ಅಮ್ಮ ಥಿಯೇಟರ್: ಜಯಲಲಿತಾ ಮತ್ತೊಂದು ರಾಜಕೀಯ

ಚೆನ್ನೈ, ಫೆ.20: ಪ್ರಧಾನಿ ಆಗಬೇಕೆಂಬ ಹೆಬ್ಬಯಕೆಯೊಂದಿಗೆ ಲೋಕಸಭಾ ಚುನಾವಣೆ ಪೂರ್ವದಲ್ಲಿ ಪ್ರತಿಯೊಂದು ಅವಕಾಶವನ್ನೂ ಬಳಸಿಕೊಳ್ಳುತ್ತಿರುವ ಮುಖ್ಯಮಂತ್ರಿ ಜಯಲಲಿತಾ ಈಗ ಚಿತ್ರರಸಿಕರಿಗೆ ಹೊಸ ಆಶ್ರಯ ನೀಡಿದ್ದಾರೆ.

ಅಮ್ಮ ಇಡ್ಲಿ, ಅಮ್ಮ ಅನ್ನ-ಸಾಂಬಾರ್, ಅಮ್ಮ ಪೊಂಗಲ್ ಸರಣಿಗೆ ಮುಖ್ಯಮಂತ್ರಿ ಜಯಲಲಿತಾ ಮತ್ತೊಂದು ಸೇರಿಸಿದ್ದಾರೆ. ಅದುವೇ ಅಮ್ಮ ಥಿಯೇಟರ್!

Chennai Corporation Council to construct Amma theatres in Jayalalitha's name
ಈ ಮಧ್ಯೆ, ರಾಜೀವ್ ಗಾಂಧಿ ಹಂತಕರನ್ನು ಜೈಲಿಂದ ಬಿಡುಗಡೆ ಮಾಡಲು ತುದಿಗಾಲಲ್ಲಿ ನಿಂತಿರುವ ಜಯಾ ವಿರುದ್ಧ ರಾಜೀವ್ ಗಾಂಧಿಯ ಏಕೈಕ ಪುತ್ರ ರಾಹುಲ್ ಅವರು ಕಿಡಿಕಾರಿದ್ದಾರೆ. ಜತೆಗೆ, ಜಯಾ ನಿರ್ಧಾದ ವಿರುದ್ಧ ಸುಪ್ರೀಂಕೋರ್ಟ್ ಮೊರೆಹೋಗುವಂತೆಯೂ ಕೇಂದ್ರ ಸರಕಾರಕ್ಕೆ ಅಲವತ್ತುಕೊಂಡಿದ್ದಾರೆ. ಇದೆಲ್ಲಾ ಆಗೋಷ್ಟೊತ್ತಿಗೆ ಜಯಾ, ಪಾತಕಿಗಳನ್ನು ಬಿಟ್ಟುಕಳಿಹಿಸಿದ್ದರೂ ಆಶ್ಚರ್ಯವಿಲ್ಲ.

ಮತ್ತೆ ಅಮ್ಮ ಥಿಯೇಟರ್ ನತ್ತ ಹೆಜ್ಜೆ ಹಾಕುವುದಾದರೆ... ಜನಾಸಾಮಾನ್ಯರು ಸಿನಿಮಾ ಮಂದಿರಗಳತ್ತ ಬರುವುದು ದುಬಾರಿಯಾಗುತ್ತಿದೆ ಎಂಬುದನ್ನು ಅರಿತ ಸಿಎಂ ಜಯಾ ಇದೀಗ ಚೆನ್ನೈನಲ್ಲಿ ಹತ್ತಾರು ಕಡೆ ಥಿಯೇಟರ್ ಗಳನ್ನು ತೆರೆದು, ಅಗ್ಗದ ದರದ ಟಿಕೆಟ್ ಇಟ್ಟು, ಜನಸಾಮಾನ್ಯರಿಗೆ ಅಗ್ಗದ ಮನರಂಜನೆ ಒದಗಿಸಲು ಮುಂದಾಗಿದ್ದಾರೆ.

