Virat Kohli: ವಿರಾಟ್ ಕೊಹ್ಲಿ ನಿವೃತ್ತಿ ಬಗ್ಗೆ ಆರ್‌ಸಿಬಿ ಬಿಗ್ ಸ್ಟೇಟ್‌ಮೆಂಟ್‌

Virat Kohli: ಐಪಿಎಲ್‌ 2026ರ ಫೈನಲ್‌ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿ ಗೆಲುವು ಸಾಧಿಸಿ ಸತತ ಎರಡನೇ ಬಾರಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿತು. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಟ್ರೋಫಿ ಗೆಲ್ಲಲು ಪ್ರಮುಖ ಕಾರಣರಾದ ವಿರಾಟ್ ಕೊಹ್ಲಿ ಅವರು ಮುಂದಿನ ಐಪಿಎಲ್‌ನಲ್ಲಿ ಆಡ್ತಾರಾ ಎನ್ನುವ ಬಗ್ಗೆ ಫ್ರಾಂಚೈಸಿಯ ಸಿಇಒ ಬಿಗ್ ಅಪ್ಡೇಟ್‌ ಕೊಟ್ಟಿದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಟೀಮ್ ಇಂಡಿಯಾದ ದಿಗ್ಗಜ, ರನ್‌ ಮಷೀನ್ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮ್ಯಾನೇಜ್‌ಮೆಂಟ್ ಅದ್ಭುತ ಸಿಹಿ ಸುದ್ದಿ ನೀಡಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಕೊಹ್ಲಿ ಅವರ ಐಪಿಎಲ್ ನಿವೃತ್ತಿಯ ಕುರಿತಾದ ವದಂತಿಗಳನ್ನು ಆರ್‌ಸಿಬಿ ಸಿಇಒ ತಳ್ಳಿಹಾಕಿದ್ದಾರೆ. ಅಷ್ಟೇ ಅಲ್ಲದೆ ವಿರಾಟ್ ಕೊಹ್ಲಿ ಅವರು ಮುಂದಿನ ನಾಲ್ಕು ವರ್ಷಗಳ ಕಾಲ ಐಪಿಎಲ್‌ನಲ್ಲಿ ಆಡಲಿದ್ದಾರೆ ಎಂಬ ಭರವಸೆಯನ್ನು ನೀಡಿದ್ದಾರೆ.

Virat Kohli IPL Future Update RCB Confirms Star Batter Will Play For Next 4 Years Know details

ಆರ್‌ಸಿಬಿ ಫ್ರಾಂಚೈಸಿ ಹೇಳಿದ್ದೇನು?

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈಗಾಗಲೇ ಟೆಸ್ಟ್‌, ಟಿ20 ಮಾದರಿಗೆ ನಿವೃತ್ತಿ ಘೋಷಿಸಿರುವ ವಿರಾಟ್ ಕೊಹ್ಲಿ ಅವರು ಐಪಿಎಲ್‌ನಲ್ಲಿ ಇನ್ನೆಷ್ಟು ವರ್ಷ ಆಡಲಿದ್ದಾರೆ ಎಂಬ ಚರ್ಚೆಗಳು ದಟ್ಟವಾಗಿದ್ದವು. ವಯಸ್ಸು ಮತ್ತು ಸುದೀರ್ಘ ಕ್ರಿಕೆಟ್ ಜರ್ನಿಯಿಂದಾಗಿ ಅವರು ಮುಂಬರುವ ಮೆಗಾ ಹರಾಜಿನ ನಂತರ ಕ್ರಿಕೆಟ್‌ಗೆ ವಿದಾಯ ಹೇಳಬಹುದು ಎಂಬ ಆತಂಕ ಅಭಿಮಾನಿಗಳಲ್ಲಿ ಮನೆಮಾಡಿತ್ತು. ಆದರೆ ಆರ್‌ಸಿಬಿ ಫ್ರಾಂಚೈಸಿಯ ಅಧಿಕೃತ ಹೇಳಿಕೆಯು ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದೆ.

ಕೊಹ್ಲಿ ಇನ್ನೆಷ್ಟು ವರ್ಷ ಐಪಿಎಲ್‌ ಆಡಲಿದ್ದಾರೆ?

