ನಿನ್ನೆ ಮೋದಿ ಹೊಗಳಿ, ಇಂದು ತೆಗಳಿದ ಡಿಎಂಕೆ ನಾಯಕರು

Posted By:
Subscribe to Oneindia Kannada

ಚೆನ್ನೈ, ನವೆಂಬರ್ 08: ಅಪನಗದೀಕರಣದ ವಿರುದ್ಧ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಇಂದು ಕರಾಳ ದಿನವನ್ನಾಗಿ ಆಚರಿಸುತ್ತಿವೆ. ಕಪ್ಪು ಬಟ್ಟೆ, ದಿರಿಸು ಧರಿಸಿದ್ದ ಜೆ ಸ್ಟಾಲಿನ್ ಅವರು ಮೋದಿ ಸರ್ಕಾರದ ವಿರುದ್ಧ ದನಿಯೆತ್ತಿದ್ದಾರೆ. ನೋಟ್ ನಿಷೇಧದಿಂದಾಗಿ ಜನ ಸಾಮಾನ್ಯರಿಗೆ ಭಾರಿ ತೊಂದರೆಯಾಗಿದೆ ಎಂದು ಪ್ರತಿಭಟನೆ ನಡೆಸಿದ್ದಾರೆ.

ಮೋದಿ ಬಿಟ್ಟ ಬಾಣಕ್ಕೆ ತಮಿಳುನಾಡಿನ ರಾಜಕಾರಣದಲ್ಲಿ ಬಿದ್ದ ಹಕ್ಕಿಗಳೆಷ್ಟು!

ನಿನ್ನೆ ದಿನ ಮೋದಿ ಅವರು ಡಿಎಂಕೆ ಅಧಿನಾಯಕ ಎಂ ಕರುಣಾನಿಧಿ ಅವರನ್ನು ಕಾಣಲು ಬಂದಿದ್ದರು. ನಂತರ ದೆಹಲಿಗೆ ಬರುವಂತೆ ಆಹ್ವಾನಿಸಿದ್ದರು. ಮುಂದಿನ ಚುನಾವಣೆಯಲ್ಲಿ ಡಿಎಂಕೆಗೆ ಜತೆ ಬಿಜೆಪಿ ಕೈಜೋಡಿಸುವ ಸಂಭವವಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಅಲ್ಲದೆ, ನವೆಂಬರ್ 08ರಂದು ಮೋದಿ ಸರ್ಕಾರದ ವಿರುದ್ಧ ಕಪ್ಪು ದಿನಾಚರಣೆ ಮಾಡುವುದಿಲ್ಲ ಎಂದು ಜೆ ಸ್ಟಾಲಿನ್ ಹೇಳಿದ್ದರು.

Note ban brought only hardship for common man: Stalin

ಆದರೆ, ಎನ್ ಡಿಎ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ಮೂಲಕ ಡಿಎಂಕೆ ನಿಷ್ಠೆ ಎಂದಿದ್ದರೂ ಕಾಂಗ್ರೆಸ್ ಪರ ಎಂದು ಸ್ಟಾಲಿನ್ ಸಾರಿದ್ದಾರೆ.

500 ರು ಹಾಗೂ 1000 ರು ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸುವ ಮೂಲಕ ಜನ ಸಾಮಾನ್ಯರ ದೈನಂದಿನ ಆದಾಯಕ್ಕೆ ಮೋದಿ ಸರ್ಕಾರ ಕೊಡಲಿ ಪೆಟ್ಟು ಕೊಟ್ಟಿತು. ಸಣ್ಣ ವ್ಯಾಪಾರಿಗಳಿಗೆ ಭಾರಿ ನಷ್ಟ ಉಂಟಾಯಿತು. ಎಟಿಎಂ ಕ್ಯೂನಲ್ಲಿ ನಿಂತು ಅನೇಕ ಮಂದಿ ಮೃತಪಟ್ಟ ಘಟನೆಗಳು ವರದಿಯಾಗಿವೆ.

ಬಿಜೆಪಿಯ ಹುಚ್ಚಾಟದಿಂದ 125 ಕೋಟಿ ಜನ ಕಷ್ಟಪಡುವಂತಾಯಿತು. ಕಪ್ಪುಹಣ ನಿರ್ಮೂಲನೆ ಮಾಡುವ ಭರವಸೆ ನೀಡಿದವರು ನವೆಂಬರ್ 08ರ ಮಧ್ಯರಾತ್ರಿಯಿಂದ ನಮ್ಮ ಸ್ವಾತಂತ್ರ್ಯ ಕಿತ್ತು ಕೊಂಡರು ಎಂದು ಹೇಳಿದರು.

ಡಿಎಂಕೆ ಮುಖಂಡರಾದ ದೊರೈ ಮುರುಗನ್, ಕನಿಮೋಳಿ ನೇತೃತ್ವದಲ್ಲಿ ತಿರುಚನಾಪಳ್ಳಿ, ಕೊಯಮತ್ತೂರಿನಲ್ಲೂ ಪ್ರತಿಭಟನೆಗಳು ನಡೆಸಲಾಗಿದೆ.

2016ರ ನ.8 ರಂದು 500, 1000 ರೂ. ಮುಖಬೆಲೆಯ ನೋಟುಗಳನ್ನು ರದ್ದು ಮಾಡುತ್ತಿರುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದರು. ಬಳಿಕ ನೋಟ್ ಬ್ಯಾನ್ ನಿರ್ಧಾರಕ್ಕೆ ದೇಶಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Demonetisation only brought hardship for common man, DMK Working President M K Stalin said today leading the opposition charge against the NDA government's note ban move on its first anniversary here.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