ ಕಮ್ಯೂನಿಕೇಷನ್ ಪ್ರೈವೇಟ್ ಲಿಮಿಟೆಡ್, ಶ್ರೀನಿವಾಸನ್ ಕೆ. ಸ್ವಾಮಿ- ಗೌರವ ಖಜಾಂಚಿ, ಬಿಬಿಡಿಒ ಪ್ರೈವೇಟ್ ಲಿಮಿಟೆಡ್, ಸಿವಿಲ್ ಶ್ರೀನಿವಾಸ್, ಗ್ರೂಪ್ ಆಫ್ ಎಂ ಮೀಡಿಯಾ ಇಂಡಿಯಾ ಪ್ರೈವೇಟ್ ಲಿಮಿಟೆಡ್.
ಪ್ರಕಾಶಕರ ಪ್ರತಿನಿಧಿಗಳು : ಐ. ವೆಂಕಟೇಶ್, ಉಷೋದಯ ಎಂಟರ್ ಪ್ರೈಸಸ್ ಲಿಮಿಟೆಡ್,-ಉಪಾಧ್ಯಕ್ಷರು, ಅಮಿತ್ ಮ್ಯಾಥ್ಯೂ, ಮಲಯಾಳ ಮನೋರಮಾ, ಶೈಲೇಷ್ ಗುಪ್ತಾ, ಜಾಗರಣ್ ಪ್ರಕಾಶನ್ ಲಿಮಿಟೆಡ್, ಹೋರ್ಮುಸ್ಜಿ ಎನ್. ಕಾಮಾ, ದಿ ಬಾಂಬೆ ಸಮಾಚಾರ್ ಪ್ರೈ. ಲಿ, ದೇವೇಂದ್ರ ವಿ. ದಾದ್ರಾ, ಲೋಕಮತ್ ಮೀಡಿಯಾ ಪ್ರೈ.ಲಿಮಿಟೆಡ್, ಸಂಜೀವ್ ವೊರಾ, ಬೆನೆಟ್, ಕೋಲ್ ಮನ್ ಆಂಡ್ ಕಂಪನಿ ಲಿಮಿಟೆಡ್, ಬಿನೋಯ್ ರಾಯ್ ಚೌದರಿ, ಎಚ್ ಟಿ ಮೀಡಿಯಾ ಲಿ. ಚಮದನ್ ಮಜುಂದಾರ್ ಎಬಿಸಿ ಪ್ರೈ.ಲಿ
ಜಾಹೀರಾತುದಾರರ ಪ್ರತಿನಿಧಿಗಳು : ಹೇಮಂತ್ ಮಲ್ಲಿಕ್, ಐಟಿಸಿ ಲಿಮಿಟೆಡ್- ಗೌರವ ಕಾರ್ಯದರ್ಶಿ, ದೇಬ್ರತಾ ಮುಖರ್ಜಿ-ಕೋಕಾ ಕೋಲಾ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಸಂದೀಪ್ ಟಾರ್ಕಾಸ್, ಕಾರ್ಯದರ್ಶಿ- ಪ್ಯೂಚರ್ ರಿಟೇಲ್ ಲಿ, ಹರ್ಮುಜ್ದ್ ಮಸಾನಿ- ಪ್ರಧಾನ ಕಾರ್ಯದರ್ಶಿ
#industryupdate Shashidhar Sinha elected chairman of ABC: http://t.co/o3dOzUDnD5... http://t.co/Crz2gROJhO #adgencyupdate
— NitinBhatia (@nitinSPEAKs) September 10, 2015 











Click it and Unblock the Notifications