• search
 • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ: ಜನರ ಭಯವೇ ನಿಮಗೆ ಬಂಡವಾಳ, ಹೈಕೋರ್ಟ್ ಛೀಮಾರಿ: ಪತಂಜಲಿಗೆ ಭಾರೀ ಹಿನ್ನಡೆ

|
Google Oneindia Kannada News

ಚೆನ್ನೈ, ಆ 7: "ಕೊರೊನಾ ವೈರಸ್ ನಿಂದ ಸಾರ್ವಜನಿಕರು ಭಯಭೀತರಾಗಿರುವುದೇ ನಿಮಗೆ ಬಹುದೊಡ್ಡ ಬಂಡವಾಳ" ಎಂದು ಮದರಾಸು ಹೈಕೋರ್ಟ್, ಬಾಬಾ ರಾಮದೇವ್ ಒಡೆತನದ ಪತಂಜಲಿ ಸಂಸ್ಥೆಗೆ ಛೀಮಾರಿ ಹಾಕಿದೆ.

   ಗಾಣಗಪುರದ ದತ್ತನ ದರ್ಶನವೇ ಡಿಕೆ ಶಿವಕುಮಾರ್ ಗೆ ಮುಳುವಾಯ್ತಾ? | Oneindia Kannada

   ಕೊರೊನಾ ವೈರಸ್ ವಿರುದ್ಧ ಹೋರಾಡಲು 'ಕೊರೊನಿಲ್' ಎನ್ನುವ ಔಷಧವನ್ನು ಪತಂಜಲಿ ಸಂಸ್ಥೆ ಡೆಹ್ರಾಡೂನ್ ನಲ್ಲಿ ಜೂನ್ 22ರಂದು ಬಿಡುಗಡೆ ಮಾಡಿತ್ತು. "ಕೊರೊನಾ ಸೋಂಕಿಗೆ ಮೊದಲ ಔಷಧ ಕೊರೊನಿಲ್ ಅನ್ನು ಸಂಪೂರ್ಣ ವೈಜ್ಞಾನಿಕ ದಾಖಲೆಗಳೊಂದಿಗೆ ಬಿಡುಗಡೆ ಮಾಡುತ್ತಿದ್ದೇವೆ" ಎಂದು ಸಂಸ್ಥೆಯ ಮುಖ್ಯಸ್ಥ ಆಚಾರ್ಯ ಬಾಲಕೃಷ್ಣ ಹೇಳಿದ್ದರು.

   ಕೊರೊನಾ ಎನ್ನುವ ಕಂಡು ಕೇಳರಿಯದ ಲಾಬಿ: ಕೇಂದ್ರ ಸರಕಾರಕ್ಕೆ ವೈದ್ಯರ 10 ಪ್ರಶ್ನೆಗಳುಕೊರೊನಾ ಎನ್ನುವ ಕಂಡು ಕೇಳರಿಯದ ಲಾಬಿ: ಕೇಂದ್ರ ಸರಕಾರಕ್ಕೆ ವೈದ್ಯರ 10 ಪ್ರಶ್ನೆಗಳು

   ಕೊರೊನಿಲ್, ಕೊರೊನಾ ಕಾಯಿಲೆಯನ್ನು ಗುಣಪಡಿಸುವ ಲಸಿಕೆ ಎಂದು ಪ್ರಚಾರ ಮಾಡುವುದನ್ನು ಮತ್ತು ಟ್ರೇಡ್ ಮಾರ್ಕ್ ಆಗಿ ಬಳಸುವುದನ್ನು ಮದರಾಸು ಹೈಕೋರ್ಟ್ ನಿಷೇಧಿಸಿದೆ. ಆ ಮೂಲಕ, ಪತಂಜಲಿ ಸಂಸ್ಥೆಗೆ ಬಹುದೊಡ್ಡ ಹಿನ್ನಡೆಯಾಗಿದೆ.

   ಖ್ಯಾತ ವೈದ್ಯ ಡಾ.ಹೆಗ್ಡೆ ಸೂಚಿಸಿದ ಸಿಂಪಲ್ ಮನೆ ಔಷಧಿ: ಕೊರೊನಾ ಮಾಯ!ಖ್ಯಾತ ವೈದ್ಯ ಡಾ.ಹೆಗ್ಡೆ ಸೂಚಿಸಿದ ಸಿಂಪಲ್ ಮನೆ ಔಷಧಿ: ಕೊರೊನಾ ಮಾಯ!

   "ಕೊವಿಡ್ 19 ರೋಗದ ವಿರುದ್ಧ ಹೋರಾಡಲು ಮೊದಲ ಬಾರಿಗೆ ಆಯುರ್ವೇದದಲ್ಲಿ ಔಷಧಿ ಕಂಡುಹಿಡಿದಿದ್ದೇವೆ. ಮೂರು ದಿನಗಳಲ್ಲಿ ಶೇ.69ರಷ್ಟು ಗುಣಮುಖರಾಗುತ್ತಾರೆ. 7 ದಿನಗಳಲ್ಲಿ ಶೇ.100ರಷ್ಟು ರೋಗಿಗಳು ಗುಣಮುಖರಾಗಲಿದ್ದಾರೆ" ಎಂದು ಬಾಬಾ ರಾಮ್‌ದೇವ್ ಹೇಳಿಕೊಂಡಿದ್ದರು.

