GoBackModi... ತಮಿಳುನಾಡಿನಲ್ಲಿ ಮೋದಿಗೆ ಧಿಕ್ಕಾರದ ಸುರಿಮಳೆ!
Recommended Video
ಚೆನ್ನೈ, ಅಕ್ಟೋಬರ್ 11: ತಮಿಳುನಾಡಿನ ಮಹಾಬಲಿಪುರಂನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ಭೇಟಿ ಇಡೀ ದೇಶದ ಗಮನ ಸೆಳೆದಿದೆ. ಆದರೆ ಪ್ರಧಾನಿಗೆ ಮಾತ್ರ ತಮಿಳುನಾಡಿನಲ್ಲಿ ನಿರೀಕ್ಷಿತ ಸ್ವಾಗತ ದೊರಕಿಲ್ಲ.
ಟ್ವಿಟ್ಟರ್ ನಲ್ಲಿ TNWelcomesModi ಗಿಂತ ಹೆಚ್ಚಾಗಿ GoBackModi ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿರುವುದೇ ಅದಕ್ಕೆ ಸಾಕ್ಷಿ! ಸದ್ಯಕ್ಕೆ GoBackModi ಟ್ವಿಟ್ಟರ್ ನ ಇಂಡಿಯಾ ಟ್ರೆಂಡಿಂಗ್ ನಲ್ಲಿ ನಂ.1 ಸ್ಥಾನದಲ್ಲಿದೆ! ತಮಿಳರು ಚೀನಾದ ಮ್ಯಾಂಡರಿನ್ ಭಾಷೆಯಲ್ಲೂ GoBackModi ಯನ್ನು ಟ್ರೆಂಡ್ ಮಾಡಿದ್ದಾರೆ!
ಇದಕ್ಕೂ ಮುನ್ನವೂ ಮೋದಿ ತಮಿಳುನಾಡಿಗೆ ಆಗಮಿಸಿದಾಗೆಲ್ಲ ಇಂಥದೇ ಗೋ ಬ್ಯಾಕ್ 'ಸ್ವಾಗತ' ಲಭ್ಯವಾಗಿತ್ತು. ದಕ್ಷಿಣ ಭಾರತವನ್ನು ಕೇಂದ್ರ ಸರ್ಕಾರ ಕಡೆಗಣಿಸುತ್ತಿದೆ, ಪ್ರಾದೇಶಿಕ ಪಕ್ಷಗಳಿಗೆ ಬೆಲೆ ಇಲ್ಲದಂತಾಗಿದೆ, ಹಿಂದಿ ಹೇರಿಕೆ ಎಂಬಿತ್ಯಾದಿ ಆರೋಪಗಳಿಂದಾಗಿ ತಮಿಳುನಾಡಿನ ಜನ ಪ್ರಧಾನಿ ಮೋದಿ ಅವರನ್ನು ಸಂಭ್ರಮದಿಂದ ಸ್ವಾಗತಿಸುವ ಮನಸ್ಥಿತಿಯಲ್ಲಿಲ್ಲ.

ಮೋದಿ ಬಂದಾಗಲೆಲ್ಲ ಟ್ರೆಂಡ್ ಮಾಡಿ
GoBackModi ಮತ್ತೆ ಟ್ರೆಂಡಿಂಗ್ ಆಗಿದೆ. ರೇಸಿಸ್ಟ್, ಫ್ಯಾಸಿಸ್ಟ್ ಮೋದಿ ತಮಿಳುನಾಡಿಗೆ ಬಂದಾಗಲೆಲ್ಲ ಇದನ್ನು ಟ್ರೆಂಡ್ ಮಾಡಿ ಎಂದು ಸುರೇಂದ್ರ ಎಂಬುವವರು ಟ್ವೀಟ್ ಮಾಡಿದ್ದಾರೆ.

ಒಂದು ದೇಶ, ಒಂದೇ ಘೋಷಣೆ
ಒಂದು ದೇಶ, ಒಂದು ಚುನಾವಣೆ... ಒಂದೇ ಘೋಷಣೆ ಅದು GoBackModi ಎಂದು ಪ್ರಯೀಕ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಯಾಕೆ ಟ್ರೆಂಡಿಂಗ್ ಆಗಿದೆ ಅನ್ನೋದು ಗೊತ್ತು!
ಪ್ರಧಾನಿ ಮೋದಿ ತಮಿಳು ನಾಡು ಮತ್ತು ಕೇರಳಕ್ಕೆ ಹೋಗುವಾಗೆಲ್ಲ GoBackModi ಟ್ರೆಂಡಿಂಗ್ ಆಗುತ್ತಿದೆ. ಅದು ಯಾಕೆ ಎಂಬುದು ಗೊತ್ತು. ಏಕೆಂದರೆ ತಮಿಳುನಾಡು ಮತ್ತು ಕೇರಳದಲ್ಲಿ ಅತೀ ಹೆಚ್ಚಿನ ಸಂಖ್ಯೆಯ ಐಸಿಸ್ ನೇಮಕಾತಿಗಳು ನಡೆಯುತ್ತಲೆ ಎಂದಿದ್ದಾರೆ ಶೆಹ್ಲಾ ರಶಿದ್ ಚಂದೇ ವಾಲಿ.

ತಮಿಳುನಾಡಿಗೆ ಗೋ ಬ್ಯಾಕ್ ಮೋದಿ ಡೇ!
ಇಡೀ ಜಗತ್ತಿಗೆ ಇಂದು ಶುಕ್ರವವಾರ. ಆದರೆ ತಮಿಳುನಾಡಿಗೆ ಇಂದು GoBackModi ಡೇ! GoBackModi ಡೇಯ ಶುಭಾಶಯಗಳು ಎಂದಿದ್ದಾರೆ ವಿಕ್ರಾಂತ್ ಶುಕ್ಲಾ?












Click it and Unblock the Notifications