ಜಯಲಲಿತಾಗೆ ಚಿಕಿತ್ಸೆ ನೀಡುತ್ತಿರುವ 'ಎಕ್ಮೋ ಯಂತ್ರ' ಏನಿದು?

Posted By:
Subscribe to Oneindia Kannada

ಚೆನ್ನೈ, ಡಿಸೆಂಬರ್ 5: ತಮಿಳುನಾಡಿನ ಮುಖ್ಯಮಂತ್ರಿ ಜೆ.ಜಯಲಲಿತಾ ಅವರಿಗೆ ಹೃದಯ ಸ್ಥಂಭನವಾದ ತಕ್ಷಣ ಕೃತಕ ಉಸಿರಾಟ ವ್ಯವಸ್ಥೆ ಮಾಡಲಾಗಿದೆ. ಆಕೆ ಪರಿಸ್ಥಿತಿ ತೀರಾ ಗಂಭೀರವಾಗಿದೆ ಎಂದು ಅಪೋಲೋ ಅಸ್ಪತ್ರೆ ವೈದ್ಯರು ತಿಳಿಸಿದ್ದು, ಹೃದಯಕ್ಕೆ ಕೃತಕ ಸಾಧನ ಅಳವಡಿಸಲಾಗಿದೆ. ಇದೊಂದು ಚಿಕಿತ್ಸಾ ವಿಧಾನ.

ಜಯಲಲಿತಾ ಅವರಿಗೆ ಇಸಿಎಂಒ ಅಥವಾ ಎಕ್ಸ್ ಟ್ರಾ ಕಾರ್ಪೋರಿಯಲ್ ಮೆಂಬ್ರೇನ್ ಆಕ್ಸಿಜನೇಶನ್ ಎಂಬ ಯಂತ್ರವನ್ನು ಅಳವಡಿಸಲಾಗಿದೆ. ರೋಗಿಯ ಶ್ವಾಸಕೋಶ ಅಥವಾ ಹೃದಯ ಕೆಲಸ ಮಾಡದ ಸಂದರ್ಭದಲ್ಲಿ ದೇಹಕ್ಕೆ ಆಮ್ಲಜನಕ ಪೂರೈಸಲು ಈ ಯಂತ್ರ ಸಹಾಯ ಮಾಡುತ್ತದೆ.[ಜಯಾಗೆ ಆಗಿದ್ದು ಹೃದಯಾಘಾತವಲ್ಲ, ಹೃದಯ ಸ್ಥಂಭನ]

Jayalalithaa

ಈ ಯಂತ್ರದ ಆಧಾರದಲ್ಲಿ ರೋಗಿಯು ಕೆಲವು ದಿನಗಳ ಕಾಲ ಅಥವಾ ವಾರಗಳ ಕಾಲ ಇರಬಹುದು ಎನ್ನುತ್ತಾರೆ ವೈದ್ಯರು. 'ಎಕ್ಮೋ ತುಂಬ ಪರಿಣಾಮಕಾರಿ ಯಂತ್ರ. ಇದರಿಂದ ರೋಗಿಯು ಬೇಗ ಚೇತರಿಸಿಕೊಳ್ಳುವ ಸಾಧ್ಯತೆಗಳು ಇರುತ್ತವೆ' ಎಂದು ಹೃದಯ ತಜ್ಞರು ಹೇಳುತ್ತಾರೆ. ಸದ್ಯಕ್ಕೆ ತಜ್ಞರ ತಂಡ, ಹೃದಯ ತಜ್ಞರು ಇತರ ವಿಷಯ ತಜ್ಞರು ಜಯಲಲಿತಾ ಅವರ ಆರೋಗ್ಯ ಸ್ಥಿತಿಯ ಬಗ್ಗೆ ನಿಗಾ ವಹಿಸಿದೆ.[ಜಯಾ ಹೃದಯ ಲಬ್ ಡಬ್ ಎನ್ನಲು ಕೃತಕ ಸಾಧನ ಬಳಕೆ]

ಶನಿವಾರದವರೆಗೆ ಜಯಲಲಿತಾ ಅವರು ಇನ್ನೇನು ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳುತ್ತಾರೆ ಎಂಬ ಸುದ್ದಿಯೇ ಇತ್ತು. ಅದರೆ ದಿಢೀರನೆ ಪರಿಸ್ಥಿತಿ ಬದಲಾಗಿ ಭಾನುವಾರ ಹೃದಯ ಸ್ಥಂಭನವಾದ ಮಾಹಿತಿ ಹೊರಬಂತು. ಅಮ್ಮನ ಅಪಾರ ಸಂಖ್ಯೆಯ ಬೆಂಬಲಿಗರು ಬೇಗ ಗುಣವಗಲಿ ಎಂದು ಹರಕೆ ಹೊರುತ್ತಿದ್ದಾರೆ, ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Jayalalithaa has been placed on the ECMO or Extra-Corporeal Membrane Oxygenation device, a life support system that takes helps provide oxygen for the body when the patient's lungs or heart are unable to do so.
Please Wait while comments are loading...