ಪೊಲ್ಲಾಚಿ ಕಿರುಕುಳ ಕೇಸ್: ಸಿಬಿಐ ಕಚೇರಿಯಲ್ಲಿ ನಕ್ಕೀರನ್ ಗೋಪಾಲ್

ಚೆನ್ನೈ, ಮೇ 22:ತಮಿಳುನಾಡು ಬೆಚ್ಚುವಂತೆ ಮಾಡಿರುವ ಪೊಲ್ಲಾಚಿಯ ಲೈಂಗಿಕ ಕಿರುಕುಳ ಪ್ರಕರಣದ ತನಿಖೆಯನ್ನು ಸಿಬಿಐ ಚುರುಕುಗೊಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಿಸಿಕೊಂಡು, ಆರೋಪಿಗಳ ವಿರುದ್ಧ ಎರಡು ಎಫ್ಐಆರ್ ಹಾಕಲಾಗಿದೆ. ಈ ನದುವೆ ಸಿಬಿಐ ತಂಡವು ನಕ್ಕೀರನ್ ಮ್ಯಾಗಜೀನ್ ಸಂಪಾದಕ ಗೋಪಾಲ್ ಅವರಿಗೆ ಸಮನ್ಸ್ ಜಾರಿ ಮಾಡಿದ್ದು, ಕುತೂಹಲ ಮೂಡಿಸಿತ್ತು.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಚೆನ್ನೈಯಲ್ಲಿರುವ ಸಿಬಿಐ ಕಚೇರಿಗೆ ನಕ್ಕೀರನ್ ಗೋಪಾಲ್ ಅವರು ಆಗಮಿಸಿ, ಸಿಬಿಐ ತಂಡ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೋಪಾಲ್ ಅವರು, ಈ ಪ್ರಕರಣದಲ್ಲಿ ಅಡಗಿರುವ ವ್ಯಕ್ತಿಗಳ ಹೆಸರುಗಳು ಬಹಿರಂಗಗೊಳ್ಳಲಿ, ಸಂತ್ರಸ್ತರಿಗೆ ನ್ಯಾಯ ಸಿಗಲಿ ಎಂದಿದ್ದಾರೆ. ಸಿಬಿಐ ತಂಡದ ತನಿಖಾಧಿಕಾರಿಗಳು ಸರಿಯಾದ ಹಾದಿಯಲ್ಲಿ ಪ್ರಕರಣದ ತನಿಖೆ ಮುಂದುವರೆಸಿದ್ದಾರೆ. ನನಗೆ ತಿಳಿದಿರುವ ಮಾಹಿತಿಯನ್ನು ಹಂಚಿಕೊಂಡಿದ್ದೇನೆ ಎಂದರು.

ಪೊಲ್ಲಾಚಿ ಲೋಕಸಭೆ ಚುನಾವಣೆ ಫಲಿತಾಂಶ

ಪೊಲ್ಲಾಚಿ ಪ್ರಕರಣದ ತನಿಖೆ ಪ್ರಗತಿ ಕಾಣುತ್ತಿಲ್ಲ, ಸಂತ್ರಸ್ತರ ಹೆಸರನ್ನು ಬಹಿರಂಗಪಡಿಸಲಾಗಿದೆ ಎಂದು ನಟ ಕಮಲ್ ಹಾಸನ್, ಡಿಎಂಕೆ ಮುಖಂಡರು ಆಡಳಿತಾರೂಢ ಎಐಎಡಿಎಂಕೆ ವಿರುದ್ಧ ತಿರುಗಿ ಬಿದ್ದಿದ್ದರು.

Pollachi case: Nakeeran Gopal appears before CBI

ಲೈಂಗಿಕ ಕಿರುಕುಳ, ಬೆದರಿಕೆ, ಕಿಡ್ನಾಪ್ ಕೇಸ್ ಬಗ್ಗೆ ಸ್ಥಳೀಯ ಮಾಧ್ಯಮಗಳಲ್ಲಿ ಬಂದ ವರದಿ ಆಧಾರದ ಮೇಲೆ ಎಚ್ಚೆತ್ತುಕೊಂಡ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಶಬರಿರಾಜನ್, ತಿರುನಾವುಕ್ಕರಸು, ಸತೀಶ್ ಹಾಗೂ ವಸಂತ್ ಕುಮಾರ್ ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ನಾಲ್ವರು ಇತರರ ಜತೆ ಸೇರಿ ಇಂಥದ್ದೇ ದೊಡ್ಡ ದಂಧೆ ನಡೆಸುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿ, ತನಿಖೆ ಕೈಗೊಂಡ ಪೊಲೀಸರು, ಐಪಿಸಿ ಸೆಕ್ಷನ್ 354ಎ, 394, ಐಟಿ ಕಾಯ್ದೆ 66ಇ, ತಮಿಳುನಾಡಿನ ಮಹಿಳೆಯರ ವಿರುದ್ಧ ಲೈಂಗಿಕ ಕಿರುಕುಳ ತಡೆ ಕಾಯ್ದೆ ಸೆಕ್ಷನ್ 4ರ ಅಡಿಯಲ್ಲಿ ಎಫ್ಐಆರ್ ಹಾಕಿದ್ದಾರೆ. ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿತರು ಜೈಲಿನಲ್ಲಿದ್ದಾರೆ.

ತಮಿಳುನಾಡಿನ ಕೊಯಮತ್ತೂರಿನಿಂದ ದಕ್ಷಿಣಕ್ಕೆ ನಲವತ್ತೈದು ಕಿ.ಮೀ. ದೂರದಲ್ಲಿದೆ ಪೊಲ್ಲಾಚಿಯಲ್ಲಿ ಫೆಬ್ರವರಿ 26ರಂದು ನಾಲ್ಕು ಮಂದಿಯ ಗುಂಪೊಂದು 19 ವರ್ಷ ವಯಸ್ಸಿನ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು.

ಪೊಲ್ಲಾಚಿಯ ಈ ಕಾಮುಕರನ್ನು ಬಂಧಿಸಿದ ಮೇಲೆ ವಿಚಾರಣೆ ವೇಳೆ ಈ ಗ್ಯಾಂಗ್ ನಿಂದ 50ಕ್ಕೂ ಅಧಿಕ ಮಹಿಳೆಯರ ಮೇಲೆ ದೌರ್ಜನ್ಯವಾಗಿರುವ ಬಗ್ಗೆ ಮಾಹಿತಿ ಸಿಕ್ಕಿತು. ಸುಮಾರು ಏಳು ವರ್ಷಗಳ ಕಾಲ ಈ ರೀತಿ ದೌರ್ಜನ್ಯ ಎಸಗಿ, ವಿಡಿಯೋ ಮಾಡಿ, ಸಂತ್ರಸ್ತರನ್ನು ಪೀಡಿಸಿ, ಬೆದರಿಸಿ, ಹಣ ಗಳಿಸುತ್ತಿದ್ದರು ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+