• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿತ್ರಸಾಹಿತಿ ವೈರಮುತ್ತು ವಿರುದ್ಧ ಲೈಂಗಿಕ ಕಿರುಕುಳ ಆರೋಪ

|

ಚೆನ್ನೈ, ಅಕ್ಟೋಬರ್ 09: ತಮಿಳು ಚಿತ್ರರಂಗದ ಜನಪ್ರಿಯ ಸಾಹಿತಿ ವೈರಮುತ್ತು ಅವರ ವಿರುದ್ಧ ಲೈಂಗಿಕ ಕಿರುಕುಳ ಕೇಳಿ ಬಂದಿದೆ. ಸಂತ್ರಸ್ತ ಮಹಿಳೆ ತನಗಾದ ನೋವನ್ನು ಬರೆದುಕೊಂಡಿದ್ದು, ಇದನ್ನು ಪತ್ರಕರ್ತೆ ಸಂಧ್ಯಾ ಮೆನನ್ ಟ್ವೀಟ್ ಮಾಡಿದ್ದಾರೆ.

ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

ಪತ್ರಕರ್ತೆ ಸಂಧ್ಯಾ ಮೆನನ್ ಮೊದಲು ಟೈಮ್ಸ್​ ಆಫ್ ಇಂಡಿಯಾದ ಹೈದರಾಬಾದ್ ಸ್ಥಾನಿಕ ಸಂಪಾದಕರ ಶ್ರೀನಿವಾಸ್ ವಿರುದ್ಧ ಮಾಡಿದ ಆರೋಪ ವೈರಲ್ ಅಗಿರುವುದು ತಿಳಿದಿರಬಹುದು. ಶ್ರೀನಿವಾಸ್ ವಿರುದ್ಧ ಐದಾರು ಮಹಿಳೆಯರು ದೂರು ನೀಡಿದ್ದಾರೆ.

ಇದೇ ಸರಣಿಯನ್ನು ಮುಂದುವರೆಸಿ, ಸಂಧ್ಯಾ ಅವರು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ನ ಸಾರಾಂಶ ಹೀಗಿದೆ:

Me too : Anonymous allegation against Tamil Lyricst Vairamuthu

ನಾನು ಆಗ 18 ವರ್ಷ ವಯಸ್ಸಿನವಳಾಗಿದ್ದೆ. ಒಂದು ಯೋಜನೆಗಾಗಿ ನಾನು ಅವರ ಜತೆಗೆ ಕಾರ್ಯ ನಿರ್ವಹಿಸಬೇಕಾಗಿತ್ತು. ಅವರು ಒಳ್ಳೆಯವರಾಗಿ ಕಂಡರು.

ಅವರು ರಾಷ್ಟ್ರೀಯ ಪ್ರಶಸ್ತಿ ವಿಜೇತ ಸಾಹಿತಿ, ಸಿನಿಮಾ ಕ್ಷೇತ್ರದ ದಿಗ್ಗಜ ಹೀಗಾಗಿ ಅವರನ್ನು ಗೌರವದಿಂದ ಕಾಣುತ್ತಿದ್ದೆ. ಆದರೆ, ಅಂದು ಸಾಹಿತ್ಯವನ್ನು ನನಗೆ ಅರ್ಥೈಸುವ ನೆಪದಲ್ಲಿ ನನ್ನನ್ನು ತಬ್ಬಿಕೊಂಡು, ಮುತ್ತಿಟ್ಟರು.ನನಗೆ ಏನು ಮಾಡ್ಬೇಕೆಂದು ತಿಳಿಯಲಿಲ್ಲ.

ನಾನು ಓಕೆ ಸಾರ್, ಥ್ಯಾಂಕ್ ಎಂದು ಹೇಳಿ ಅವರ ಮನೆಯಿಂದ ಓಡಿ ಹೊರ ಬಂದೆ. ಕೊಡಂಬಾಕ್ಕಂನಲ್ಲಿರುವ ಅವರ ಮನೆ ಹಾಗೂ ಕಚೇರಿಯಲ್ಲಿ ಅವರ ಜತೆ ಒಬ್ಬಳೇ ಇರಲು ಭಯವಾಗುತ್ತಿತ್ತು. ಇಂಥ ಸಂದರ್ಭ ಬಂದರೆ ತಪ್ಪಿಸಿಕೊಳ್ಳುತ್ತಿದ್ದೆ.

ವೈರಮುತ್ತು ಅವರಿಗೆ ಸಿನಿಮಾ ರಂಗದಲ್ಲಿ ಭಾರಿ ಪ್ರಭಾವವಿದೆ. ಅವರ ವಿರುದ್ಧ ನಿಂತರೆ ಬೆಂಬಲ ಸಿಗುವುದು ಕಡಿಮೆ. ಅವರಿಗೆ ರಾಜಕೀಯ ಪ್ರಭಾವವೂ ಇದೆ. ಆದರೆ, ನನಗೆ ತೊಂದರೆ ಆಗಿದ್ದು ನಿಜ ಎಂದು ಬರೆಯಲಾಗಿದೆ.

English summary
The anonymous allegations against Vairamuthu have been made in light of several women coming forward to name alleged perpetrators in powerful positions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X