ಬಿಜೆಪಿ ಅಭ್ಯರ್ಥಿ ಪರ ಪ್ರಚಾರದ ವೇಳೆ ನಟ, ಮಾಜಿ ಸಂಸದ ಸಾವು

ಚೆನ್ನೈ, ಏಪ್ರಿಲ್ 14: ಲೋಕಸಭೆ ಚುನಾವಣೆ ಪ್ರಚಾರದ ವೇಳೆ ದುರಂತ ಸಂಭವಿಸಿದೆ. ತಮಿಳು ಚಿತ್ರರಂಗದ ನಟ ಹಾಗೂ ಮಾಜಿ ಸಂಸದರಾಗಿರುವ ಎಐಎಡಿಎಂಕೆ ನಾಯಕ ಜಿ.ಕೆ. ರಿತೇಶ್(48) ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ತಮಿಳುನಾಡಿನ ರಾಮನಾಥಪುರಂನಲ್ಲಿ ಎಐಎಡಿಎಂಕೆ ಮೈತ್ರಿಕೂಟದ ಬಿಜೆಪಿ ಅಭ್ಯರ್ಥಿ ನೈನಾರ್ ನಾಗೇಂದ್ರನ್ ಪರವಾಗಿ ಪ್ರಚಾರದಲ್ಲಿ ಭಾಗಿಯಾಗಿದ್ದರು. ಪ್ರಚಾರದ ಸಂದರ್ಭದಲ್ಲಿ ಊಟದ ವೇಳೆ ರಿತೇಶ್ ಗೆ ಹೃದಯಾಘಾತವಾಗಿದೆ. ತಕ್ಷಣವೇ ಅವರನ್ನು ಪಕ್ಷದ ಕಾರ್ಯಕರ್ತರು ಸಮೀಪದ ಆಸ್ಪತ್ರೆಗೆ ಸೇರಿದ್ದಾರೆ. ಆದರೆ, ಆಸ್ಪತ್ರೆಗೆ ಕರೆ ತರುವ ವೇಳೆ ಮಾರ್ಗಮಧ್ಯದಲ್ಲೇ ಅಸುನೀಗಿದ್ದಾರೆ.

ಡಿಎಂಕೆ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದ್ದ ರಿತೇಶ್ 2009ರ ಲೋಕಸಭೆ ಚುನಾವಣೆಯಲ್ಲಿ ರಾಮನಾಥಪುರಂ ಕ್ಷೇತ್ರದಲ್ಲಿ ಜಯಗಳಿಸಿದ್ದರು. 2014ರ ಏಪ್ರಿಲ್ ನಲ್ಲಿ ಜಯಲಲಿತಾ ಅವರ ಸಮ್ಮುಖದಲ್ಲಿ ಎಐಎಡಿಎಂಕೆ ಸೇರ್ಪಡೆಯಾಗಿದ್ದರು.

Election Campaign: Actor, former MP Rithesh dies of heart attack

'ನಾಯಗನ್', 'ಪೆನ್ ಸಿಂಗಮ್', ರಾಜಕೀಯ ವಿಡಂಬನಾತ್ಮಕ ಚಿತ್ರ 'ಎಲ್.ಕೆ.ಜಿ.' ಮೊದಲಾದ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದರು. 2015ರಲ್ಲಿ ನಡಿಗರ್ ಸಂಘ(ಕಲಾವಿದರ ಸಂಘ) ಶರತ್ ಕುಮಾರ್, ರಾಧಾರವಿ ವಿರುದ್ಧ ದನಿಯೆತ್ತಿದ್ದಾರು. ವಿಶಾಲ್ ತಂಡದಲ್ಲಿ ಗುರುತಿಸಿಕೊಂಡಿದ್ದರು. ಕೊನೆಗೆ ನಟ ವಿಶಾಲ್ ಬಣ ಜಯಭೇರಿ ಬಾರಿಸಿತ್ತು. ಆದರೆ, ನಂತರ ರಾಧಾರವಿಗೆ ಬೆಂಬಲ ವ್ಯಕ್ತಪಡಿಸಿದ್ದರು.

ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ, ಡಿಸಿಎಂ ಓ ಪಳನಿಸ್ವಾಮಿ, ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್, ನಟ ವಿಶಾಲ್, ಆರ್ ಜೆ ಬಾಲಾಜಿ ಸೇರಿದಂತೆ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+