ಚೆನ್ನೈ: ನಾಪತ್ತೆಯಾಗಿದ್ದ ಟಿಸಿಎಸ್ ಟೆಕ್ಕಿ, ಶವವಾಗಿ ಪತ್ತೆ

ಚೆನ್ನೈ, ಫೆ.23: ನಾಪತ್ತೆಯಾಗಿದ್ದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) ಸಂಸ್ಥೆ ಮಹಿಳಾ ಉದ್ಯೋಗಿಯೊಬ್ಬರ ಶವ ನಗರದಲ್ಲಿ ಶನಿವಾರ ಪತ್ತೆಯಾಗಿದ್ದು, ಕೊಲೆ ನಡೆದಿರುವ ಶಂಕೆಯಿದೆ ಎಂದು ಪೊಲೀಸರು ಹೇಳಿದ್ದಾರೆ.

ಚೆನ್ನೈ ನಗರದ ಜನನಿಬಿಡ ಪ್ರದೇಶದ ರಸ್ತೆಯೊಂದರ ಪೊದೆಯೊಂದರಲ್ಲಿ ಸಿಕ್ಕಿರುವ ಶವವನ್ನು ಉಮಾ ಮಹೇಶ್ವರಿ ಎಂದು ಗುರುತಿಸಲಾಗಿದೆ. 24 ವರ್ಷ ವಯಸ್ಸಿನ ಉಮಾ ಮಹೇಶ್ವರಿ ಅವರ ಸಾವಿನ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಕಳೆದ ವಾರ ಉಮಾ ಅವರು ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಉಮಾ ಅವರ ಶವದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ವೈದ್ಯಕೀಯ ವರದಿ ಬಂದ ನಂತರ ಸಾವಿನ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಲಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಮೇಲ್ನೋಟಕ್ಕೆ ಇದು ಕೊಲೆ ಎಂದು ಕಂಡು ಬರುತ್ತಿದೆ ಎಂದು ಚೆನ್ನೈ ನಗರ ಪೊಲೀಸರು ಹೇಳಿದ್ದಾರೆ.

Missing TCS employee found dead, police suspect murder

ಟಿಸಿಎಸ್ ಸಂಸ್ಥೆಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಉಮಾ ಅವರು ಕಾರ್ಯ ನಿರ್ವಹಿಸುತ್ತಿದ್ದರು. ಫೆ.13 ರಂದು ಸಂಜೆ ಟಿಸಿಎಸ್ ಕ್ಯಾಂಪಸಿನಿಂದ ಹೊರಟವರು ಮತ್ತೆ ಮನೆ ಸೇರಿರಲಿಲ್ಲ. ಈ ಬಗ್ಗೆ ಕುಟುಂಬದವರು ಮರುದಿನ ಪೊಲೀಸರಿಗೆ ದೂರು ನೀಡಿದ್ದರು. ಶನಿವಾರ ಟಿಸಿಎಸ್ ಕಚೇರಿ ಕ್ಯಾಂಪಸಿನ ಸಮೀಪದ ಪೊದೆಯೊಂದರಲ್ಲಿ ಕೊಳತೆ ಶವವೊಂದು ಪತ್ತೆಯಾಗಿತ್ತು. ಸಾರ್ವಜನಿಕರೊಬ್ಬರು ಪೊದೆಯಿಂದ ಕೆಟ್ಟವಾಸನೆ ಬರುತ್ತಿದೆ ಎಂದು ಪೊಲೀಸರಿಗೆ ವಿಷಯ ಮುಟ್ಟಿಸಿದರು. ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ ಅದು ಉಮಾ ಅವರ ಶವ ಎಂದು ತಿಳಿದು ಬಂದಿತ್ತು.

ಇದೇ ರೀತಿ ಘಟನೆಗಳು: ಟಿಸಿಎಸ್ ಸಾಫ್ಟ್ ವೇರ್ ಇಂಜಿನಿಯರ್ ಏಸ್ತರ್ ಅನೂಹ್ಯ (23) ಅವರ ಅರೆ ಬೆಂದ ದೇಹವು ಮುಂಬೈನ ಈಸ್ಟರ್ನ್ ಎಕ್ಸ್ ಪ್ರೆಸ್ ಹೈವೆ ಬಳಿ ಕಂಜೂರಮಾರ್ಗ್ ನಲ್ಲಿ ನಿರ್ಜನ ಪ್ರದೇಶದಲ್ಲಿ ದೊರೆತ್ತಿತ್ತು. [ವಿವರ ಇಲ್ಲಿದೆ]

* ಕೆಲಸದ ಒತ್ತಡ ಹೆಚ್ಚಾಗುತ್ತಿದ್ದಂತೆ ಮಾನಸಿಕವಾಗಿ ಹೆಚ್ಚಾಗಿ ಬಳಲುತ್ತಿದ್ದ 32 ವರ್ಷದ ಮೃದಲ್ ಸ್ನೇಹಿ ಎಂಬ ಟಿಸಿಎಸ್ ಟೆಕ್ಕಿಯೊಬ್ಬ ಉದ್ಯೋಗಕ್ಕೆ ರಾಜೀನಾಮೆ ನೀಡಿದ ಕೆಲ ದಿನಗಳಲ್ಲೆ ದೆಹಲಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. [ವಿವರ ಇಲ್ಲಿ ಓದಿ]

* ಆಂಧ್ರಪ್ರದೇಶ ಮೂಲದ ನೀಲಿಮಾ ಯೆರುವಾ (27) ಎಂಬ ಇನ್ಫೋಸಿಸ್ ಟೆಕ್ನಾಲಜೀಸ್ ಸಂಸ್ಥೆಗೆ ಸೇರಿದ ಉದ್ಯೋಗಿಯೊಬ್ಬರು ಕ್ಯಾಂಪಸ್ ‌ನಲ್ಲಿ ಸಂಶಯಾಸ್ಪದವಾಗಿ ಸಾವಿಗೀಡಾಗಿದ್ದರು.

ಚೆನ್ನೈನಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಸಿರುಚ್ಚೇರಿಯಲ್ಲಿರುವ ಐಟಿ ಪಾರ್ಕ್ ನಲ್ಲಿ ಟಿಸಿಎಸ್ ಸಂಸ್ಥೆ ಕಚೇರಿ ಹೊಂದಿದೆ. ಉಮಾ ಅವರ ಸಾವಿನಿಂದ ಸಹಜವಾಗಿ ಅವರ ಸಹದ್ಯೋಗಿಗಳಿಗೂ ಆತಂಕ, ದುಃಖ, ನೋವು ಉಂಟಾಗಿದೆ (ಐಎಎನ್ಎಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+