ತಮಿಳುನಾಡಿನಲ್ಲಿ ರಜನಿಕಾಂತ್ ಆಟ ನಡೆಯಲ್ಲ : ದಿನಕರನ್

Posted By:
Subscribe to Oneindia Kannada

ಚೆನ್ನೈ, ಡಿಸೆಂಬರ್ 31:ತಮಿಳು ಸೂಪರ್‌‌ಸ್ಟಾರ್‌‌ ರಜನಿಕಾಂತ್‌‌ ಅವರು ರಾಜಕೀಯ ಪ್ರವೇಶ ಸುದ್ದಿ ಹೊರಬರುತ್ತಿದ್ದಂತೆ ವಿವಿಧ ಪಕ್ಷಗಳ ನಾಯಕರಿಂದ ಪ್ರತಿಕ್ರಿಯೆಗಳು ಹರಿದು ಬರುತ್ತಿವೆ.

ಪ್ರಜೆಗಳ ಪ್ರತಿನಿಧಿಯಾಗುವೆ: ರಜನಿಕಾಂತ್ ಘೋಷಣೆ

ಎಐಎಡಿಎಂಕೆಯಿಂದ ಉಚ್ಚಾಟಿತ ನಾಯಕ, ರಾಧಾಕೃಷ್ಣನಗರ ಅಸೆಂಬ್ಲಿಯ ಹಾಲಿ ಶಾಸಕ ಟಿಟಿವಿ ದಿನಕರನ್ ಅವರು ರಜನಿ ಅವರ ರಾಜಕೀಯ ಪ್ರವೇಶವನ್ನು ದೊಡ್ಡ 'ಹೈಪ್' ಇದರಿಂದ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದಿದ್ದಾರೆ.

'Only One MGR, One Amma': Dinakaran Dismisses Rajinikanth 'Hype'

ಖಾಸಗಿ ಸುದ್ದಿ ವಾಹಿನಿಗಳ ಜತೆ ಮಾತನಾಡಿದ ದಿನಕರನ್, ತಮಿಳುನಾಡನಲ್ಲಿ ಎಂಜಿ ರಾಮಚಂದ್ರನ್ ಹಾಗೂ ಅಮ್ಮ ಜಯಲಲಿತಾ ಅವರು ಮಾತ್ರ ರಾಜಕೀಯವಾಗಿ ನಾಯಕರು, ರಾಜಕೀಯವಾಗಿ ರಜನಿ ಆಟ ನಡೆಯಲ್ಲ ಎಂದಿದ್ದಾರೆ.

ತಮಿಳುನಾಡಿಗೆ ಒಬ್ಬರೇ ಎಂಜಿಆರ್, ಒಬ್ಬರೇ ಅಮ್ಮಾ. ಅದು ಜಯಲಲಿತಾ... ರಜನಿ ಆಟ ಕೇವಲ ಮಾಧ್ಯಮಗಳ ಸೃಷ್ಟಿ.. ತಮಿಳುನಾಡಿನಲ್ಲಿ ಇವರ ಆಟ ನಡೆಯಲ್ಲ ಎಂದು ಟಿಟಿವಿ ದಿನಕರನ್ ಹೇಳಿದರು.

ರಜನಿಕಾಂತ್ ಬಂಡವಾಳ ಬಯಲು ಮಾಡುತ್ತೇನೆ: ಗುಡುಗಿದ ಸುಬ್ರಮಣಿಯನ್ ಸ್ವಾಮಿ

ಜಯಲಲಿತಾ ಅವರು ಸ್ಪರ್ಧೆ ಮಾಡುತ್ತಿದ್ದ ಕ್ಷೇತ್ರ ಆರ್.ಕೆ. ನಗರದಲ್ಲಿ ಸ್ಪರ್ಧಿಸಿ ಭರ್ಜರಿ ಜಯ ದಾಖಲಿಸಿರುವ ದಿನಕರನ್ ಅವರು ರಜನಿ ಅವರ ಡೈಲಾಗ್ ಗಳು ಸಿನಿಮಾಕ್ಕಷ್ಟೇ ಸೀಮಿತ ಎಂದಿದ್ದಾರೆ.

ಹಣ, ಅಧಿಕಾರದ ಮದದಿಂದ ಮೆರೆಯುತ್ತಿರುವವರ ಮುಂದೆ ಕೈಕಟ್ಟಿ ನಿಲ್ಲಬೇಕಾಗಿಲ್ಲ, ಸತ್ಯ, ಧರ್ಮ, ದೇವರು, ತಂದೆ ತಾಯಿ ತೋರಿದ ಮಾರ್ಗದಲ್ಲಿ ನಾವು ಸಾಗಬೇಕು ಎಂದು ರಜನಿ ಅವರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sidelined AIADMK leader TTV Dinakaran, who recently won a massive mandate in Jayalalithaa’s constituency RK Nagar, has dismissed actor Rajinikanth's entry into politics.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