ವೈದ್ಯರ ಮೇಲೆ ಮಾಸ್ಕ್ ಎಸೆದು ಕೊವಿಡ್ 19 ರೋಗಿಯ ಅನುಚಿತ ವರ್ತನೆ
ಚೆನ್ನೈ, ಏಪ್ರಿಲ್ 13: ಕೊರೊನಾ ವೈರಸ್ ಎಂದು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬ ವೈದ್ಯರ ಮೇಲೆ ಮಾಸ್ಕ್ ಎಸೆದು ಅನುಚಿತವಾಗಿ ವರ್ತಿಸಿದ್ದು ಆತನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ.
ಈ ಘಟನೆ ನಾಗಪಟ್ಟಣಂ ಜಿಲ್ಲೆಯಲ್ಲಿ ವರದಿಯಾಗಿದೆ. ರೋಗಿಯ ಈ ವರ್ತನೆ , ಆಸ್ಪತ್ರೆಯ ಸಿಬ್ಬಂದಿ ಮತ್ತು ಇತರ ರೋಗಿಗಳನ್ನು ಕೆರಳಿಸಿದೆ. ಇದೀಗ ಆತನ ವಿರುದ್ಧ ವೈದ್ಯರ ಕೊಲೆ ಯತ್ನ ಕೇಸ್ ದಾಖಲಾಗಿದೆ.
ವಾರ್ಡ್‌ನಲ್ಲಿ ಪ್ರವೇಶ ಪಡೆದಾಗಿನಿಂದಲೂ ಆ ವ್ಯಕ್ತಿ ವೈದ್ಯಕೀಯ ಸಿಬ್ಬಂದಿಗಳೊಡನೆ ಸಹಕರಿಸುತ್ತಿಲ್ಲ ಎನ್ನಲಾಗಿದ್ದು, ಈ ನಡುವೆ ಜಿಲ್ಲೆಯ ಕಡಂಬಡಿಯಲ್ಲಿ ಖಾಸಗಿ ಕ್ಲಿನಿಕ್ ನಡೆಸುತ್ತಿರುವ 65 ವರ್ಷದ ವೈದ್ಯರು ಮೂರು ವಾರಗಳ ಹಿಂದೆ ಅಮೆರಿಕದಿಂದ ಹಿಂದಿರುಗಿದ ನಂತರ ಕೋವಿಡ್ ಸೋಂಕಿಗೆ ತುತ್ತಾಗಿರುವುದಾಗಿ ವರದಿ ಬಂದಿದೆ.
ವೈದ್ಯರಿಂದ ಚಿಕಿತ್ಸೆ ಪಡೆದ ಜನರು ಸ್ವಯಂಪ್ರೇರಣೆಯಿಂದ ಮುಂದೆ ಬಂದು ತಮ್ಮನ್ನು ವೈದ್ಯಕೀಯ ಪರೀಕ್ಷೆಗೆ ಒಳಗಾಗಿಸಿಕೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ.
ಈ ಕುರಿತು ಮಾಹಿತಿ ಪಡೆಯಲು ಜನರು 9751425002 ಮತ್ತು 9500493022 ಸಂಖ್ಯೆಗಳಿಗೆ ಕರೆ ಮಾಡಿ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಸಿಬ್ಬಂದಿ ಹೇಳಿದೆ.
ಮಹಾರಾಷ್ಟ್ರ ಮತ್ತು ದೆಹಲಿಯ ಬಳಿಕ ತಮಿಳುನಾಡಿನಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣ ದಾಖಲಾಗಿದೆ. ಒಟ್ಟು 969 ಪ್ರಕರಣಗಳು ದೃಢಪಟ್ಟಿದ್ದು ಇದುವರೆಗೆ 11 ಜನ ಮಹಾಮಾರಿಗೆ ಬಲಿಯಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.













Click it and Unblock the Notifications