   ಮದರಾಸು ಹೈಕೋರ್ಟ್ ಛೀಮಾರಿ

   ಮದರಾಸು ಹೈಕೋರ್ಟ್ ಛೀಮಾರಿ

   ಪತಂಜಲಿ ಸಂಸ್ಥೆ ಮತ್ತು ದಿವ್ಯ ಯೋಗ ಮಂದಿರ ಟ್ರಸ್ಟ್ ಮೇಲೆ ಅಸಮಾಧಾನ ವ್ಯಕ್ತ ಪಡಿಸಿರುವ ಮದರಾಸು ಹೈಕೋರ್ಟ್, "ಕೊರೊನಾ ವೈರಸ್ ನಿಂದ ಜನರು ಭಯಭೀತರಾಗಿದ್ದಾರೆ. ಈ ಪರಿಸ್ಥಿತಿಯ ದುರುಪಯೋಗ ಪಡೆದುಕೊಂಡು, ಲಾಭದ ಉದ್ದೇಶದಿಂದ ಕೊರೊನಿಲ್ ಲಸಿಕೆಯನ್ನು ಮಾರಾಟ ಮಾಡುತ್ತೀದ್ದೀರಾ" ಎಂದು ನ್ಯಾಯಾಲಯ ಛೀಮಾರಿ ಹಾಕಿದೆ.

   ಪತಂಜಲಿ ಸಂಸ್ಥೆ ಮತ್ತು ದಿವ್ಯ ಯೋಗ ಮಂದಿರ ಟ್ರಸ್ಟ್

   ಪತಂಜಲಿ ಸಂಸ್ಥೆ ಮತ್ತು ದಿವ್ಯ ಯೋಗ ಮಂದಿರ ಟ್ರಸ್ಟ್

   ಎರಡೂ ಸಂಸ್ಥೆಗಳಿಗೆ ಹತ್ತು ಲಕ್ಷ ರೂಪಾಯಿ ದಂಡ ವಿಧಿಸಿರುವ ಹೈಕೋರ್ಟ್, "ಕೊರೊನಿಲ್ ಲಸಿಕೆಯಿಂದ ಕೊರೊನಾ ಕಾಯಿಲೆಯಿಂದ ಗುಣಮುಖರಾಗುತ್ತಾರೆ ಎನ್ನುವುದು ಎಲ್ಲೂ ರುಜುವಾತು ಆಗಿಲ್ಲ. ಇದೊಂದು, ಜನರ ರೋಗ ನಿರೋಧಕ ಶಕ್ತಿಯನ್ನು ವೃದ್ದಿಸುವ ಲಸಿಕೆಯಷ್ಟೇ"ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.

   ಕೊರೊನಿಲ್ ಲಸಿಕೆ

   ಕೊರೊನಿಲ್ ಲಸಿಕೆ

   ಚೆನ್ನೈ ಮೂಲದ ಆರುದ್ರಾ ಇಂಜಿನಿಯರ್ಸ್ ಪ್ರೈ.ಲಿ. ಸಲ್ಲಿಸಿರುವ ಅರ್ಜಿಯ ವಿಚಾರಣೆಯ ವೇಳೆ ಮೇಲಿನ ಅಭಿಪ್ರಾಯಕ್ಕೆ ಬಂದಿರುವ ನ್ಯಾಯಾಲಯ, "ಕೊರೊನಿಲ್ ಲಸಿಕೆಯ ಟ್ರೇಡ್ ಮಾರ್ಕ್ 1993ರಲ್ಲಿ ಆ ಸಂಸ್ಥೆಯ ಹೆಸರಿನಲ್ಲಿ ನೊಂದಾಯಿತವಾಗಿರುವುದು. ಕೊರೋನಿಲ್ -92ಬಿ, ಕೈಗಾರಿಕಾ ಬಳಕೆಗಾಗಿ ಭಾರೀ ಯಂತ್ರೋಪಕರಣಗಳು ಮತ್ತು ರಾಸಾಯನಿಕ ಸಿದ್ಧತೆಗಳನ್ನು ಸ್ವಚ್ಚಗೊಳಿಸುವ ಆಮ್ಲ ಪ್ರತಿರೋಧಕ ಉತ್ಪನ್ನವಾಗಿದೆ"ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.

   ಆದ್ಯಾರ್ ಕ್ಯಾನ್ಸರ್ ಸಂಸ್ಥೆ

   ಆದ್ಯಾರ್ ಕ್ಯಾನ್ಸರ್ ಸಂಸ್ಥೆ

   ಬಾಬಾ ರಾಮದೇವ್ ಒಡೆತನದ ಪತಂಜಲಿ ಸಂಸ್ಥೆ ಮತ್ತು ದಿವ್ಯ ಯೋಗ ಮಂದಿರ ಟ್ರಸ್ಟ್, ತಲಾ ಐದು ಲಕ್ಷ ರೂಪಾಯಿಯನ್ನು ಆದ್ಯಾರ್ ಕ್ಯಾನ್ಸರ್ ಸಂಸ್ಥೆ ಮತ್ತು ಸರಕಾರೀ ಯೋಗ ಕಾಲೇಜಿಗೆ ಪಾವತಿಸುವಂತೆ ಮತ್ತು ಕೊರೊನಿಲ್ ಹೆಸರನ್ನು ಬಳಸದಂತೆ, ನ್ಯಾ. ಸಿ.ವಿ.ಕಾರ್ತಿಕೇಯನ್ ಆದೇಶ ಹೊರಡಿಸಿದ್ದಾರೆ.

   English summary
   Madras High Court Imposes Ten Lac Fine On Patanjali Over Coronil Tablet.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X