ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಲಲಿತಾ ಸ್ವಾಗತಿಸಿದ ರಜನಿ, ಬಿಜೆಪಿಗೆ ಆತಂಕ

By Mahesh
|
Google Oneindia Kannada News

ಚೆನ್ನೈ, ಅ.20: ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಅವರು ವಾಪಸ್ ನಮ್ಮ ಬಡಾವಣೆಗೆ ಬಂದಿರುವುದು ಸಂತೋಷದ ಸಂಗತಿ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಪ್ರತಿಕ್ರಿಯಿಸಿದ್ದಾರೆ. ಇನ್ಮುಂದೆ ಅವರಿಗೆ ಉತ್ತಮ ಆರೋಗ್ಯ, ಶಾಂತಿ ಲಭಿಸಲಿ ಎಂದು ಹಾರೈಸಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಯಲಲಿತಾ ಅವರು ಜೈಲು ಪಾಲಾಗುತ್ತಿದ್ದಂತೆ ತಮಿಳುನಾಡಿನಲ್ಲಿ ಉಂಟಾಗಿರುವ ರಾಜಕೀಯ ಸ್ಥಿತ್ಯಂತರಗಳನ್ನು ಸೂಕ್ಷ್ಮವಾಗಿ ಗಮನಿಸಿದ ಬಿಜೆಪಿ ತನ್ನದೇ ಆದ ರೀತಿಯಲ್ಲಿ ಲಾಭ ಪಡೆಯಲು ಮುಂದಾಗಿತ್ತು. ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ನಟಿ ಖುಷ್ಬೂ ಅವರನ್ನು ಬಿಜೆಪಿಗೆ ಕರೆ ತರಲು ಇದೇ ಸಕಾಲ ಎಂದು ತನ್ನ ಯತ್ನ ಮುಂದುವರೆಸಿತ್ತು.

ಅದರೆ, ಈಗ ಜಯಲಲಿತಾ ಅವರು ಪೊಯಸ್ ಗಾರ್ಡನ್ ಏರಿಯಾಗೆ ಮತ್ತೆ ಮರಳಿರುವುದನ್ನು ಸ್ವಾಗತಿಸಿದ ರಜನಿ, ಅವರಿಗೆ ಯಾವಾಗಲೂ ಹಿತವನ್ನು ಬಯಸುತ್ತೇನೆ, ಉತ್ತಮ ಆರೋಗ್ಯ ಸಿಗಲಿ ಎಂದು ಜಯಾ ಅವರಿಗೆ ಪತ್ರ ಬರೆದಿದ್ದಾರೆ. ದೀಪಾವಳಿ ಶುಭ ಹಾರೈಕೆಯನ್ನು ಹೊಂದಿರುವ ಈ ಪತ್ರ ಎಐಎಡಿಎಂಕೆ ಕಚೇರಿ ತಲುಪಿದೆ. [ಮೋದಿ ಜತೆಯಲ್ಲಿ ಸೂಪರ್ ಸ್ಟಾರ್ ರಜನಿ]

ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಮೇನಕಾ ಗಾಂಧಿ ಹಾಗೂ ಜಯಲಲಿತಾ ವಿರುದ್ಧ ಪ್ರಬಲ ಶಕ್ತಿಯಾಗಿ ಬೆಳೆಸಲು ಬಿಜೆಪಿ ಇಚ್ಛಿಸಿದ್ದ ರಜನಿಕಾಂತ್ ಅವರು ಜಯಲಲಿತಾ ಪರ ಕಾಳಜಿ ತೋರಿಸುತ್ತಿರುವುದು ಬಿಜೆಪಿಗೆ ಭಾರಿ ಹೊಡೆತ ನೀಡುವ ಸೂಚನೆ ಸಿಕ್ಕಿದೆ.

ತಮಿಳುನಾಡಿನಲ್ಲಿ ಬಿಜೆಪಿ ಕಟ್ಟಿ ಬೆಳೆಸಲು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಜನಾಥ್ ಸಿಂಗ್ ಅವರು ಹಾಕಿದ್ದ ಮೈತ್ರಿ ಎಂಬ ಸಸಿಗೆ ಭಾರಿ ಹೊಡೆತ ಬಿದ್ದಿದೆ ಎನ್ನಬಹುದು. ಜಯಾ ಅವರಿಗೆ ರಜನಿ, ಮೇನಕಾ ಬರೆದ ಪತ್ರದ ಪ್ರತಿ ಮುಂದಿದೆ ಓದಿ...

ಜಯಲಲಿತಾ ಅವರಿಗೆ ದೀಪಾವಳಿ ಶುಭ ಹಾರೈಕೆ

ಜಯಲಲಿತಾ ಅವರಿಗೆ ದೀಪಾವಳಿ ಶುಭ ಹಾರೈಕೆ

ಜಯಲಲಿತಾ ಅವರಿಗೆ ದೀಪಾವಳಿ ಶುಭ ಹಾರೈಕೆ ಪತ್ರ ಕಳಿಸಿದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಅದರಲ್ಲಿ ಜಯಾ ಅವರ ಆರೋಗ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ರಜನಿ ಅವರ ಪತ್ರದಿಂದ ಸಹಜವಾಗಿ ತಮಿಳುನಾಡಿನ ಬಿಜೆಪಿ ಆತಂಕಕ್ಕೊಳಗಾಗಿದೆ.

