ಚೆನ್ನೈನಲ್ಲಿ 100 ಉದ್ಯೋಗಿಗಳಿಗೆ ಕಾರಿನ ಉಡುಗೊರೆ ನೀಡಿದ ಐಟಿ ಕಂಪನಿ!

ಚೆನ್ನೈ, ಏಪ್ರಿಲ್ 13: ಚೆನ್ನೈ ಮೂಲದ ಕಂಪನಿಯೊಂದು ತನ್ನ ಉದ್ಯೋಗಿಗಳು ನಿಬ್ಬೆರಗಾಗುವಂತಾ ಉಡುಗೊರೆಯನ್ನು ನೀಡಿದೆ. ಸಂಸ್ಥೆಯ 100 ಉದ್ಯೋಗಿಗಳಿಗೆ ಚೆನ್ನೈನ ಮಾಹಿತಿ ತಂತ್ರಜ್ಞಾನ (ಐಟಿ ) ಕಂಪನಿಯು ಕಾರುಗಳನ್ನು ಗಿಫ್ಟ್ ಮಾಡಿದೆ.

ಕಳೆದ 10 ವರ್ಷಗಳಿಂದ ತಮ್ಮದೇ ಸಂಸ್ಥೆಯಲ್ಲಿ ಉಳಿದುಕೊಂಡು ಉದ್ಯೋಗ ಮಾಡುತ್ತಿರುವ 100 ಉದ್ಯೋಗಿಗಳಿಗೆ ಐಡಿಯಾಸ್2ಐಟಿ ಸಂಸ್ಥೆಯು ಮಾರುತಿ ಸುಜುಕಿ ಕಾರುಗಳನ್ನು ಉಡುಗೊರೆ ಆಗಿ ನೀಡಿದೆ. ಈ ಸಂಸ್ಥೆಯು ಒಟ್ಟು 500 ಉದ್ಯೋಗಿಗಳನ್ನು ಹೊಂದಿದೆ ಎಂದು ಎಎನ್ಐ ವರದಿ ಮಾಡಿದೆ.

"ಕಂಪನಿಯ ಯಶಸ್ಸು ಮತ್ತು ಬೆಳವಣಿಗೆಗೆ ನಿರಂತರ ಬೆಂಬಲ ಮತ್ತು ಸಾಟಿಯಿಲ್ಲದ ಕೊಡುಗೆಗಳಿಗಾಗಿ" ಉದ್ಯೋಗಿಗಳಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡಲಾಯಿತು. "10 ವರ್ಷಗಳಿಂದ ನಮ್ಮ ಭಾಗವಾಗಿರುವ ನಮ್ಮ 100 ಉದ್ಯೋಗಿಗಳಿಗೆ ನಾವು 100 ಕಾರುಗಳನ್ನು ಉಡುಗೊರೆಯಾಗಿ ನೀಡುತ್ತಿದ್ದೇವೆ. ನಮ್ಮಲ್ಲಿ 500 ಉದ್ಯೋಗಿಗಳಿದ್ದಾರೆ. ನಾವು ಪಡೆದ ಸಂಪತ್ತಿನಲ್ಲಿ ಕೆಲ ಭಾಗವನ್ನು ಉದ್ಯೋಗಿಗಳಿಗೆ ಹಿಂದಿರುಗಿಸುವುದು ನಮ್ಮ ಪರಿಕಲ್ಪನೆಯಾಗಿದೆ," ಎಂದು ಐಡಿಯಾಸ್2ಐಟಿಯ ಮಾರ್ಕೆಟಿಂಗ್ ಮುಖ್ಯಸ್ಥ ಹರಿ ಸುಬ್ರಮಣಿಯನ್ ಹೇಳಿದ್ದಾರೆ.

Chennai IT Company gifts cars to 100 employees

ಕಾರುಗಳು ಉದ್ಯೋಗಿಗಳ ಪರಿಶ್ರಮದ ಫಲ:

ಕಾರುಗಳು ಸಂಸ್ಥೆಯ ನೀಡಿರುವ ಉಡುಗೊರೆಯಲ್ಲ. ಬದಲಿಗೆ ಉದ್ಯೋಗಿಗಳು ತಾವು ಮಾಡಿದ ತಮ್ಮ ಕಠಿಣ ಪರಿಶ್ರಮದ ಪ್ರತಿಫಲ ಎಂದು ಕಂಪನಿಯ ಸಂಸ್ಥಾಪಕ ಮತ್ತು ಅಧ್ಯಕ್ಷ ಮುರಳಿ ವಿವೇಕಾನಂದ್ ಹೇಳಿದ್ದಾರೆ. ಈ ಕಾರುಗಳನ್ನು ಪ್ರಶಸ್ತಿ ಆಗಿ ನೀಡುವುದು ಕೇವಲ ಮೊದಲ ಹೆಜ್ಜೆ. ಮುಂದಿನ ದಿನಗಳಲ್ಲಿ ಇಂತಹ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ನಾವು ಯೋಜನೆ ಹಾಕಿಕೊಂಡಿದ್ದೇವೆ ಎಂದು ಅವರು ಹೇಳಿದರು.

