ಯುಎಸ್ ಕಾನ್ಸುಲೇಟ್ ಕಚೇರಿಯಲ್ಲಿ ಸಲಿಂಗ,ಅಂತರ್ಲಿಂಗ ಕಾಮಿಗಳ ಮಾಸಾಚರಣೆ
ಚೆನ್ನೈ, ಜು.3: ಚೆನ್ನೈನ ಯುನೈಟೆಡ್ ಕಾನ್ಸುಲೇಟ್ ಜನರಲ್ ಕಚೇರಿಯಲ್ಲಿ ಸಲಿಂಗ ಕಾಮಿಗಳು, ಬಹುಲಿಂಗ ಕಾಮಿಗಳು ಹಾಗೂ ಅಂತರ್ಲಿಂಗೀಯಕಾಮಿಗಳ ಹೆಮ್ಮೆಯ ಮಾಸವನ್ನು ಜೂನ್ ತಿಂಗಳಾದ್ಯಂತ ಆಚರಿಸಲಾಯಿತು.
ಯುಎಸ್ ಕಾನ್ಸುಲೇಟ್ ಜನರಲ್ ಚೆನ್ನೈ ಕಚೇರಿಯ ವಕ್ತಾರ ಅಲೆಕ್ಸಿಸ್ ವೂಲ್ಫ್ ಈ ಕುರಿತು ಹೇಳಿಕೆ ನೀಡಿ ಅಮೇರಿಕಾ ಕಾನ್ಸುಲೇಟ್ ಕಚೇರಿಯು ಪ್ರತಿವರ್ಷ ಸಲಿಂಗ, ಅಂತರ್ಲಿಂಗೀಯ ಹಾಗೂ ಬಹುರ್ಲಿಂಗ ಕಾಮಿಗಳ ಮಾಸವನ್ನು ಆಚರಿಸುತ್ತಾ ಬಂದಿದೆ, ಈ ಮೂಲಕ ಮಾನವ ಹಕ್ಕುಗಳ ರಕ್ಷಣೆ ಹಾಗೂ ಅವುಗಳ ಪೋಷಣೆ ಮಾಡುವುದು ಕಾಳಜಿಯಾಗಿದೆ.
ಎಲ್‌ಜಿಬಿಟಿಐ ಸಮುದಾಯದ ಜನರು ಕೂಡ ಸಮಾಜದಲ್ಲಿ ಹೆಮ್ಮೆಯಿಂದ ಮಾನವ ಹಕ್ಕುಗಳ ರಕ್ಷಣೆಯೊಂದಿಗೆ ಬದುಕಬೇಕೆಂಬುದು ನಮ್ಮ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ. ಎಲ್‌ಜಿಬಿಟಿಐ ಸಮೂಹದ ಹೆಮ್ಮೆಯ ಮಾಸಾಚರಣೆ ಭಾಗವಾಗಿ ಚೆನ್ನೈನ ಅಮೇರಿಕಾ ಕಾನ್ಸುಲೇಟ್ ಕಚೇರಿಯ ಮುಂಭಾಗದಲ್ಲಿ ಕಾಮನಬಿಲ್ಲು ಒಳಗೊಂಡ ಧ್ವಜವನ್ನು ಕಾನ್ಸುಲೇಟ್ ಜನರಲ್ ಬರ್ಗಿಸ್ ಧ್ವಜಾರೋಹಣ ಮಾಡುವ ಮೂಲಕ ಹೆಮ್ಮೆಯ ಮಾಸಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಎಲ್‌ಜಿಬಿಟಿಐ ಸಮೂಹದ ಸದಸ್ಯರು ಹಾಗೂ ನ್ಯಾಯವಾದಿಗಳು ಪಾಲ್ಗೊಂಡಿದ್ದರು. ಕಾನ್ಸುಲ್ ಕಚೇರಿಯ ಪಬ್ಲಿಕ್ ಡಿಪ್ಲಮಸಿ ಪಬ್ಲಿಕ್ ಅಫೇರ್ಸ್ ವಿಭಾಗ ಮುಖ್ಯಸ್ಥ ಲಾರೆನ್ ಅವರು ಇದೇ ವೇಳೆ ತಜ್ಞರೊಂದಿಗೆ ಮಾತುಕತೆ ಆಯೋಜಿಸಿದ್ದರು,.
ಈ ಸಂದರ್ಭದಲ್ಲಿ ಸಲಿಂಗ, ಬಹುರ್ಲಿಂಗ ಹಾಗೂ ಅಂತರ್ಲಿಂಗೀಯ ಕಾಮಿಗಳ ಮಾನವ ಹಕ್ಕುಗಳ ರಕ್ಷಣೆ ಕುರಿತಾಗಿ ಚರ್ಚೆ ನಡೆಯುತು. ಸಂದರ್ಭದಲ್ಲಿ ನಾನು ಅವನಲ್ಲ ಅವಳು ಚಿತ್ರನಟ ಸಂಚಾರಿ ವಿಜಯ್ ಭಾಗವಹಿಸಿದ್ದರು.












Click it and Unblock the Notifications