ಫ್ಯಾನಿ ಸೈಕ್ಲೋನ್ ಕುರಿತು ಅಚ್ಚರಿಯ ಮಾಹಿತಿ ನೀಡಿದ ತಮಿಳುನಾಡು ವೆದರ್‌ಮ್ಯಾನ್

ಚೆನ್ನೈ, ಏ.27: ತಮಿಳುನಾಡಿನಲ್ಲಿ ಮುಂದಿನ ಎರಡು ಮೂರು ದಿನಗಳಲ್ಲಿ ಬಂದಪ್ಪಳಿಸಲಿದೆ ಎನ್ನಲಾದ ಫ್ಯಾನಿ ಚಂಡಮಾರುತ ಕುರಿತು ತಮಿಳುನಾಡು ವೆದರ್‌ಮ್ಯಾನ್ ಅಚ್ಚರಿಯ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ತಮಿಳುನಾಡು ವೆದರ್‌ಮ್ಯಾನ್ ಎಂದೇ ಖ್ಯಾತರಾಗಿರುವ ಪ್ರದೀಪ್ ಜಾನ್ ಅವರು ಫ್ಯಾನಿ ಚಂಡಮಾರುತ ಕುರಿತು ಹಲವು ಮಾಹಿತಿ ನೀಡಿದ್ದಾರೆ. ಮುಂದಿನ ವಾರ ತಮಿಳುನಾಡಿನಲ್ಲಿ ಮಳೆಯಾಗುವ ಸಾಧ್ಯತೆ ಕಡಿಮೆ ಇದೆ ಎನ್ನುವುದು ಮೊದಲ ಮಾಹಿತಿಯಾಗಿದೆ.

ಆದರೆ ಬಂಗಾಳಕೊಲ್ಲಿಯಲ್ಲಿ ಡಿಪ್ರೆಷನ್ ಆರಂಭವಾಗಿರುವುದು ಸತ್ಯ ಆದರೆ ಏಪ್ರಿಲ್‌ನಲ್ಲಿ ಬರುವ ಚಂಡಮಾರುತದಿಂದ ತಮಿಳುನಾಡಿನ ಮೇಲೆ ಹೆಚ್ಚು ದುಷ್ಪರಿಣಾಮ ಉಂಟಾಗುವುದಿಲ್ಲ, ಏಪ್ರಿಲ್‌ನಲ್ಲಿ ಉಂಟಾದ ಚಂಡಮಾರುತ ಭೂಮಾ ಕಡೆ ಮಾರ್ಗ ಬದಲಾಯಿಸುತ್ತದೆ ಎಂದಿದ್ದಾರೆ.

Cyclone Fani Tamil Nadu Weatherman shares interesting updates

ತಮಿಳುನಾಡಿನಲ್ಲಿ ಚಂಡಮಾರುತ ತಂದೊಡ್ಡುತ್ತಿದ್ದ ಅವಾಂತರಗಳು, ಭೂ ಕುಸಿತ ಇನ್ನಿತರೆ ವಿಷಯಗಳ ಕುರಿತು ಕಳೆದ 50 ವರ್ಷದಿಂದ ಅವರು ಅಧ್ಯಯನ ನಡೆಸಿದ್ದಾರೆ. ಆದರೆ ಆಂದ್ರಪ್ರದೇಶದಲ್ಲಿ ಹೆಚ್ಚು ಮಳೆಯಾಗಬಹುದು ಎಂದು ಪ್ರದೀಪ್ ಹೇಳಿದ್ದಾರೆ.

ಕಳೆದ ಬಾರಿ ಬಂದಿದ್ದ ಚಂಡ ಮಾರುತ 1966ರಲ್ಲಿ ಕಾಣಿಸಿಕೊಂಡಿತ್ತು ಅದರಿಂದ ತಮಿಳುನಾಡು ಸಾಕಷ್ಟು ನಷ್ಟ ಅನುಭವಿಸಿತ್ತು.

ಆದರೆ ಫ್ಯಾನಿ ಚಂಡ ಮಾರುತ ಆಂಧ್ರಪ್ರದೇಶದೆಡೆಗೆ ಮಾರ್ಗ ಬದಲಾಯಿಸುವ ಎಲ್ಲಾ ಸಾಧ್ಯತೆಗಳಿವೆ, ತಮಿಳುನಾಡಿನಲ್ಲಿ ಮಳೆಯಾದರೂ ಹೆಚ್ಚು ಪ್ರಮಾಣದಲ್ಲಿ ಮಳೆಯಾಗುವುದಿಲ್ಲ ಎಂದು ಹೇಳಿದ್ದಾರೆ. ಏ.29ರಿಂದ ಮೇ 3ರೊಳಗೆ ತಮಿಳುನಾಡಿನಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+