Arecanut Price: ಶಿವಮೊಗ್ಗ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಅಡಿಕೆ ಧಾರಣೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮೇ 14ರ ದರಪಟ್ಟಿ
Arecanut Price: ಅಡಿಕೆ ಧಾರಣೆಯಲ್ಲಿ ಏರಿಳಿತ ಆಗುತ್ತಲಿರುತ್ತದೆ. ಹಾಗಾದ್ರೆ ಮಲೆನಾಡಿನ ಹೆಬ್ಬಾಗಿಲು ಅಂತಲೇ ಪ್ರಸಿದ್ಧಿ ಆಗಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಇಂದು (ಮೇ 14) ಯಾವ ರೀತಿಯ ಅಡಿಕೆ ಧಾರಣೆ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಅಡಿಕೆ ಧಾರಣೆ ಎಲ್ಲಾ ಕಡೆಗಳಲ್ಲೂ ಒಂದೇ ರೀತಿ ಇರುವುದಿಲ್ಲ. ತುಸು ವ್ಯತ್ಯಾಸ ಇರುತ್ತದೆ. ಅದರಲ್ಲೂ ರಾಜ್ಯದ ದಾವಣಗೆರೆ ಜಿಲ್ಲೆಯ ಚನ್ನಗಿರಿ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ದೊಡ್ಡ ಮಾರುಕಟ್ಟೆಗಳಿದ್ದು, ಈ ಭಾಗಗಳ ಬೆಳೆಗಾರರು ಬೆಲೆಯನ್ನು ಗಮನಿಸಿ ಯಾವ ಮಾರುಕಟ್ಟೆಗೆ ಹಾಕಬೇಕೆಂದು ನಿರ್ಧರಿಸುತ್ತಾರೆ. ಯಾಕಂದ್ರೆ, ಹಾಕಿದ ಶ್ರಮಕ್ಕೆ ತಕ್ಕಂತೆ ತಕ್ಕ ಪ್ರತಿಫಲ ಅವರ ಬಯಕೆ ಆಗಿರುತ್ತದೆ. ಇಲ್ಲದಿದ್ದರೆ, ಎಲ್ಲಿ ನಷ್ಟ ಅನುಭವಿಸುತ್ತೇವೆಯೋ ಎನ್ನುವ ಆತಂಕವೂ ಕಾಡುತ್ತಿರುತ್ತದೆ. ಹಾಗಾದ್ರೆ, ಇಂದು ಯಾವ ಅಡಿಕೆ ಧಾರಣೆ ಎಷ್ಟಿದೆ ಎಂದು ಇಲ್ಲಿ ಗಮನಿಸಿ.


ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 54,000 ರೂಪಾಯಿ
* ಗರಿಷ್ಠ - 93,696 ರೂಪಾಯಿ
ಶಿವಮೊಗ್ಗ ಮಾರುಕಟ್ಟೆಯಲ್ಲಿ ಬೆಟ್ಟೆ ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 52,172 ರೂಪಾಯಿ
* ಗರಿಷ್ಠ - 58,099 ರೂಪಾಯಿ
ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 42,299 ರೂಪಾಯಿ
* ಗರಿಷ್ಠ - 54,299 ರೂಪಾಯಿ
ಶಿವಮೊಗ್ಗ ಮಾರುಕಟ್ಟೆಯಲ್ಲಿ ಗೊರಬಲು ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 19,000 ರೂಪಾಯಿ
* ಗರಿಷ್ಠ - 42,089 ರೂಪಾಯಿ
ಹಿಂದಿನ ದಿನದ ಅಡಿಕೆ ಧಾರಣೆ
ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 54,009 ರೂಪಾಯಿ
* ಗರಿಷ್ಠ - 97,896 ರೂಪಾಯಿ
ಶಿವಮೊಗ್ಗ ಮಾರುಕಟ್ಟೆಯಲ್ಲಿ ಬೆಟ್ಟೆ ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 50,119 ರೂಪಾಯಿ
* ಗರಿಷ್ಠ - 65629 ರೂಪಾಯಿ
ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 46,669 ರೂಪಾಯಿ
* ಗರಿಷ್ಠ - 55,399 ರೂಪಾಯಿ
ತೀರ್ಥಹಳ್ಳಿ ಮಾರುಕಟ್ಟೆಯಲ್ಲಿ ಗೊರಬಲು ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 22,000 ರೂಪಾಯಿ
* ಗರಿಷ್ಠ - 29,138 ರೂಪಾಯಿ
ತೀರ್ಥಹಳ್ಳಿ ಮಾರುಕಟ್ಟೆಯಲ್ಲಿ ಸಿಪ್ಪೆಗೋಟು ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 13,800 ರೂಪಾಯಿ
* ಗರಿಷ್ಠ - 138,00 ರೂಪಾಯಿ
ಶಿಕಾರಿಪುರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 53,810 ರೂಪಾಯಿ
* ಗರಿಷ್ಠ - 53,810 ರೂಪಾಯಿ
ಇದೀಗ ಭಾರೀ ಬಿಸಿಲು ಮುಂದುವರೆದ ಕಾರಣ ಗಿಡಗಳನ್ನು ರಕ್ಷಣೆ ಮಾಡುವುದೇ ದೊಡ್ಡ ಸವಾಲಾಗಿದೆ. ಈಗಾಗಲೇ ಬಹುತೇಕ ಭಾಗಗಳಲ್ಲಿ ರಕ್ಷಣೆ ದಾರಿಯನ್ನು ಕಂಡುಕೊಂಡಿದ್ದು, ಪ್ರತಿ ಗಿಡಕ್ಕೂ ಸುಣ್ಣ ಬಳಿದು ಗರಿ ಕಟ್ಟುವ ಕೆಲಸವನ್ನು ಮುಂದುವರೆಸಿದ್ದಾರೆ. ಇಲ್ಲದಿದ್ದರೆ ಸೂರ್ಯನ ಶಾಖಕ್ಕೆ ಬುಡದಲ್ಲಿ ಬಿರುಕು ಬಿಟ್ಟು ಹಾಳಾಗುವ ಸಾಧ್ಯತೆ ಇರುತ್ತದೆ. ಇದೀಗ ಭಾರಿ ಬಿಸಿಲಿನ ನಡುವೆಯೇ ಹಲವೆಡೆ ಮಳೆಯಾಗುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.












Click it and Unblock the Notifications