ರಜನಿ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಯತ್ನ ವಿಫಲವಾಗುತ್ತಿರುವ ಬೆನ್ನಲ್ಲೇ ರಜನಿ ಅವರು ಜಯಲಲಿತಾ ಅವರನ್ನು ಹೊಗಳಿರುವುದು ಬಿಜೆಪಿಗೆ ಇರಸು ಮುರುಸಾಗಿದೆ. ನಿನ್ನೆಯಿನ್ನೂ ಮಹಾರಾಷ್ಟ್ರ ಹಾಗೂ ಹರ್ಯಾಣ ಅಸೆಂಬ್ಲಿ ಚುನಾವಣೆಯಲ್ಲಿ ಗೆದ್ದ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ತಮಿಳುನಾಡು ಬಿಜೆಪಿ ಘಟಕಕ್ಕೆ ರಜನಿ ಪತ್ರ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ನೊಂದವರಿಗೆ ಸಂತ್ರಸ್ತರಿಗೆ ಮಿಡಿದ ಅಮ್ಮ

ನೊಂದವರಿಗೆ ಸಂತ್ರಸ್ತರಿಗೆ ಮಿಡಿದ ಅಮ್ಮ

ಚೆನ್ನೈ ತಲುಪಿದ್ದಂತೆ ಜಯಾ ಅವರು ತಾವು ಜೈಲಿನಲ್ಲಿದ್ದಾಗ ಆತ್ಮಹತ್ಯೆ ಮಾಡಿಕೊಂಡ ತಮ್ಮ ಅಭಿಮಾನಿಗಳಿಗೆ ಪರಿಹಾರ ಧನ ಘೋಷಿಸಿದ್ದಾರೆ. ಸುಮಾರು 193 ವ್ಯಕ್ತಿಗಳು ಸಾವನ್ನಪ್ಪಿದ್ದರು ಅವರ ಕುಟುಂಬಗಳಿಗೆ ತಲಾ 3 ಲಕ್ಷ ರು ಹಾಗೂ ಗಾಯಗೊಂಡವರಿಗೆ ತಲಾ 50,000 ರು ಘೋಷಿಸಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್ ಬರೆದ ಪತ್ರದ ಪ್ರತಿ

ಸೂಪರ್ ಸ್ಟಾರ್ ರಜನಿಕಾಂತ್ ಬರೆದ ಪತ್ರದ ಪ್ರತಿ ಹೀಗಿದೆ

ಮೇನಕಾ ಗಾಂಧಿ ಬರೆದ ಪತ್ರದ ಪ್ರತಿ

ಕೇಂದ್ರ ಸಚಿವೆ ಮೇನಕಾ ಗಾಂಧಿ ಬರೆದ ಪತ್ರದ ಪ್ರತಿಯನ್ನು ಪ್ರಕಟಿಸಿದ ಪತ್ರಕರ್ತೆ ಪಿಂಕಿ ರಾಜ್ ಪುರೋಹಿತ್

ಡಿಎಂಕೆ ಪರ ನಿಂತಿದ್ದ ರಜನಿ

ಡಿಎಂಕೆ ಪರ ನಿಂತಿದ್ದ ರಜನಿ

1996ರಲ್ಲಿ ಡಿಎಂಕೆ-ಟಿಎಂಸಿ ಪರ ರಜನಿಕಾಂತ್ ಬೆಂಬಲ ವ್ಯಕ್ತಪಡಿಸಿದ್ದರು. ಇದರಿಂದ ಎಂ ಕರುಣಾನಿಧಿ ಅಧಿಕಾರಕ್ಕೆ ಬಂದಿದ್ದರು. ಜಯಲಲಿತಾ ಅವರಿಗೆ ಅಲ್ಲಿಂದ ಅಕ್ರಮ ಆಸ್ತಿ ಭೂತ ಕಾಡತೊಡಗಿತು. ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿಯವರು ರಜನಿಕಾಂತ್ ಬಿಜೆಪಿ ಸೇರ್ಪಡೆಗೆ ಬಲವಾಗಿ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ರಜನಿ ಅವರ ಸೇರ್ಪಡೆ ವಿಳಂಬವಾಗುತ್ತಿದೆ ಎಂದು ತಿಳಿದು ಬಂದಿದೆ.

