ಮೋದಿ ಘೋಷಣೆಗೂ ಮುಂಚೆ ಲಾಕ್‌ಡೌನ್‌ ವಿಸ್ತರಿಸಿದ ತಮಿಳುನಾಡು

ಚೆನ್ನೈ, ಏಪ್ರಿಲ್ 13: ಏಪ್ರಿಲ್ 14ರವರೆಗೂ ದೇಶಾದ್ಯಂತ ಲಾಕ್‌ಡೌನ್‌ ಘೋಷಣೆ ಮಾಡಿದ್ದ ಪ್ರಧಾನಿ ಮೋದಿ ಏಪ್ರಿಲ್ 14ರ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಕುತೂಹಲ ಕಾಡುತ್ತಿದೆ. ಈ ಕುತೂಹಲದ ನಡುವೆ ನಾಳೆ ಬೆಳಿಗ್ಗೆ 10 ಗಂಟೆ ಮೋದಿ ದೇಶದ ಜನರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಲಾಕ್‌ಡೌನ್‌ ವಿಸ್ತರಣೆಯ ಬಗ್ಗೆ ಅಧಿಕೃತ ಘೋಷಣೆ ಮಾಡಬಹುದು ಎಂಬ ನಿರೀಕ್ಷೆ ಹೆಚ್ಚಿದೆ. ಇದೀಗ, ಮೋದಿಯ ಅಧಿಕೃತ ಘೋಷಣೆಗೂ ಮುಂಚೆಯೇ ತಮಿಳುನಾಡು ಸರ್ಕಾರ, ತನ್ನ ರಾಜ್ಯದಲ್ಲಿ ಏಪ್ರಿಲ್ 30ರವರೆಗೂ ಲಾಕ್‌ಡೌನ್‌ ವಿಸ್ತರಿಸಿದೆ. ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ.

ಕಳೆದ ಮೂರು ದಿನಗಳ ಹಿಂದೆಯಷ್ಟೇ ಪ್ರಧಾನಿ ಮೋದಿ, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಚರ್ಚೆ ನಡೆಸಿದ್ದರು. ಈ ಸಭೆಯಲ್ಲಿ ಬಹುತೇಕ ಎಲ್ಲ ರಾಜ್ಯಗಳು ಲಾಕ್‌ಡೌನ್‌ ವಿಸ್ತರಿಸುವುದು ಉತ್ತಮ ಎಂದು ಸಲಹೆ ನೀಡಿದ್ದರು.

ಎಲ್ಲ ರಾಜ್ಯದ ಸಿಎಂಗಳ ಬಳಿ ಮಾಹಿತಿ ಮತ್ತು ಅಭಿಪ್ರಾಯ ಪಡೆದುಕೊಂಡಿದ್ದ ಮೋದಿ, ಇದುವರೆಗೂ ಯಾವುದೇ ತೀರ್ಮಾನ ಘೋಷಿಸಿಲ್ಲ. ನಾಳೆ ಬೆಳಿಗ್ಗೆ ಮೋದಿ ಭಾಷಣ ಮಾಡಲಿದ್ದಾರೆ ಎಂದು ಪಿಎಂ ಕಚೇರಿ ತಿಳಿಸಿದೆ.

Lockdown In Tamilnadu Extended Till 30th April

ಅಂದ್ಹಾಗೆ, ತಮಿಳುನಾಡು ಸರ್ಕಾರಕ್ಕೂ ಮುಂಚೆಯೇ ನಾಲ್ಕೈದು ರಾಜ್ಯಗಳು ಲಾಕ್‌ಡೌನ್‌ ವಿಸ್ತರಿಸಿಕೊಂಡಿದೆ. ಪಂಜಾಬ್‌, ಮಹಾರಾಷ್ಟ್ರ, ಒಡಿಶಾ, ತೆಲಂಗಾಣ ಹಾಗೂ ದೆಹಲಿ ಸರ್ಕಾರ ಏಪ್ರಿಲ್ 30ರವರೆಗೂ ಲಾಕ್‌ಡೌನ್‌ ವಿಸ್ತರಿಸಿದೆ. ಉಳಿದ ರಾಜ್ಯಗಳು ಮೋದಿಯ ಘೋಷಣೆಗೆ ಕಾಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+