ಇನ್ಫೋಸಿಸ್ ಟೆಕ್ಕಿ ಸ್ವಾತಿ ಕೊಂದವನ ಆತ್ಮಹತ್ಯೆ ಹೈಡ್ರಾಮ

Posted By:
Subscribe to Oneindia Kannada

ಚೆನ್ನೈ, ಜುಲೈ 02 : ಇನ್ಫೋಸಿಸ್ ಉದ್ಯೋಗಿ ಸ್ವಾತಿ ಹತ್ಯೆ ಪ್ರಕರಣದ ಆರೋಪಿಯನ್ನು ತಿರುನಲ್ವೇಲಿಯಲ್ಲಿ ಬಂಧಿಸಲಾಗಿದೆ. ಚೆನ್ನೈನ ನುಂಗಂಬಾಕ್ಕಂ ರೈಲು ನಿಲ್ದಾಣದಲ್ಲಿ ಜೂನ್ 24 ರಂದು ಸ್ವಾತಿ ಹತ್ಯೆ ನಡೆದಿತ್ತು.

ಬಂಧಿತ ಆರೋಪಿಯನ್ನು ರಾಮ ಕುಮಾರ್ (22) ಎಂದು ಗುರುತಿಸಲಾಗಿದೆ. ಶುಕ್ರವಾರ ರಾತ್ರಿ ಪೊಲೀಸರು ರಾಮ ಕುಮಾರ್ ಬಂಧಿಸಲು ಸುತ್ತುವರೆದಾಗ ಕುತ್ತಿಗೆ ಕೊಯ್ದುಕೊಂಡು ಆತ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ. [ಹತ್ಯೆಯಾದ ಇನ್ಫಿ ಸ್ವಾತಿಗೆ ಮತ್ತೊಬ್ಬ ಕಪಾಳಮೋಕ್ಷ ಮಾಡಿದ್ದ!]

ramkumar

ಆತನನ್ನು ವಶಕ್ಕೆ ಪಡೆದ ಪೊಲೀಸರು ತಿರುನಲ್ವೇಲಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ತಿರುನಲ್ವೇಲಿ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ. ರಾಮ ಕುಮಾರ್ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. [ಇನ್ಫೋಸಿಸ್ ಮಹಿಳಾ ಉದ್ಯೋಗಿ ಬರ್ಬರ ಹತ್ಯೆ]

ಬಂಧಿತ ಆರೋಪಿ ತಿರುನಲ್ವೇಲಿಯಲ್ಲಿನ ಮೀನಾಕ್ಷಿಪುರಂನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದ. ಜೂನ್ 24ರಂದು ಸ್ವಾತಿ ಕೆಲಸಕ್ಕೆ ಹೋಗಲು ರೈಲಿಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ರಾಮ ಕುಮಾರ್ ಆಕೆಯನ್ನು ಹತ್ಯೆ ಮಾಡಿದ್ದ. ಈ ಪ್ರಕರಣದ ಭಾರೀ ಚರ್ಚೆಗೆ ಕಾರಣವಾಗಿತ್ತು.

ರಾಮ ಕುಮಾರ್ ಬಂಧನಕ್ಕಾಗಿ 100 ಪೊಲೀಸರ ವಿಶೇಷ ತಂಡ ರಚನೆ ಮಾಡಲಾಗಿತ್ತು, ರೈಲ್ವೆ ಪೊಲೀಸರು, ಸೈಬರ್ ಕ್ರೈಂ ಪೊಲೀಸರು ಆರೋಪಿಯ ಬಂಧನಕ್ಕೆ ಸಹಕಾರ ನೀಡಿದರು. ಹಲವು ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು, ಜೂನ್ 25ರಂದು ರಾಮ ಕುಮಾರ್ ರೇಖಾ ಚಿತ್ರ ಬಿಡುಗಡೆ ಮಾಡಲಾಗಿತ್ತು. [ಸ್ವಾತಿ ಗೆಳತಿ ಬಿಚ್ಚಿಟ್ಟ ಆಘಾತಕಾರಿ ಮಾಹಿತಿ]

ramkumar

ಪೊಲೀಸರಿಂದ ತಪ್ಪಿಸಿಕೊಳ್ಳಲು ಆತ್ಮಹತ್ಯೆಗೆ ಯತ್ನಿಸಿ, ತಿರುನಲ್ವೇಲಿ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಮ ಕುಮಾರ್ ಚೇತರಿಸಿಕೊಂಡ ಬಳಿಕ ಹತ್ಯೆಗೆ ನಿಖರವಾದ ಕಾರಣ ತಿಳಿದುಬರಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Infosys techie Swathi murder accused arrested in Tirunelveli. Ramkumar from Meenakshipuram in Tirunelveli. S. Swathi (24) murderd at the Nungambakkam railway station in Chennai, on June 25, 2016.
Please Wait while comments are loading...