ವಿರಾಟ್‌ ಕೊಹ್ಲಿ ಅವರ ಫಿಟ್ನ್‌ಸ್‌ ಇಂದಿಗೂ ಯುವ ಆಟಗಾರರಿಗೆ ಮಾದರಿಯಾಗಿದೆ. ಅವರ ಬ್ಯಾಟಿಂಗ್ ಉತ್ಸಾಹ ಮತ್ತು ಮೈದಾನದಲ್ಲಿನ ಚುರುಕುತನವನ್ನು ಗಮನಿಸಿದರೆ ಅವರು ಸುಲಭವಾಗಿ ಮುಂದಿನ ನಾಲ್ಕು ವರ್ಷಗಳ ಕಾಲ ಕ್ರಿಕೆಟ್ ಆಡಬಲ್ಲರು ಎಂದು ಮ್ಯಾನೇಜ್‌ಮೆಂಟ್ ವಿಶ್ವಾಸ ವ್ಯಕ್ತಪಡಿಸಿದೆ. 2008ರ ಚೊಚ್ಚಲ ಸೀಸನ್‌ನಿಂದಲೂ ಅವರು ಆರ್‌ಸಿಬಿಯ ಅವಿಭಾಜ್ಯ ಅಂಗವಾಗಿದ್ದಾರೆ. ಒಂದೇ ಫ್ರಾಂಚೈಸಿ ಪರ ಇಷ್ಟು ದೀರ್ಘಕಾಲ ಆಡಿದ ವಿಶ್ವದ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ಅವರದ್ದಾಗಿದ್ದು, ಮುಂಬರುವ ದಿನಗಳಲ್ಲೂ ತಂಡವನ್ನು ಮುನ್ನಡೆಸುವಲ್ಲಿ ಅವರ ಪಾತ್ರ ನಿರ್ಣಾಯಕವಾಗಿರಲಿದೆ ಅಂತಲೂ ತಿಳಿಸಿದೆ.

ಫ್ರಾಂಚೈಸಿ ಮಾಸ್ಟರ್ ಪ್ಲಾನ್ ಏನು?

ಐಪಿಎಲ್‌ನ ಮುಂಬರುವ ಮೆಗಾ ಹರಾಜಿನ ಹಿನ್ನೆಲೆಯಲ್ಲಿ ಈ ಹೇಳಿಕೆ ಅತ್ಯಂತ ಮಹತ್ವ ಪಡೆದುಕೊಂಡಿದೆ. ಕೊಹ್ಲಿ ಅವರ ದೀರ್ಘಾವಧಿಯ ಲಭ್ಯತೆಯು ಆರ್‌ಸಿಬಿ ತಂಡಕ್ಕೆ ಭವಿಷ್ಯದ ಬಲಿಷ್ಠ ತಂಡವನ್ನು ಕಟ್ಟಲು ದೊಡ್ಡ ಶಕ್ತಿಯನ್ನು ನೀಡುತ್ತದೆ. ಕೊಹ್ಲಿ ಅವರನ್ನು ಮುಂದಿಟ್ಟುಕೊಂಡು ಉತ್ತಮ ತಂಡವನ್ನು ಕಟ್ಟಲು ಫ್ರಾಂಚೈಸಿ ಮಾಸ್ಟರ್ ಪ್ಲಾನ್ ಮಾಡಿಕೊಳ್ಳುತ್ತಿದೆ.

'ವಿರಾಟ್ ಕೊಹ್ಲಿ ಕೇವಲ ಒಬ್ಬ ಆಟಗಾರನಲ್ಲ, ಅವರು ಆರ್‌ಸಿಬಿಯ ಬ್ರ್ಯಾಂಡ್ ಮತ್ತು ಯುವ ಕ್ರಿಕೆಟಿಗರಿಗೆ ದೊಡ್ಡ ಪ್ರೇರಣೆ. ಮುಂದಿನ ನಾಲ್ಕು ವರ್ಷಗಳ ಕಾಲ ಅವರು ನಮ್ಮೊಂದಿಗೆ ಇರಲಿದ್ದಾರೆ ಎಂಬ ಭರವಸೆಯು ತಂಡದ ಉತ್ಸಾಹವನ್ನು ಇಮ್ಮಡಿಗೊಳಿಸಿದೆ,' ಎಂದು ಫ್ರಾಂಚೈಸಿ ಮೂಲಗಳು ತಿಳಿಸಿವೆ.

ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿರುವ ವಿರಾಟ್ ಕೊಹ್ಲಿ ಅವರು, ಬೆಂಗಳೂರು ಅಭಿಮಾನಿಗಳ ಪಾಲಿಗೆ ಕೇವಲ ಆಟಗಾರನಲ್ಲ, ಭಾವನೆಯಾಗಿದ್ದಾರೆ. ಆರ್‌ಸಿಬಿ ಸಿಇಒ ಅವರ ಈ ಅಧಿಕೃತ ಹೇಳಿಕೆಯಿಂದಾಗಿ ಕೊಹ್ಲಿ ಬ್ಯಾಟಿಂಗ್ ಅನ್ನು ಇನ್ನು ಹಲವು ವರ್ಷಗಳ ಕಾಲ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಣ್ತುಂಬಿಕೊಳ್ಳಬಹುದು ಎಂಬ ಆಸೆ ಅಭಿಮಾನಿಗಳಲ್ಲಿ ಚಿಗುರೊಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+