ನಿನ್ನೆ ಚೆನ್ನೈ ಮಹಾನಗರ ಪಾಲಿಕೆ ಬಜೆಟ್ ಮಂಡನೆಯಾಗಿದ್ದು, ಅದರಲ್ಲಿ Amma Cinema Theatre ನಿರ್ಮಾಣಕ್ಕೆ ಅಸ್ತು ಎನ್ನಲಾಗಿದೆ. ಹಾಗಾಗಿ ಚೆನ್ನೈನಲ್ಲಿ ಖಾಲಿ ಬಿದ್ದಿರುವ ಜಾಗಗಳಲ್ಲಿ ಅಮ್ಮ ಸಿನಿಮಾ ಥಿಯೇಟರ್ ತಲೆಯೆತ್ತಲಿವೆ.

ಪಾಲಿಕೆಗೆ ಸೇರಿದ ಜಾಗಗಳಲ್ಲಿ ಹೊಸ ಸಿನಿ ಮಂದಿರಗಳನ್ನು ನಿರ್ಮಿಸಿ. ಅಲ್ಲಿ ಹೊಚ್ಚ ಹೊಸ ಸೂಪರ್ ಡ್ಯೂಪರ್ ಸಿನಿಮಾಗಳನ್ನು ಪ್ರದರ್ಶಿಸುವ ಏರ್ಪಾಡು ಮಾಡಿ ಎಂದು ಪಾಲಿಕೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಜಯಲಲಿತಾ ಸೂಚಿಸಿದ್ದರಿಂದ ಈ ಬಗ್ಗೆ ಕ್ರಮಕೈಗೊಂಡಿದ್ದೇವೆ ಎಂದು ಬಜೆಟ್ ಮಂಡಿಸುತ್ತಾ ಮೇಯರ್ ಸೈದೈ ದುರೈಸಾಮಿ ಹೇಳಿದ್ದಾರೆ.

ಚೆನ್ನೈ ಜನಕ್ಕೆ ಸಿನಿಮಾ ಮಂದಿರಗಳು ಮನರಂಜನೆಯ ತಾಣಗಳು. ಆದರೆ ಬಹಳಷ್ಟು ಥಿಯೇಟರುಗಳು ವಾಣಿಜ್ಯ ಸಂಕೀರ್ಣಗಳಲ್ಲಿವೆ. ಅಲ್ಲಿ ಟಿಕೆಟ್ ದುಬಾರಿ. ಆದ್ದರಿಂದ ಮಧ್ಯಮ ಮತ್ತು ಬಡ ಜನತೆ ಈ ಮಲ್ಟಿಪ್ಲೆಕ್ಸುಗಳಿಗೆ ಹೋಗುವಂತಿಲ್ಲ. ಹಾಗಾಗಿ ಮುಖ್ಯಮಂತ್ರಿ ಈ ಯೋಜನೆ ರೂಪಿಸಿದ್ದಾರೆ ಎಂದು ಮೇಯರ್ ದುರೈಸಾಮಿ ತಿಳಿಸಿದ್ದಾರೆ.

ಮೊದಲ ಹಂತದಲ್ಲಿ 5 ಸಿನಿಮಾ ಮಂದಿರಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ.

ಮುಂದಿನ ದಿನಗಳಲ್ಲಿ ಅಮ್ಮ ವಾರದ ಸಂತೆಗಳು, ಅಮ್ಮ ಮಹಿಳಾ ಹಾಸ್ಟೆಲ್, ಅಮ್ಮ ಕುಠೀರ, ಅಮ್ಮ ಕಾರ್ಪೊರೇಶನ್ ಹಾಸ್ಟೆಲುಗಳು, ಅಮ್ಮ ಕಂಪ್ಯೂಟರ್ ತರಬೇತಿ ಕೇಂದ್ರಗಳು ಚೆಡನ್ನನಲ್ಲಿ ಸದ್ಯದಲ್ಲೆ ಕಾರ್ಯಾರಂಭಿಸಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+