ಹಳೆಯ ಗೆಳೆಯ ಕರುಣಾನಿಧಿಯನ್ನು ಭೇಟಿಯಾದ ದೇವೇಗೌಡ
Recommended Video

ಚೆನ್ನೈ ನ ಕಾವೇರಿ ಆಸ್ಪತ್ರೆಯಲ್ಲಿ ಕರುಣಾನಿಧಿ ಎಚ್ ಡಿ ದೇವೇಗೌಡ ಭೇಟಿ | Oneindia Kannada
ಚೆನ್ನೈ, ಆಗಸ್ಟ್ 03: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಡಿಎಂಕೆ ನಾಯಕ 95 ವರ್ಷದ ಕರುಣಾನಿಧಿ ಅವರನ್ನು ಇಂದು ದೇವೇಗೌಡ ಅವರು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಕರುಣಾನಿಧಿ ದಾಖಲಾಗಿರುವ ಚೆನ್ನೈನ ಕಾವೇರಿ ಆಸ್ಪತ್ರೆಗೆ ತೆರಳಿದ್ದ ಅವರು ಕರುಣಾನಿಧಿ ಅವರನ್ನು ಕಂಡು ಅವರ ಮಗ ಸ್ಟಾಲಿನ್ ಅವರೊಂದಿಗೆ ಮಾತುಕತೆಯಾಡಿದ್ದಾರೆ.

ಇಂದು ಕುಮಾರಸ್ವಾಮಿ ಅವರು ಸಹ ಕರುಣಾನಿಧಿ ಅವರನ್ನು ಭೇಟಿ ಆಗುವ ಕಾರ್ಯಕ್ರಮವಿತ್ತು ಆದರೆ ಕಾರಣವಾಂತರಗಳಿಂದ ಅದು ಸಾಧ್ಯವಾಗದೆ. ದೇವೇಗೌಡ ಅವರು ಮಾತ್ರವೇ ತೆರಳಿದ್ದಾರೆ.
ದೇವೇಗೌಡ ಅವರ ಹಳೆಯ ಸ್ನೇಹಿತರೂ ಆಗಿರುವ ಕರುಣಾನಿಧಿ ಅವರ ಆರೋಗ್ಯ ವಿಚಾರಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ದೇವೇಗೌಡ ಅವರು, ಕರಣಾನಿಧಿ ಅವರ ಆರೋಗ್ಯ ಬೇಗನೆ ಸುಧಾರಿಸಿ ಅವರು ಸೆಂಚುರಿ ಭಾರಿಸಲಿ ಎಂದರು.












Click it and Unblock the Notifications