ರಜನಿ ಸೇರ್ಪಡೆಗೆ ಅಮಿತ್ ಶಾ ಒಲವು

ರಜನಿ ಸೇರ್ಪಡೆಗೆ ಅಮಿತ್ ಶಾ ಒಲವು

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ಪೊಯಸ್ ಗಾರ್ಡನ್ ನಲ್ಲಿರುವ ರಜನಿ ಅವರ ನಿವಾಸಕ್ಕೆ ಆಗಮಿಸಿ ಭೇಟಿ ಮಾಡಿದ್ದು ದಕ್ಷಿಣ ಭಾರತದಲ್ಲಿ ಎನ್ಡಿಎ ಬಲಗೊಳ್ಳಲು ಸಹಾಯಕವಾಗಿತ್ತು. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಕೂಡಾ ರಜನಿ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಉತ್ಸುಕರಾಗಿದ್ದಾರೆ ಎಂದು ತಿಳಿದು ಬಂದಿದೆ.

ರಜನಿಕಾಂತ್ ಅವರಿಂದ ಹೊಸ ಪಕ್ಷ ?

ರಜನಿಕಾಂತ್ ಅವರಿಂದ ಹೊಸ ಪಕ್ಷ ?

ಕಳೆದ ಲೋಕಸಭೆ ಚುನಾವಣೆ 2014 ರಲ್ಲಿ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷ ಹೀನಾಯ ಸೋಲು ಕಂಡಿತ್ತು. ಜಯಲಲಿತಾ ನೇತೃತ್ವದ ಎಐಎಡಿಎಂಕೆ ಪಕ್ಷ 39 ಸೀಟುಗಳ 37 ಸೀಟು ಗೆದ್ದು ಭರ್ಜರಿ ವಿಜಯ ದಾಖಲಿಸಿದೆ. ಈ ನಡುವೆ 2016ರ ವಿಧಾನಸಭೆ ಚುನಾವಣೆಯತ್ತ ಗಮನ ಹರಿಸಿರುವ ರಜನಿಕಾಂತ್ ಅವರು ಹೊಸ ಪಕ್ಷ ಕಟ್ಟುತ್ತಾರೆ ಎಂಬ ಸುದ್ದಿಯೂ ಹಬ್ಬಿದೆ. [ವಿವರ ಇಲ್ಲಿದೆ]

ನಟಿ ಕಮ್ ರಾಜಕಾರಣಿ ಖುಷ್ಬೂ

ನಟಿ ಕಮ್ ರಾಜಕಾರಣಿ ಖುಷ್ಬೂ

'ನನ್ನ ಶ್ರಮಕ್ಕೆ ಸರಿಯಾದ ಮನ್ನಣೆ ಸಿಕ್ಕಿಲ್ಲ. ಇದರಿಂದ ನಾನು ತುಂಬಾ ಒತ್ತಡ ಅನುಭವಿಸಬೇಕಾಗಿ ಬಂತು ಎಂದು ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಅವರಿಗೆ ಖುಷ್ಬೂ ಬರೆದ ಪತ್ರ ಬರೆದು ಡಿಎಂಕೆ ತೊರೆದಿದ್ದರು.

ನಂತರ ಬಿಜೆಪಿ ಸೇರುವಂತೆ ಕೇಂದ್ರ ಸಚಿವೆಯರಾದ ಸ್ಮೃತಿ ಇರಾನಿ ಹಾಗೂ ನಜ್ಮಾ ಹೆಫ್ತುಲ್ಲಾ ಅವರು ಖುಷ್ಬೂಗೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಅದರೆ, ಈ ಬಗ್ಗೆ ಹೆಚ್ಚಿನ ಬೆಳವಣಿಗೆ ಇನ್ನೂ ಕಂಡು ಬಂದಿಲ್ಲ. ['ಕಮಲ' ಪರವಾದ ಖುಷ್ಬೂ?]
 ಮೇನಕಾ ಗಾಂಧಿ ಪತ್ರ ಬರೆದಿದ್ದೇಕೆ?

ಮೇನಕಾ ಗಾಂಧಿ ಪತ್ರ ಬರೆದಿದ್ದೇಕೆ?

ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಮೇನಕಾ ಗಾಂಧಿ ಅವರು ಜಯಾ ಜೈಲು ಸೇರಿದ್ದು ದುಃಖಕರ ಸಂಗತಿ, ಅವರು ಜಾಮೀನಿನ ಮೇಲೆ ಹೊರ ಬಂದಿರುವುದು ಸಂತಸದ ವಿಷಯ, ಅವರ ಹೋರಾಟದ ಬದುಕು ಸ್ಪೂರ್ತಿದಾಯಕ ಎಂದು ಹೊಗಳಿದ್ದಾರೆ. ಮೇನಕಾ ಗಾಂಧಿ ಪತ್ರ ಈಗ ತಮಿಳುನಾಡು ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ. ತಮಿಳುನಾಡಿನಲ್ಲಿ ಬಿಜೆಪಿ ಕಟ್ಟಿ ಬೆಳೆಸಲು ಹಾಕಿದ್ದ ಅಡಿಪಾಯಕ್ಕೆ ಆರಂಭದಲ್ಲೇ ಭಾರಿ ಹೊಡೆತ ಬಿದ್ದಿದೆ.

English summary
Actor Rajnikanth on Sunday said he was "glad" to see AIADMK chief Jayalalithaa back in her Poes Garden residence after being granted bail in a graft case and wished her good health and peace.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X