ಚಪ್ಪಲಿ, ಶೂ ಕಳೆದಿದೆ ಹುಡುಕಿಕೊಡಿ ಎಂದು ದೂರು ನೀಡಿದ ಉದ್ಯಮಿ

ಚೆನ್ನೈ, ನವೆಂಬರ್ 25: ಶೂ, ಚಪ್ಪಲಿ ಕಳೆದರೆ ಎಲ್ಲಾದರೂ ಪೊಲೀಸ್ ದೂರು ಕೊಡುವುದು ಇದೆಯೇ? ಎಂದು ಉದಾಸೀನ ಮಾಡದಿರಿ. ಇಂಥಹದ್ದೊಂದು ಘಟನೆ ಚೆನ್ನೈ ನಲ್ಲಿ ನಡೆದಿದೆ.

ಚೆನ್ನೈನಲ್ಲಿ ಉದ್ಯಮಿಯೊಬ್ಬ ತನ್ನ ಶೂ ಮತ್ತು ಚಪ್ಪಲಿ ಕಳೆದುಹೋಗಿದೆ ಹುಡುಕಿಕೊಡಿ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಉದ್ಯಮಿ ಅಬ್ದುಲ್ ಹಫೀಜ್ ತನ್ನ 76,000 ಮೌಲ್ಯದ ಶೂ ಮತ್ತು ಚಪ್ಪಲಿಗಳು ಕಳ್ಳತನವಾಗಿದೆ ಎಂದು ಚೆನ್ನೈನ ಸೆಕ್ರೆಟೇರಿಯಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಈಗ ಚಪ್ಪಲಿ ಮತ್ತು ಶೂಸ ಹುಡುಕುವ ಕೆಲಸ ಮಾಡಬೇಕಿದೆ.

Man Lodged Complaint About Missing Shoes In Chennai

ಅಬ್ದುಲ್ ಹಫೀಜ್ ಅವರ 10 ಜೊತೆ ಚಪ್ಪಲಿ ಮತ್ತು ಶೂ ಗಳು ಕಾಣೆಯಾಗಿವೆಯಂತೆ. ಹಫೀಜ್ ಮನೆಯಲ್ಲಿ ಇರುವಾಗಲೇ ಚಪ್ಪಲಿ ಮತ್ತು ಶೂ ಕಾಣೆಯಾಗಿವೆಯಂತೆ.

'ನಾನು ಮನೆಯ ಒಳಗೆ ಹೋಗಬೇಕಾದರೆ ನನ್ನ ಶೂ ಮತ್ತು ಚಪ್ಪಲಿಗಳು ಅಲ್ಲಿಯೇ ಇದ್ದವು. ಆದರೆ ಒಂದು ಗಂಟೆ ಬಿಟ್ಟು ಹೊರಗೆ ಹೋಗಬೇಕಾದರೆ ಶೂ ಮತ್ತು ಚಪ್ಪಲಿಗಳನ್ನು ಯಾರೋ ಕದ್ದೊಯ್ದಿದ್ದಾರೆ' ಎಂದು ಹಫೀಜ್ ದೂರು ದಾಖಲಿಸಿದ್ದಾರೆ.

ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಇನ್ನೂ ಆರಂಭಿಸಿಲ್ಲವಾದರೂ ಹಫೀಜ್ ಮನೆಯ ನೆರೆ-ಹೊರೆಯವರನ್ನು ವಿಚಾರಣೆ ನಡೆಸುವ ಭರವಸೆಯನ್ನು ಹಫೀಜ್‌ ಗೆ ನೀಡಿದ್ದಾರಂತೆ. ಅಷ್ಟೆ ಅಲ್ಲದೆ ಮನೆಯ ಸುತ್ತ-ಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನೂ ಪೊಲೀಸರು ಪರಿಶೀಲನೆ ನಡೆಸಲಿದ್ದಾರಂತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+