ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಜನಿಕಾಂತ್ ಹೊಸ ಪಕ್ಷ ಕಟ್ಟುವುದು ಗ್ಯಾರಂಟಿ?

|
Google Oneindia Kannada News

ಬೆಂಗಳೂರು, ಆ.30 : ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಬರುತ್ತಾರಾ? ಲೋಕಸಭೆ ಚುನಾವಣೆಯ ದಿನಗಳಿಂದಲೂ ಈ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಸದ್ಯದ ಮಾಹಿತಿ ಪ್ರಕಾರ 2016ರ ತಮಿಳುನಾಡು ವಿಧಾನಸಭೆ ಚುನಾವಣೆ ವೇಳೆಗೆ ರಜನಿ ರಾಜಕೀಯಕ್ಕೆ ಧುಮುಕಲಿದ್ದಾರೆ.

ರಜನಿಕಾಂತ್ ಅವರ ಕುಟುಂಬದವರು ಮತ್ತು ಸ್ನೇಹಿತರು ರಾಜಕೀಯಕ್ಕೆ ಬನ್ನಿ ಎಂದು ರಜನಿಗೆ ಸಲಹೆ ನೀಡುತ್ತಿದ್ದಾರೆ ಮತ್ತು ಒತ್ತಾಯಿಸುತ್ತಿದ್ದಾರೆ. ಅದರಲ್ಲೂ ಲೋಕಸಭೆ ಚುನಾವಣೆ ವೇಳೆಯಲ್ಲಿ ನರೇಂದ್ರ ಮೋದಿ ಅವರು ರಜನಿ ಅವರನ್ನು ಭೇಟಿ ಮಾಡಿ ಹೋದ ನಂತರ ಒತ್ತಡ ಹೆಚ್ಚಾಗಿದೆ. [ಮೋದಿ ಜತೆಯಲ್ಲಿ ಸೂಪರ್ ಸ್ಟಾರ್ ರಜನಿ]

Rajinikanth

ಇತ್ತ ಬಿಜೆಪಿ ರಾಷ್ಟ್ರಾಧ್ಯಕ್ಷರಾದ ಅಮಿತ್ ಶಾ ಅವರು ಸಹ ರಜನಿಗೆ ಕರೆ ಮಾಡಿ ರಾಜಕೀಯಕ್ಕೆ ಬನ್ನಿ ಎಂದು ಆಹ್ವಾನ ನೀಡುತ್ತಿದ್ದಾರೆ ಎನ್ನುತ್ತವೆ ರಜನಿ ಅವರ ಆಪ್ತ ಮೂಲಗಳು. ಆದ್ದರಿಂದ ರಜನಿಕಾಂತ್ ರಾಜಕೀಯಕ್ಕೆ ಬರುವ ಚಿಂತನೆ ನಡೆಸಿದ್ದಾರೆ. [ಚೌತಿ ಹಬ್ಬಕ್ಕೆ ರಜನಿ 'ಲಿಂಗಾ' ಚೂಟಿ ಫಸ್ಟ್ ಲುಕ್]

ಕುಸಿದ ಡಿಎಂಕೆ ಬಲ : ರಜನಿಕಾಂತ್ ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರು ಪರಮಾಪ್ತರು ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದ್ದರಿಂದ ರಜನಿಕಾಂತ್ ಇಷ್ಟುದಿನ ರಾಜಕೀಯಕ್ಕೆ ಬಂದಿರಲಿಲ್ಲ. ಡಿಎಂಕೆಗೆ ಪೈಪೋಟಿ ನೀಡುವುದು ಬೇಡ ಎಂದು ರಜನಿ ಮೌನವಹಿಸಿದ್ದರು. ಸದ್ಯ, ತಮಿಳುನಾಡಿನಲ್ಲಿ ಡಿಕೆಎಂಕೆ ಬಲ ಕುಸಿದಿದೆ. ಆದ್ದರಿಂದ ರಜನಿ ಅವರ ರಾಜಕೀಯ ಸೇರ್ಪಡೆಗೆ ವೇದಿಕೆ ಸಿದ್ಧಗೊಂಡಿದೆ.

2016ರಲ್ಲಿ ತಮಿಳುನಾಡಿನ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ರಾಜಕಾರಣಕ್ಕೆ ಬಂದು ಚುನಾವಣೆಗೆ ಸ್ಪರ್ಧಿಸುವಂತೆ ರಜನಿಕಾಂತ್ ಅವರಿಗೆ ಸ್ನೇಹಿತರು ಮತ್ತು ಕುಟುಂಬದವರು ಸಲಹೆ ನೀಡಿದ್ದಾರೆ. ನೀವು ರಾಜಕೀಯಕ್ಕೆ ಬಂದರೆ ನಿಮ್ಮ ಅಭಿಮಾನಿಗಳು ಜೊತೆ ನಿಲ್ಲುತ್ತಾರೆ ಎಂದು ಧೈರ್ಯ ತುಂಬಿದ್ದಾರೆ.

ಸ್ವಂತ ಪಕ್ಷ ಸ್ಥಾಪನೆ : ರಜನಿಕಾಂತ್ ಅವರ ಆಪ್ತರ ಪ್ರಕಾರ ರಜನಿ ಅವರು ಯಾವುದೇ ಪಕ್ಷ ಸೇರುವುದಿಲ್ಲ. ಬದಲಾಗಿ ತಮ್ಮದೇ ಸ್ವಂತ ಪಕ್ಷವನ್ನು ಸ್ಥಾಪಿಸಲಿದ್ದಾರೆ. ಚುನಾವಣೆ ಸಮಯದಲ್ಲಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಿದ್ದಾರೆ. ಸ್ವಂತ ಪಕ್ಷ ಸ್ಥಾಪಿಸಲು ರಜನಿಕಾಂತ್ ಸಹ ಒಪ್ಪಿಗೆ ನೀಡಿದ್ದು, ಶೀಘ್ರದಲ್ಲೇ ಈ ಕುರಿತ ಅಂತಿಮ ನಿರ್ಧಾರ ಘೋಷಿಸಲಿದ್ದಾರೆ ಎಂದು ತಿಳಿದುಬಂದಿದೆ.

ಒಂದು ಕಡೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅಮ್ಮಾ ಬ್ರಾಂಡ್‌ಗಳ ಮೂಲಕ ರಾಜ್ಯದಲ್ಲಿ ಮುಂದಿನ ವಿಧಾನಸಭೆ ಚುನಾವಣೆಗೆ ವೇದಿಕೆ ಗಟ್ಟಿಗೊಳಿಸಿಕೊಳ್ಳುತ್ತಿದ್ದಾರೆ. ಇದೇ ಸಮಯಕ್ಕೆ ರಜನಿ ಅವರು ರಾಜಕೀಯಕ್ಕೆ ಧುಮುಕಿದರೆ, 2016ರ ವಿಧಾನಸಭೆ ಚುನಾವಣೆ ದೇಶದ ಗಮನಸೆಳೆಯುವುದರಲ್ಲಿ ಸಂಶಯವಿಲ್ಲ.

English summary
We all know about Superstar Rajinikanth's (@superstarrajini) huge fan following. For more than a decade, his fans want him to join politics but he has always evaded the topic. Now according to reports, there is a buzz of the actor joining politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X