Chennai IT Company gifts cars to 100 employees

ಐಡಿಯಾಸ್2ಐಟಿ ಸಂಸ್ಥೆಯನ್ನು ಹೊಗಳಿದ ಉದ್ಯೋಗಿ:

ಐಡಿಯಾಸ್2ಐಟಿ ಸಂಸ್ಥೆಯು ತನ್ನ ಉದ್ಯೋಗಿಗಳ ವಿಷಯದಲ್ಲಿ ಸಾಕಷ್ಟು ಉದಾರತೆಯನ್ನು ಹೊಂದಿದೆ. ಈ ಹಿಂದೆ ಉದ್ಯೋಗಿಗಳಿಗೆ ಐಫೋನ್‌ಗಳು ಮತ್ತು ಚಿನ್ನದ ನಾಣ್ಯಗಳನ್ನು ಒಳಗೊಂಡಂತೆ ಹಲವು ಬಗೆಯ ಉಡುಗೊರೆಗಳನ್ನು ನೀಡಿದೆ. "ಈ ಸಂಸ್ಥೆಯಿಂದ ಉಡುಗೊರೆಗಳನ್ನು ಸ್ವೀಕರಿಸುವುದು ಯಾವಾಗಲೂ ಉತ್ತಮ ಎನಿಸುತ್ತದೆ. ಪ್ರತಿ ಸಂದರ್ಭದಲ್ಲಿ, ಕಂಪನಿಯು ಚಿನ್ನದ ನಾಣ್ಯಗಳು, ಐಫೋನ್‌ಗಳಂತಹ ಉಡುಗೊರೆಗಳೊಂದಿಗೆ ತನ್ನ ಸಂತೋಷವನ್ನು ಉದ್ಯೋಗಿಗಳೊಂದಿಗೆ ಹಂಚಿಕೊಳ್ಳುತ್ತದೆ. ನಮಗೆ ಕಾರು ಬಹಳ ದೊಡ್ಡ ವಿಷಯವಾಗಿದೆ," ಎಂದು ಉದ್ಯೋಗಿ ಪ್ರಸಾದ್ ಹೇಳಿದ್ದಾರೆ.

Chennai IT Company gifts cars to 100 employees

ಐದು ಉದ್ಯೋಗಿಗಳಿಗೆ ಬಿಎಂಡಬ್ಲ್ಯೂ ಕಾರು:

ಇದೇ 2022ರ ಏಪ್ರಿಲ್ 8ರಂದು ಸಾಫ್ಟ್‌ವೇರ್-ಆಸ್-ಎ-ಸರ್ವೀಸ್ (ಸಾಸ್) ಕಂಪನಿಯ ಸಿಇಒ ಕಿಸ್‌ಫ್ಲೋ ಕೆಲವು ಉದ್ಯೋಗಿಗಳಿಗೆ ಐಷಾರಾಮಿ ಕಾರುಗಳನ್ನು ಉಡುಗೊರೆಯಾಗಿ ನೀಡಿ ಸುದ್ದಿ ಆಗಿದ್ದರು. 1 ಕೋಟಿಗೂ ಹೆಚ್ಚು ಮೌಲ್ಯದ BMW ಕಾರುಗಳನ್ನು ಐವರು ಹಿರಿಯ ನಿರ್ವಹಣಾ ಅಧಿಕಾರಿಗಳ ನಿಷ್ಠತೆಯನ್ನು ಮೆಚ್ಚಿ ನೀಡಲಾಗಿತ್ತು. "ನಾನು ಚಿನ್ನಕ್ಕಾಗಿ 100 ಅಡಿ ಅಗೆಯುವ ಸಂದರ್ಭದಲ್ಲಿ ನನ್ನೊಂದಿಗೆ ದುಡಿದ ಐವರಿಗೆ ಈ ಕಾರುಗಳನ್ನು ನೀಡುತ್ತಿರುವುದಾಗಿ ಸಿಇಒ ಸುರೇಶ್ ಸಂಬಂದಂ ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+