ಸಂಬಂಧಿಯ ರೇಪ್: ಖಾಸಗಿ ಟಿವಿ ಕ್ಯಾಮರಾಮನ್ ಅರೆಸ್ಟ್

chennai-kalaignar-tv-channel-camera-assistant-held-for-raping-relative
ಚೆನ್ನೈ, ನ.7- ಹದಿನಾರರ ಹರೆಯದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಖಾಸಗಿ ಟಿವಿ ಚಾನೆಲ್ ಕಂಪನಿಯಲ್ಲಿ ಕ್ಯಾಮರಾ ಅಸಿಸ್ಟೆಂಟ್ ಆಗಿರುವ 28 ವರ್ಷದ ಯುವಕನನ್ನು ಚೆಟ್ಟಪೇಟೆಯಲ್ಲಿ ಮಂಗಳವಾರ ಬಂಧಿಸಲಾಗಿದೆ.

Kalaignar TV: ಕಲೈನರ್ ಟಿವಿ ಚಾನೆಲ್ಲಿನಲ್ಲಿ ಕ್ಯಾಮರಾಮನ್ ಆಗಿರುವ ಜೆಗನ್ನಾಥಪುರಂ ನಿವಾಸಿ ಗೌತಮ್ ಬಂಧಿತ ಆರೋಪಿ. ಈತ ತನ್ನ ಸಂಬಂಧಿಯೇ ಆಗಿರುವ ಪಿಯುಸಿ ವಿದ್ಯಾರ್ಥಿನಿ, ಹದಿನಾರರ ಬಾಲಕಿ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಅಮ್ಮನ ಗದರಿಕೆಗೆ ಗುಟ್ಟುರಟ್ಟು: ಬಾಲಕಿಯ ತಾಯಿ ಚೆಟ್ಟಪೇಟೆ ಪೊಲೀಸರಿಗೆ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಗೌತಮ್ ಮತ್ತು ಸದರಿ ಬಾಲಕಿ ಪರಸ್ಪರ ಅನ್ಯೋನ್ಯವಾಗಿದ್ದರು. ಇಬ್ಬರೂ ತಮ್ಮ ಮನೆಗಳಿಗೆ ಬಂದುಹೋಗುತ್ತಿದ್ದರು. ಆದರೆ ಕಾಲಾಂತರದಲ್ಲಿ ಬಾಲಕಿ ಆಗಾಗ ಅಸ್ವಸ್ಥಗೊಳ್ಳುತ್ತಿರುವುದು ಜಾಸ್ತಿಯಾಗಿತ್ತು. ಹೊಟ್ಟೆ ಸಹ ಉಬ್ಬತೊಡಗಿತ್ತು. ಇದರಿಂದ ಅನುಮಾನಗೊಂಡ ಬಾಲಕಿಯ ತಾಯಿ, ವಿಚಾರಿಸಲಾಗಿ ಗುಟ್ಟುರಟ್ಟಾಗಿದೆ.

ಅಮ್ಮನ ಗದರಿಕೆಗೆ ಅಂಜಿದ ಬಾಲಕಿ ಒಂದೇ ಸಮನೆ ಅಳುತ್ತಾ, ತನ್ನ ಮೂರ್ನಾಲ್ಕು ತಿಂಗಳ ಕಳ್ಳಾದ ಬಗ್ಗೆ ಮಾಹಿತಿ ನೀಡಿದ್ದಾಳೆ. ಗೌತಮನ ಜತೆ ತನಗೆ ಸಂಬಂಧವಿದೆ ಎಂದು ಗೋಳಾಡಿದ್ದಾಳೆ.

ಇದನ್ನು ಸಹಿಸದಾದ ಬಾಲಕಿಯ ತಾಯಿ ಸೀದಾ ಪೊಲೀಸ್ ಠಾಣೆಗೆ ತೆರಳಿ ಸಂಬಂಧಿ ಗೌತಮನ ವಿರುದ್ಧ ದೂರು ನೀಡಿದ್ದಾರೆ. ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪದಡಿ ಗೌತಮನನ್ನು ಪೊಲೀಸರು ಬಂಧಿಸಿದ್ದಾರೆ. ಗೌತಮ ಈಗ ನ್ಯಾಯಾಂಗ ಬಂಧನದಲ್ಲಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+