ಚೆನ್ನೈ ಟೆಕ್ಕಿ ಸ್ವಾತಿ ಹತ್ಯೆ ಕುರಿತ ಚಿತ್ರ ನಿಷೇಧಕ್ಕೆ ಆಗ್ರಹ

ಕಳೆದ ವರ್ಷ ಜೂನ್ 24ರಂದು ಚೆನ್ನೈನ ರೈಲ್ವೇ ನಿಲ್ದಾಣದಲ್ಲಿ ಇನ್ಫೋಸಿಸ್ ಮಹಿಳಾ ಟೆಕ್ಕಿ ಸ್ವಾತಿಯನ್ನು ರಾಮ್ ಕುಮಾರ್ ಎಂಬಾತ ಇರಿದು ಕೊಂದಿದ್ದಾಗಿ ಪೊಲೀಸರು ತಿಳಿಸಿದ್ದರು.

ಚೆನ್ನೈ, ಜೂನ್ 1: ಕಳೆದ ವರ್ಷ ಜನನಿಬಿಡ ರೈಲ್ವೇ ನಿಲ್ದಾಣವೊಂದರಲ್ಲಿ ಇನ್ಫೋಸಿಸ್ ಟೆಕಿ ಸ್ವಾತಿ ಎಸ್. ಎಂಬಾಕೆಯನ್ನು ರಾಮ್ ಕುಮಾರ್ ಎಂಬಾತ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ.

ಈ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಆನಂತರ, ಆರೋಪಿಯನ್ನು ಬಂಧಿಸಲಾಗಿತ್ತು ಹಾಗೂ ಆ ಆರೋಪಿ ಪೊಲೀಸ್ ಬಂಧನದಲ್ಲಿದ್ದಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದ.[ಚೆನ್ನೈ: ಇನ್ಫೋಸಿಸ್ ಮಹಿಳಾ ಉದ್ಯೋಗಿ ಬರ್ಬರ ಹತ್ಯೆ]

Father of Techie Swathi, who was Stabbed At Chennai Station Objects To Movie On Her

ಇದೆಲ್ಲಾ ಕಳೆದ ವರ್ಷ ಆಗಿದ್ದ ಘಟನೆ. ಆದರೆ, ಈಗ ಅದು ಮತ್ತೆ ಚರ್ಚೆಗೆ ಬಂದಿದೆ. ಕಾರಣ ಇಷ್ಟೇ. ಸ್ವಾತಿಯ ಆ ಕರುಣಾಜನಕ ಕಥೆಯನ್ನಾಧರಿಸಿ ತಮಿಳಿನಲ್ಲಿ ಚಿತ್ರವೊಂದು ತಯಾರಾಗಿದ್ದು, ಇದೇ ವಾರ ತೆರೆಗೆ ಬಂದಿದೆ. ಚಿತ್ರದ ಹೆಸರು 'ಸ್ವಾತಿ ಕೊಲೈ ವಳಕ್ಕು'.

ಈ ಚಿತ್ರದ ವಿರುದ್ಧ ಸಿಡಿದೆದ್ದಿರುವ ಸ್ವಾತಿಯ ತಂದೆ ಸಂತಾನ ಗೋಪಾಲ ಆ ಚಿತ್ರವನ್ನು ಬಹಿಷ್ಕರಿಸಬೇಕೆಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಕಾನೂನಿನ ಮೊರೆ ಹೋಗಲು ನಿರ್ಧರಿಸಿರು ಅವರು, ಅದರ ಆರಂಭಿಕ ಹೆಜ್ಜೆಯಾಗಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

Father of Techie Swathi, who was Stabbed At Chennai Station Objects To Movie On Her

ದೂರಿನಲ್ಲೇನಿದೆ?
ತಮ್ಮ ಮಗಳ ಸಾವಿನ ಬಗ್ಗೆ ಚಿತ್ರ ಮಾಡಿರುವುದು ಸರಿಯಲ್ಲ ಹಾಗೂ ಅದು ಕಾನೂನು ಬಾಹಿರವಾದ ರೀತಿಯಲ್ಲಿ ಚಿತ್ರ ನಿರ್ಮಾಣ ಮಾಡಲಾಗಿದೆ ಎಂದು ಗೋಪಾಲನ್ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.[ಚೆನ್ನೈ: ಇನ್ಫೋಸಿಸ್ ಮಹಿಳಾ ಉದ್ಯೋಗಿ ಕೊಲೆಗಾರನ ರೇಖಾಚಿತ್ರ]

ಚಿತ್ರ ನಿರ್ಮಾಣ ಮಾಡುವ ಸಂಸ್ಥೆಯಾಗಲೀ, ಚಿತ್ರದ ನಿರ್ದೇಶಕರಾಗಲೀ ಚಿತ್ರ ಮಾಡುವ ಮುಂಚೆ ತಮ್ಮನ್ನು ಸಂಪರ್ಕಿಸಿಲ್ಲ. ನಮ್ಮ ಕುಟುಂಬದ ಒಪ್ಪಿಗೆ ಪಡೆದಿಲ್ಲ ಎಂದಿದ್ದಾರೆ.

ಅಲ್ಲದೆ, ಚಿತ್ರದಲ್ಲಿ ಪ್ರೇಕ್ಷಕರನ್ನು ಆಕರ್ಷಿಸುವ ಸಲುವಾಗಿ ಸ್ವಾತಿಯ ವ್ಯಕ್ತಿತ್ವವನ್ನು ಕೊಂಚವಾದರೂ ತಿರುಚಿರುವ ಸಾಧ್ಯತೆಗಳಿರುತ್ತವೆ. ಹಾಗಾಗಿ, ಈ ಚಿತ್ರವನ್ನು ನಿಷೇಧಿಸಬೇಕು ಎಂದು ಅವರು ದೂರಿನಲ್ಲಿಕೋರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+