ನಟ ಆರ್ ಮಾಧವನ್ ವಿರುದ್ಧ ಭೂ ಕಬಳಿಕೆ ಆರೋಪ

Posted By:
Subscribe to Oneindia Kannada

ಚೆನೈ, ಜೂನ್ 22: ಬಹುಭಾಷಾ ನಟ ಆರ್ ಮಾಧವನ್ ಅವರಿಗೆ ಮದ್ರಾಸ್ ಹೈಕೋರ್ಟಿನಿಂದ ನೋಟಿಸ್ ಜಾರಿ ಮಾಡಲಾಗಿದೆ. ದಿಂಡಿಗಲ್ ಜಿಲ್ಲೆಯಲ್ಲಿ ನೀರಿನ ಕಾಲುವೆ ಪಕ್ಕದ ಜಾಗವನ್ನು ಕಬಳಿಸಿದ ಆರೋಪ ಹೊತ್ತಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಸ್ಟೀಸ್ ಕೆಕೆ ಶಶಿಧರನ್, ಬಿ ಗೋಕುಲದಾಸ್ ಅವರು ಈ ಕುರಿತಂತೆ ನಟ ಮಾಧವನ್ ಗೆ ನೋಟಿಸ್ ಜಾರಿ ಮಾಡಿದ್ದಾರೆ.

ಸದ್ಯ ಮುಂಬೈನಲ್ಲಿ ನೆಲೆಸಿರುವ ಮಾಧವನ್ ಅವರಿಗೆ ನೋಟಿಸ್ ಜಾರಿ ಮಾಡುವಂತೆ ದಿಂಡಿಗಲ್ ಜಿಲ್ಲಾ ಕಲೆಕ್ಟರ್ ಅವರಿಗೆ ನಿರ್ದೇಶಿಸಲಾಗಿದೆ. ಮುಂದಿನ ವಿಚಾರಣೆಯಲ್ಲಿ ಜುಲೈ 11ಕ್ಕೆ ಮುಂದೂಡಲಾಗಿದೆ.

HC issues notice to actor R Madhavan over alleged encroachment

ದಿಂಡಿಗಲ್ ಜಿಲ್ಲೆಯ ಅರ್ಜಿದಾರ ಎನ್ ಗಣೇಶನ್ ಅವರು ಅಯ್ಯಂ ಪೌಲಿ ಹಾಗೂ ಬಾಲಸಮುದ್ರಂ ಗ್ರಾಮಕ್ಕೆ ಸೇರಿದ ರಾಜವಿಕ್ಕಲ್ ಕಾಲುವೆಗೆ ಸೇರಿದ ಭೂಮಿಯನ್ನು ಆರ್ ಮಾಧವನ್ ಅವರು ಅತಿಕ್ರಮಣ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಮಾರ್ಚ್ 16, 2015ರಂದು 4.88 ಎಕರೆ ಭೂಮಿ ಖರೀದಿಸಿರುವ ಮಾಧವನ್ ಅವರು ತಮ್ಮ ಜಾಗಕ್ಕೆ ಬೇಲಿ ಹಾಕುವಾಗ ಪಕ್ಕದ ಕಾಲುವೆಯ ಭೂಮಿಯನ್ನು ಅತಿಕ್ರಮಿಸಿದ್ದಲ್ಲದೆ, ಕಾಲುವೆಯನ್ನು ಹಾಳುಗೆಡವಿದ್ದಾರೆ ಎಂದು ದೂರಲಾಗಿದೆ.(ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Madras High Court has issued notice to Tamil film actor R Madhavan on a PIL accusing him of encroaching upon a water channel adjacent to land purchased by him in Dindigul district.
Please Wait while comments are loading...