ಚೆನ್ನೈನಲ್ಲಿ ಮಹಿಳಾ ಉದ್ಯಮಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಚೆನ್ನೈ, ಸೆಪ್ಟೆಂಬರ್ 12: ಚೆನ್ನೈ ಮೂಲದ ಮಹಿಳಾ ಉದ್ಯಮಿ ನಗರದ ಕೊಠಾರಿ ರಸ್ತೆ ಪ್ರದೇಶದಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆ ಆಗಿದ್ದಾರೆ. ಕೌಟುಂಬಿಕ ವಿಚಾರಗಳಿಗೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಲ್ಯಾನ್ಸನ್ ಟೊಯೋಟಾದ ಜಂಟಿ ಅಧ್ಯಕ್ಷೆಯಾಗಿದ್ದ ನಲವತ್ತೊಂಬತ್ತು ವರ್ಷದ ರೀತಾ ಲಂಕಲಿಂಗಮ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಳಗ್ಗೆ ಒಂಬತ್ತು ಗಂಟೆಯಾದರೂ ತಮ್ಮ ಕೋಣೆಯಿಂದ ಆಚೆ ಬಾರದಿದ್ದರಿಂದ ಅನುಮಾನಗೊಂಡು, ನಂತರ ಸೂಪರ್ ವೈಸರ್ ಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಆಕೆ ಪತ್ತೆಯಾಗಿದ್ದಾರೆ. "ಇದು ಮೇಲ್ನೋಟಕ್ಕೆ ಆತ್ಮಹತ್ಯೆ ಪ್ರಕರಣದಂತೆ ಇದೆ. ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ" ಎಂದು ಹೇಳಿದ್ದಾರೆ.

ರೀತಾಗೆ ತಮ್ಮ ಪತಿ ಜಗಳ ಆಗಿತ್ತು. ಆಕೆಯ ಪತಿ ಲಂಕಲಿಂಗಮ್ ಮುರುಗೇಸು. ಅವರು ಲ್ಯಾನ್ಸನ್ ಟೊಯೋಟಾದ ಮ್ಯಾನೇಜಿಂಗ್ ಡೈರೆಕ್ಟರ್. ಸಿಬ್ಬಂದಿಯೊಬ್ಬರ ವಿರುದ್ಧ ಕ್ರಮ ತೆಗೆದುಕೊಳ್ಳುವ ವಿಚಾರವಾಗಿ ಗಂಡ- ಹೆಂಡತಿ ಮಧ್ಯೆ ವಾಗ್ವಾದ ಆಗಿತ್ತು.

Chennai Woman Entrepreneur Found Hanging At Room

ಸಣ್ಣ ವಿಚಾರಕ್ಕೆ ರೀತಾ ಇಂಥ ನಿರ್ಧಾರಕ್ಕೆ ಬಂದಿರಬಹುದು. ಕಳೆದ ರಾತ್ರಿ ಆಕೆಯ ಗಂಡ ಹೋಟೆಲ್ ನಲ್ಲಿ ಕಳೆದಿದ್ದು, ಗುರುವಾರ ಬೆಳಗ್ಗೆ ಮನೆಗೆ ಬಂದಿದ್ದಾರೆ. ಈ ವರೆಗೆ ಸೂಸೈಡ್ ನೋಟ್ ಯಾವುದೂ ಪತ್ತೆಯಾಗಿಲ್ಲ. ರೀತಾ ಮೂಲತಃ ತಮಿಳುನಾಡಿನ ತೂತ್ತುಕುಡಿಯವರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+