ಚೆನ್ನೈ: ಇನ್ಫೋಸಿಸ್ ಮಹಿಳಾ ಉದ್ಯೋಗಿ ಕೊಲೆಗಾರನ ರೇಖಾಚಿತ್ರ

Written By:
Subscribe to Oneindia Kannada

ಚೆನ್ನ, ಜೂನ್, 25: ಚೆನ್ನೈ ನುಂಗಂಬಾಕಂ ರೈಲ್ವೆ ನಿಲ್ದಾಣದಲ್ಲಿ ಇನ್ಫೋಸಿಸ್ ಮಹಿಳಾ ಉದ್ಯೋಗಿ ಹತ್ಯೆ ಮಾಡಿದ ಯುವಕನ ಕುರಿತಾದ ರೇಖಾಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಪ್ರತ್ಯಕ್ಷದರ್ಶಿಗಳ ಹೇಳಿಕೆ ಪ್ರಕಾರ ಪೊಲೀಸರು ಶಂಕಿತ ಆರೋಪಿಯ ರೇಖಾಚಿತ್ರ ಬಿಡುಗಡೆ ಮಾಡಿದ್ದಾರೆ. ಕೊಲೆಗಾರ ಹಸಿರು ಬಣ್ಣದ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದ ಎನ್ನುವುದು ಪ್ರತ್ಯಕ್ಷದರ್ಶಿಗಳ ಹೇಳಿಕೆ.[ಚೆನ್ನೈ: ಇನ್ಫೋಸಿಸ್ ಮಹಿಳಾ ಉದ್ಯೋಗಿ ಬರ್ಬರ ಹತ್ಯೆ]

murder

ಚೆನ್ನೈನ ನುಂಗಂಬಾಕಂ ರೈಲು ನಿಲ್ದಾಣದಲ್ಲಿ ಬರ್ಬರ ಕೃತ್ಯ ನಡೆದಿತ್ತು. ಶುಕ್ರವಾರ ಮುಂಜಾನೆ 6.30ಕ್ಕೆ ನೆತ್ತರು ಹರಿದಿತ್ತು. ಕಚೇರಿಗೆ ತೆರಳಲು ನಿಂತಿದ್ದ್ 24 ವರ್ಷದ ಸ್ವಾತಿ ಎಂಬ ಯುವತಿಯನ್ನು ಯುವಕನೊಬ್ಬ ಚೂರಿಯಿಂದ ಮನಬಂದಂತೆ ಇರಿದು ಹತ್ಯೆ ಮಾಡಿದ್ದ.[ಚೆನ್ನೈ ಸ್ಫೋಟಕ್ಕೆ ಬೆಂಗಳೂರು ರೈಲು ನಿಲ್ದಾಣದಲ್ಲಿ ಬಾಂಬ್ ಜೋಡಣೆ]

ಚೂಳೈಮೇಡು ಗಂಗೈ ಅಮ್ಮನ್ ಸ್ಟ್ರೀಟ್ ನಿವಾಸಿ ಯುವತಿ ಕೊಲೆಯಾಗಿದ್ದಳು. ಘಟನೆ ನಡೆದು ಸುಮಾರು ಎರಡು ಗಂಟೆಗಳ ನಂತರ ಪೊಲಿಶರು ಆಗಮಿಸಿದ್ದು ಹಲವು ಅನುಮಾನಗಳಿಗೆ ಕಾರಣವಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A young woman was brutally hacked to death at Nungambakkam railway station in Chennai on Friday morning, police released suspects footage.
Please Wait while comments are loading...