ಚೆನ್ನೈ : ಕರಾವಳಿ ರಕ್ಷಕ ಪಡೆಯ ವಿಮಾನ ನಾಪತ್ತೆ
ಚೆನ್ನೈ, ಜೂ. 09 : ಚೆನ್ನೈ ಏರ್ ಬೇಸ್‌ನಿಂದ ಹೊರಟಿದ್ದ ಕರಾವಳಿ ರಕ್ಷಕ ಪಡೆಗೆ ಸೇರಿದ ವಿಮಾನವೊಂದು ನಾಪತ್ತೆಯಾಗಿದೆ. ವಿಮಾನದಲ್ಲಿ ಮೂವರು ಸಿಬ್ಬಂದಿಗಳಿದ್ದರು. ವಿಮಾನಕ್ಕಾಗಿ ಹುಡುಕಾಟ ಆರಂಭವಾಗಿದೆ.
ನಾಪತ್ತೆಯಾದ ಸಿಜಿ-791 ವಿಮಾನವನ್ನು ಕರಾವಳಿಯ ರಕ್ಷಣೆಗೆ ನಿಯೋಜನೆ ಮಾಡಲಾಗಿತ್ತು. ಸೋಮವಾರ ಸಂಜೆ 5.30ರ ನಂತರ ವಿಮಾನದ ಸಂಪರ್ಕ ಕಡಿತಗೊಂಡಿದೆ. ರಾತ್ರಿ 9 ಗಂಟೆಗೆ ಕೊನೆಯ ಬಾರಿಗೆ ರಡಾರ್ ಸಂಪರ್ಕಕ್ಕೆ ವಿಮಾನ ಸಿಕ್ಕಿತ್ತು.[ಕರಾವಳಿ ರಕ್ಷಕ ಪಡೆಯ ಹೋವರ್ ಕ್ರಾಫ್ಟ್ ಗೆ ಹಾನಿ]

ಮಂಗಳವಾರ ಬೆಳಗ್ಗೆ ಕರಾವಳಿ ರಕ್ಷಕ ಪಡೆ ವಿಮಾನ ನಾಪತ್ತೆಯಾಗಿರುವುದನ್ನು ಖಚಿತ ಪಡಿಸಿದ್ದು, ವಿಮಾನಕ್ಕಾಗಿ ಹುಡುಕಾಟ ಆರಂಭಿಸಿದೆ ಎಂದು ಹೇಳಿದೆ. ಸಮುದ್ರದಲ್ಲಿ ವಿಮಾನ ಪತನಗೊಂಡಿರಬಹುದು ಎಂದು ಶಂಕಿಸಲಾಗಿದೆ. [162 ಪ್ರಯಾಣಿಕರಿದ್ದ ಏರ್‌ಏಷ್ಯಾ ವಿಮಾನ ನಾಪತ್ತೆ]
Coastguard Dornier aircraft with three crew members on board missing since last night, off Chennai.
— Press Trust of India (@PTI_News) June 9, 2015 ವಿಮಾನದ ಪತ್ತೆಗಾಗಿ ನೌಕಾಪಡೆಯ ಮೂರು ಹಡಗು ಮತ್ತು ವಿಮಾನಗಳನ್ನು ನಿಯೋಜಿಸಲಾಗಿದೆ. ನಾಪತ್ತೆಯಾದ ವಿಮಾನ 2014ರಲ್ಲಿ ರಕ್ಷಕ ಪಡೆಗೆ ಸೇರ್ಪಡೆಗೊಂಡಿತ್ತು.












Click it and Unblock the Notifications