ನಟಿಯ ನಂಬರ್‌ಅನ್ನು ಅಶ್ಲೀಲ ಗ್ರೂಪ್‌ನಲ್ಲಿ ಹಂಚಿದ ಪಿಜ್ಜಾ ಡೆಲಿವರಿ ಬಾಯ್

ಚೆನ್ನೈ, ಫೆಬ್ರವರಿ 28: ತಮ್ಮ ಮೊಬೈಲ್ ಫೋನ್ ನಂಬರ್‌ಅನ್ನು ಪಿಜ್ಜಾ ಡೆಲಿವರಿ ಬಾಯ್ ಅಶ್ಲೀಲ ವಾಟ್ಸಾಪ್‌ ಗ್ರೂಪ್‌ಗಳಿಗೆ ಕೊಟ್ಟಿದ್ದಾನೆ ಎಂದು ನಟಿ ಗಾಯತ್ರಿ ಸಾಯಿ ಆರೋಪಿಸಿದ್ದಾರೆ.

ಅಶ್ಲೀಲ ಚಿತ್ರಗಳನ್ನು ಹಂಚಿಕೊಳ್ಳುವ ಹಾಗೂ ಅಶ್ಲೀಲ ವಿಚಾರಗಳನ್ನು ಮಾತನಾಡುವ ಕೆಲವು ವಾಟ್ಸಾಪ್ ಗ್ರೂಪ್‌ಗಳಿಗೆ ತಮ್ಮ ಮೊಬೈಲ್‌ ನಂಬರ್‌ಅನ್ನು ಡೊಮಿನೋಸ್ ಪಿಜ್ಜಾದ ಡೆಲಿವರಿ ಬಾಯ್ ನೀಡಿದ್ದಾನೆ ಎಂದು ತಮಿಳು ನಟಿ ಗಾಯತ್ರಿ ಪೊಲೀಸರಿಗೆ ದೂರು ನೀಡಿದ್ದಾರೆ.

1990ರಲ್ಲಿ ತೆರೆಕಂಡ ಮಣಿರತ್ನಂ ನಿರ್ದೇಶನದ 'ಅಂಜಲಿ' ತಮಿಳು ಚಿತ್ರದಲ್ಲಿ ಬಾಲನಟಿಯಾಗಿ ನಟಿಸುವ ಮೂಲಕ ಗಾಯತ್ರಿ ಸಾಯಿ ಅವರು ಚಿತ್ರರಂಗವನ್ನು ಪ್ರವೇಶಿಸಿದ್ದರು. ಅದರ ನಂತರ ಅವರು ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಚೆನ್ನೈನಲ್ಲಿರುವ ತಮ್ಮ ಮನೆಗೆ ಡೊಮಿನೊಸ್ ಮೂಲಕ ಪಿಜ್ಜಾ ತರಿಸಿದ್ದರು. ಆಗ ಡೆಇಲಿವರ ಬಾಯ್ ತಮ್ಮ ಮೊಬೈಲ್ ನಂಬರ್‌ಅನ್ನು ಕೆಟ್ಟ ಗುಂಪುಗಳಲ್ಲಿ ಹಂಚಿಕೊಂಡಿದ್ದಾನೆ. ಇದರಿಂದ ತಮಗೆ ಅಶ್ಲೀಲ ಸಂದೇಶಗಳು, ಕರೆಗಳು ಬರುತ್ತಿವೆ. ಪಿಜ್ಜಾ ಡೆಲಿವರಿ ಯುವಕನ ವರ್ತನೆ ಬಗ್ಗೆ ದೂರು ನೀಡಿದ್ದರೂ ಡೊಮಿನೊಸ್ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಬದಲಾಗಿ ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂದು ಗಾಯತ್ರಿ ಆರೋಪಿಸಿದ್ದಾರೆ.

ಕರೆಗಳ ಕಿರಿಕಿರಿ ಸಹಿಸಲಾಗುತ್ತಿಲ್ಲ

ಕರೆಗಳ ಕಿರಿಕಿರಿ ಸಹಿಸಲಾಗುತ್ತಿಲ್ಲ

'ಡೊಮಿನೊಸ್ ಇಂಡಿಯಾದ ಯುವಕನೊಬ್ಬ ಚೆನ್ನೈನಲ್ಲಿನ ನನ್ನ ಮನೆಗೆ ಫೆ. 9ರಂದು ಪಿಜ್ಜಾ ಡೆಲಿವರಿ ಮಾಡಿದ್ದ. ಆತ ಆಗ ಅಮಲಿನ ಸ್ಥಿತಿಯಲ್ಲಿದ್ದ. ನನ್ನ ನಂಬರ್‌ಅನ್ನು ಆತ ವಯಸ್ಕರ ಗುಂಪುಗಳಲ್ಲಿ ಹಂಚಿಕೊಂಡಿದ್ದಾನೆ. ನಾನು ನೀಡಿರುವ ದೂರು ನಿಮ್ಮ ಕಚೇರಿ ಮುಂದೆ ಇನ್ನೂ ಬಾಕಿ ಉಳಿದಿದೆ. ನೀವು ಇದುವರೆಗೂ ನನ್ನೊಂದಿಗೆ ಮಾತನಾಡಿಲ್ಲ. ಆತ ನನ್ನ ನಂಬರ್ ಹಂಚಿಕೊಂಡ ಗುಂಪುಗಳಿಂದ ಅನೇಕ ಕರೆಗಳು ಮತ್ತು ವಾಟ್ಸಾಪ್ ಸಂದೇಶಗಳು ಬರುತ್ತಿವೆ. ದಯವಿಟ್ಟು ಎಲ್ಲರೂ ಸುರಕ್ಷಿತವಾಗಿರಿ' ಎಂದು ಅವರು ಡೊಮಿನೊಸ್ ಇಂಡಿಯಾವನ್ನು ಟ್ಯಾಗ್ ಮಾಡಿ ಪಿಜ್ಜಾ ಡೆಲಿವರಿ ಬಾಯ್‌ನ ಚಿತ್ರದೊಂದಿಗೆ ಫೆ. 26ರಂದು ಟ್ವೀಟ್ ಮಾಡಿದ್ದಾರೆ.

