ರಜನಿಕಾಂತ್ ಬಂಡವಾಳ ಬಯಲು ಮಾಡುತ್ತೇನೆ: ಗುಡುಗಿದ ಸುಬ್ರಮಣಿಯನ್ ಸ್ವಾಮಿ

Subscribe to Oneindia Kannada
   ರಜಿನಿಕಾಂತ್ ಅನಕ್ಷರಸ್ಥ, ರಾಜಕೀಯಕ್ಕೆ ಬರೋದು ಗಿಮಿಕ್ ಅಂದ್ರು ಸುಬ್ರಮಣಿಯನ್ ಸ್ವಾಮಿ

   ಚೆನ್ನೈ, ಡಿಸೆಂಬರ್ 31: ರಾಜಕೀಯ ಪ್ರವೇಶಿಸುವುದಾಗಿ ಘೋಷಿಸಿರುವ ಸೂಪರ್ ಸ್ಟಾರ್ ರಜನೀಕಾಂತ್ ಬಂಡವಾಲ ಬಯಲು ಮಾಡುತ್ತೇನೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅಬ್ಬರಿಸಿದ್ದಾರೆ.

   ಪ್ರಜೆಗಳ ಪ್ರತಿನಿಧಿಯಾಗುವೆ: ರಜನಿಕಾಂತ್ ಘೋಷಣೆ

   "ಅವರು (ರಜನಿಕಾಂತ್) ಮೊದಲು ರಾಜಕೀಯ ಪಕ್ಷದ ಹೆಸರು, ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಿ. ನಂತರ ನಾನು ಅವರ ಬಂಡವಾಳ ಬಯಲು ಮಾಡುತ್ತೇನೆ," ಎಂದು ತಮಿಳುನಾಡು ಬಿಜೆಪಿ ಉಸ್ತುವಾರಿ ಸುಬ್ರಮಮಣಿಯನ್ ಸ್ವಾಮಿ ಎಎನ್ಐಗೆ ಪ್ರತಿಕ್ರಿಯೆ ನೀಡಿದ್ದಾರೆ.

   Let him announce political party name and candidates, I will expose him: Swamy's challenge to Rajinikanth

   "ಅವರು (ರಜನಿಕಾಂತ್) ಕೇವಲ ರಾಜಕೀಯ ಪ್ರವೇಶ ಮಾಡುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ಯಾವುದೇ ವಿವರಗಳು, ದಾಖಲೆಗಳಿಲ್ಲ. ಅವರು ಅನಕ್ಷರಸ್ಥ. ಇದು ಕೇವಲ ಮಾಧ್ಯಮಗಳ ಪ್ರಚೋದನೆ ಅಷ್ಟೆ. ತಮಿಳುನಾಡಿನ ಜನರ ಬುದ್ಧಿವಂತರು," ಎಂದು ಸ್ವಾಮಿ ಹೇಳಿದ್ದಾರೆ.

   'ನಾನು ಹೆದರುವುದು ಮಾಧ್ಯಮಗಳಿಗೆ ಮಾತ್ರ: ರಜನಿಕಾಂತ್

   ಇಂದು ಚೆನ್ನೈನ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಅಭಿಮಾನಿಗಳ ಜತೆ ಸಮಾಲೋಚನೆ ನಡೆಸಿದ ರಜನೀಕಾಂತ್ ತಾವು ರಾಜಕೀಯ ಪ್ರವೇಶಿಸುವುದಾಗಿ ಸ್ಪಷ್ಟಪಡಿಸಿದ್ದರು. ಮತ್ತು ಮುಂದಿನ ತಮಿಳುನಾಡು ವಿಧಾನಸಭೆ ಚುನಾವಣೆ ವೇಳೆ ಪಕ್ಷ ಸ್ಥಾಪಿಸಿ ಎಲ್ಲಾ ಕ್ಷೇತ್ರಗಳಿಂದಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಘೋಷಿಸಿದ್ದರು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   "Let him announce political party name and candidates and then I will expose him," said BJP leader Subramanian Swamy after Rajinikanth announces that he will come to politics.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