ಚೆನ್ನೈ: ಇನ್ಫೋಸಿಸ್ ಮಹಿಳಾ ಉದ್ಯೋಗಿ ಬರ್ಬರ ಹತ್ಯೆ

Written By:
Subscribe to Oneindia Kannada

ಚೆನ್ನೈ, ಜೂನ್.24: ಚೆನ್ನೈನಲ್ಲಿ ಇನ್ಫೋಸಿಸ್ ಮಹಿಳಾ ಉದ್ಯೋಗಿಯೊಬ್ಬರನ್ನು ಹಾಡಹಗಲೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಚೆನ್ನೈನ ನುಂಗಂಬಾಕಂ ರೈಲು ನಿಲ್ದಾಣದಲ್ಲಿ ಬರ್ಬರ ಕೃತ್ಯ ನಡೆದಿದೆ.

ಮುಂಜಾನೆಯೇ 6.30ಕ್ಕೆ ನೆತ್ತರು ಹರಿದಿದೆ. ಕಚೇರಿಗೆ ತೆರಳಲು ನಿಂತಿದ್ದ್ 24 ವರ್ಷದ ಸ್ವಾತಿ ಎಂಬ ಯುವತಿಯನ್ನು ಯುವಕನೊಬ್ಬ ಚೂರಿಯಿಂದ ಮನಬಂದಂತೆ ಇರಿದು ಹತ್ಯೆ ಮಾಡಿದ್ದಾನೆ.[ಚೆನ್ನೈ ಸ್ಫೋಟಕ್ಕೆ ಬೆಂಗಳೂರು ರೈಲು ನಿಲ್ದಾಣದಲ್ಲಿ ಬಾಂಬ್ ಜೋಡಣೆ]

murder

ಚೂಳೈಮೇಡು ಗಂಗೈ ಅಮ್ಮನ್ ಸ್ಟ್ರೀಟ್ ನಿವಾಸಿ ಯುವತಿಯನ್ನು ಆಕೆಯ ತಂದೆ ಎಂದಿನಂತೆ ರೈಲು ನಿಲ್ದಾಣಕ್ಕೆ ಕರೆ ತಂದು ಬಿಟ್ಟಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಆಗಮಿಸಿದ ಯುವಕನೊಬ್ಬ ಯುವತಿ ಮೇಲೆ ಎರಗಿದ್ದು ಮನಬಂದಂತೆ ಇರಿದಿದ್ದಾನೆ.

ಇತರ ಪ್ರಯಾಣಿಕರು ಆಕೆಯ ಹತ್ತಿರ ಧಾವಿಸುವಷ್ಟರಲ್ಲಿ ಯುವತಿ ಕೊನೆ ಉಸಿರು ಎಳೆದಿದ್ದಾಳೆ. ಯುವತಿಗೆ ಪರಿಚಯ ಇರುವ ವ್ಯಕ್ತಿಯೇ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.[ಧಾರವಾಡದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯನ ಹತ್ಯೆ]

-
-
-
-
-
-

ಈ ಬಗ್ಗೆ ಪ್ರತಿಕ್ರಿಯಿಸಿರುವ ಇನ್ಫೋಸಿಸ್ ಸಂಸ್ಥೆ, ಈ ಘಟನೆಯಿಂದ ಆಘಾತವಾಗಿದ್ದು ಇದರ ಬಗ್ಗೆ ಹೆಚ್ಚಿನ ತನಿಖೆಗೆ ಸಹಕರಿಸುತ್ತೇವೆ ಎಂದು ತಿಳಿಸಿದೆ. ಯುವತಿಯ ಸ್ನೇಹಿತರೂ ಕೂಡ ಘಟನೆಯಿಂದ ಶಾಕ್ ಆಗಿದ್ದಾರೆ. ಹತ್ಯೆಗೀಡಾದ ಯುವತಿ ಪ್ರತಿದಿನ ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು. ನಿಲ್ದಾಣದಲ್ಲಿ ಸಿಸಿಟಿವಿ ಇಲ್ಲದ ಕಾರಣ ಆರೋಪಿ ಪತ್ತೆ ಮಾಡುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chennai cold blooded murder: A young woman, working in the IT major Infosys, was brutally hacked to death at Nungambakkam railway station in Chennai on Friday morning around 6 am when she was waiting to board train for work.
Please Wait while comments are loading...