ಲೋಕಸಭೆ ಚುನಾವಣೆ: ಕಮಲ ಹಾಸನ್‌ಗೆ ತಲೈವಾ ಬೆಂಬಲ?

ಚೆನ್ನೈ, ಏಪ್ರಿಲ್ 9: ರಾಜಕೀಯ ಕಾರಣಗಳಿಂದ ಪರಸ್ಪರ ಬೆನ್ನು ತಿರುಗಿಸಿರುವ ನಟರಾದ ರಜನಿಕಾಂತ್ ಮತ್ತು ಕಮಲ ಹಾಸನ್ ಮತ್ತೆ ಒಂದಾಗುತ್ತಾರೆಯೇ? ಲೋಕಸಭೆ ಚುನಾವಣೆ ವೇಳೆ ಕಮಲ್ ಹಾಸನ್ ಅವರಿಗೆ ರಜನಿ ಬೆಂಬಲ ನೀಡುತ್ತಾರೆಯೇ? ರಜನಿ ಅವರ ಹೇಳಿಕೆ ಅವರು ಕೊನೆಯ ಕ್ಷಣದಲ್ಲಿ ಕಮಲ್ ಅವರ ಪಕ್ಷಕ್ಕೆ ಬೆಂಬಲ ನೀಡಬಹುದು ಎಂಬ ಲೆಕ್ಕಾಚಾರಗಳನ್ನು ಹುಟ್ಟುಹಾಕಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ರಜನಿಕಾಂತ್ ತಮಗೆ ಬೆಂಬಲ ನೀಡಲಿದ್ದಾರೆ ಎಂದು ಕಮಲ ಹಾಸನ್ ಕಳೆದ ತಿಂಗಳು ಭರವಸೆ ವ್ಯಕ್ತಪಡಿಸಿದ್ದರು. ಆದರೆ, ರಜನಿ ತಮ್ಮ ರಾಜಕೀಯ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ಮಂಗಳವಾರ ಸ್ಪಷ್ಟಪಡಿಸಿದ್ದಾರೆ. ಹಾಗೆಂದು ತಮ್ಮ ಮತ್ತು ಕಮಲ್ ನಡುವಿನ ಗೆಳೆತನವನ್ನು ಹಾಳುಮಾಡಬೇಡಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

ನದಿಗಳ ಜೋಡಣೆಗಾಗಿಯೇ ಸಚಿವಾಲಯ ಸ್ಥಾಪಿಸುವ ಬಿಜೆಪಿಯ ಪ್ರಣಾಳಿಕೆಯಲ್ಲಿನ ಭರವಸೆಯನ್ನು ರಜನಿಕಾಂತ್ ಸ್ವಾಗತಿಸಿದ್ದಾರೆ.

Lok Sabha elections 2019 rajinikanth asked people not to ruin freindship with kamal haasan

ರಜನಿಕಾಂತ್ ತಮ್ಮ ಮತ್ತು ಕಮಲ್ ನಡುವಿನ ಸ್ನೇಹವನ್ನು ಕೆಡಿಸದಂತೆ ಜನರಲ್ಲಿ ಕೋರಿದ್ದಾರೆ. ಹಾಗಿದ್ದರೂ ರಾಜಕೀಯ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರಜನಿ ಹೇಳಿದ್ದಾರೆ ಎಂಬುದಾಗಿ ತಮಿಳು ವಾಹಿನಿ ಪುದಿಯಾ ತಲೈಮುರೈ ವರದಿ ಮಾಡಿದೆ.

ಮಕ್ಕಳ್ ನೀಧಿ ಮಯ್ಯಮ್ ಪಕ್ಷದ ಅಧ್ಯಕ್ಷರಾಗಿರುವ ಕಮಲ ಹಾಸನ್ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಹೆಸರಿಸಿದ್ದಾರೆ. ಆದರೆ, ಅವರು ಅಖಾಡಕ್ಕೆ ಇಳಿಯುತ್ತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+