ಮಹಿಳಾ ಠಾಣೆಯಲ್ಲಿ ಪ್ರಕರಣ

ಮಹಿಳಾ ಠಾಣೆಯಲ್ಲಿ ಪ್ರಕರಣ

ಈ ಕುರಿತು ಅವರು ಪೊಲೀಸರಿಗೆ ದೂರು ನೀಡಿದ್ದರು. ಚೆನ್ನೈ ಪೊಲೀಸ್ ವಿಭಾಗದ ಎಡಿಜಿಪಿ ಈ ಪ್ರಕರಣವನ್ನು ತೆಯನಂಪೇಟ್‌ನ ಮಹಿಳಾ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ ಎಂದು ಗಾಯತ್ರಿ ಮಾಹಿತಿ ನೀಡಿದ್ದಾರೆ. 'ಇತರೆ ಆನ್‌ಲೈನ್ ಆಪ್‌ಗಳು ನಮ್ಮ ನಂಬರ್‌ಅನ್ನು ಶೇರ್ ಮಾಡುವುದಿಲ್ಲ ಎಂಬ ನಂಬುತ್ತೇನೆ. ಏಕೆಂದರೆ ನಾವು ಹೆಚ್ಚಿನ ನಮ್ಮ ಆರ್ಡರ್‌ಗಳನ್ನು ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಮೂಲಕವೇ ಮಾಡುತ್ತೇವೆ' ಎಂದು ತಿಳಿಸಿದ್ದಾರೆ.

ಕ್ರಮ ತೆಗೆದುಕೊಳ್ಳದ ಡೊಮಿನೊಸ್

'ನೀವು ಪ್ರಕರಣವನ್ನು ಬೆಂಬಲಿಸಿ ಹೇಳಿಕೆ ನೀಡುತ್ತೀರಿ ಎಂದು ಭಾವಿಸಿದ್ದೆ. ಆದರೆ ನೀವು ಅದನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿರುವಂತೆ ಕಾಣಿಸುತ್ತಿದೆ. ಈ ಪ್ರಕರಣವನ್ನು ಮಹಿಳೆಯ ವಿರುದ್ಧದ ಅಪರಾಧವೆಂದು ಪರಿಗಣಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು' ಎಂದು ಡೊಮಿನೊಸ್ ಇಂಡಿಯಾ ವಿರುದ್ಧ ಅವರು ಕಿಡಿಕಾರಿದ್ದಾರೆ.

ನಂಬರ್ ಹಂಚಿಕೊಳ್ಳಬೇಡಿ

ನಂಬರ್ ಹಂಚಿಕೊಳ್ಳಬೇಡಿ

ಎಫ್‌ಐಆರ್ ದಾಖಲು ಮಾಡಿರುವುದಕ್ಕೆ ಪೊಲೀಸರಿಗೆ ಧನ್ಯವಾದ ಹೇಳಿರುವ ಅವರು, 'ಡೊಮಿನೊಸ್ ಇಂಡಿಯಾವು ತಮ್ಮ ಆಪ್‌ಅನ್ನು ಇತರೆ ಫುಡ್ ಡೆಲಿವರಿ ಆಪ್‌ಗಳಂತೆ ಇನ್ನಷ್ಟು ಖಾಸಗಿತನಗೊಳಿಸಬೇಕು. ನಿಮ್ಮ ಪಿಜ್ಜಾ ಡೆಲಿವರಿ ಬಾಯ್‌ಗೆ ನಂಬರ್ ನೇರವಾಗಿ ಹಂಚಿಕೆಯಾಗುವಂತೆ ಆಗಬಾರದು. ಈ ತನಿಖೆಗೆ ನೀವು ಸಹಕರಿಸುತ್ತೀರಿ ಮತ್ತು ಅದನ್ನು ಮುಚ್ಚಿಹಾಕಲು ಪ್ರಯತ್ನಿಸುವುದಿಲ್ಲ ಎಂಬ ಭರವಸೆ ಇದೆ. ಆ ಯುವಕರನ್ನು ಬಂಧಿಸಲಾಗುತ್ತದೆ ಎಂದು ನಂಬಿದ್ದೇನೆ' ಎಂದು ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+