ವಿನೂತನ 'Chennai bus app' ಲಾಂಚ್ ಮಾಡಿದ ತಮಿಳು ಸರ್ಕಾರ
ಚೆನ್ನೈ, ಮೇ 6: ತಮಿಳುನಾಡು ಸರ್ಕಾರದ ಅಧೀನದಲ್ಲಿರುವ ಸಾರಿಗೆ ಸಂಸ್ಥೆ 'ಮೆಟ್ರೋಪಾಲಿಟನ್ ಸಾರಿಗೆ ಸಂಸ್ಥೆ' (MTC) ಬಸ್ ಗಳಲ್ಲಿ ವಿನೂತನವಾದ App ಒಂದನ್ನ ಬಿಡುಗಡೆ ಮಾಡಿದೆ. ಬಸ್‌ನಲ್ಲಿ ಪ್ರಯಾಣಿಸುವರಿಗೆ ಈ ಅಫ್ಲಿಕೇಷನ್ ಬಹಳ ಉಪಕಾರಿ ಹಾಗೂ ರಕ್ಷಣೆ ನೀಡುತ್ತದೆ ಎಂದು ತಮಿಳುನಾಡು ಸಾರಿಗೆ ಸಚಿವ ಎಸ್.ಎಸ್ ಶಿವಶಂಕರ್ ತಿಳಿಸಿದ್ದಾರೆ.
ಬಹಳ ದಿನಗಳಿಂದ ಈ ಡಿಜಿಟಲ್ ಅಫ್ಲಿಕೇಷನ್ ಬಿಡುಗಡೆಗೆ ವಿಳಂಬ ಮಾಡಿದ್ದ ಸರ್ಕಾರ ಕೊನೆಗೂ ಚೆನ್ನೈ ಜನರ ಬಳಕೆಗೆ ಅನುವು ಮಾಡಿಕೊಟ್ಟಿರುವುದು ಇಲ್ಲಿನ ಜನರಿಗೆ ಖುಷಿ ತಂದಿದೆ. ಈ ವಿನೂತನವಾದ ಅಫ್ಲಿಕೇಷನ್ ಬಗ್ಗೆ ಸಾಕಷ್ಟು ಕುತೂಹಲದಿಂದ ಕಾದಿದ್ದ ಚೆನ್ನೈ ಜನರಿಗೆ ಇದರಿಂದ ಯಾವ ರೀತಿಯಲ್ಲಿ ಉಪಯುಕ್ತವಾಗಲಿದೆ..? ಹೇಗೆ ಬಳಸಬೇಕು..? ಏನೆಲ್ಲಾ ವಿಶೇಷ ಮತ್ತು ಗಮನಾರ್ಹಗಳಿವೆ..? ಬಹಳ ಮುಖ್ಯವಾಗಿ ಮಹಿಳೆಯರ ರಕ್ಷಣೆಗೂ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ತಮಿಳುನಾಡು ಸಾರಿಗೆ ಮಂತ್ರಿ ತಿಳಿಸಿದ್ದಾರೆ.
ಚೆನ್ನೈ ಬಸ್ ಆ್ಯಪ್‌ನಲ್ಲಿರುವ ವಿಶೇಷ ಸೇವೆಗಳೇನು..?
1. ನಿಮ್ಮ ಏರಿಯಾದಿಂದ ಯಾವ ಬಸ್ ಯಾವ ಮಾರ್ಗಕ್ಕೆ ಹೋಗುತ್ತಿದೆ ಎಂದು ತಿಳಿಸುವುದರ ಜೊತೆಗೆ, ನೀವು ಹೋಗಬೇಕಿರುವ ಮಾರ್ಗದ ಬಸ್ ನಿಮ್ಮ ಏರಿಯಾ ಬಸ್ ನಿಲ್ದಾಣಕ್ಕೆ ಅಂದಾಜು ಎಷ್ಟೊತ್ತಿದೆ ಬರುತ್ತದೆ ಮತ್ತು ಯಾವ ಸ್ಥಳದಲ್ಲಿದೆ ಎಂದು ತಿಳಿಸುತ್ತದೆ.

2. ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಅಪ್ಲಿಕೇಶನ್‌ನಲ್ಲಿ SOS ಬಟನ್ ಅಳವಡಿಸಲಾಗಿದೆ. ಮಹಿಳೆಯರು ತಮಗೆ ಯಾವುದೇ ರೀತಿಯ ತೊಂದರೆ ಆದಲ್ಲಿ ತೊಂದರೆ ಸಂಕೇತವನ್ನು ಬಟನ್ ಫ್ರೆಸ್ ಮಾಡಿದರೆ ಕೂಡಲೇ ನೀವಿರು ಮಾರ್ಗ ಮತ್ತು ಬಸ್ ಪೊಲೀಸ್ ಅಧಿಕಾರಿಗಳಿಗೆ ತಿಳಿಸುತ್ತದೆ. ಅಷ್ಟೇ ಅಲ್ಲದೆ ತುರ್ತು ಸಂದರ್ಭದಲ್ಲಿ ಪ್ರಯಾಣಿಕರಿಗೆ ಆರೋಗ್ಯ ಸಮಸ್ಯೆ, ಅಘಾತ ಬಗ್ಗೆ ಸಂಪರ್ಕ ಸಾರಿಗೆ ಸಂಪರ್ಕ ಅಧಿಕಾರಿಗಳಿಗೆ ಸಂದೇಶ ರವಾನಿಸುತ್ತದೆ.
3. ಫ್ಯಾಮಿಲಿ ಸಮೇತ ಎಲ್ಲಿಯಾದರೂ ಪ್ರವಾಸಕ್ಕೆ ಅಥವಾ ರೈಲ್ವೆ ನಿಲ್ದಾಣಗಳಿಗೆ, ಬಸ್ ನಿಲ್ದಾಣಗಳಿಗೆ ಹೋಗಲು ನಿರ್ಧಿಷ್ಟ ಸಮಯಕ್ಕೆ ಹೋಗಲು ರೈಲ್ವೇ ನಿಲ್ದಾಣಕ್ಕೆ ಅಥವಾ ಬಸ್ ನಿಲ್ದಾಣಗಳಿಗೆ ಹೋಗುವ ಬಸ್ ಗಳು ಎಲ್ಲಿದೆ ಎಂದು ಅಂದಾಜಿಸುತ್ತದೆ.
4. ಅಪ್ಲಿಕೇಶನ್‌ನ ಮುಖಪುಟವು (Dislplay) ನಿಮ್ಮ ಏರಿಯಾದಲ್ಲಿರುವ 1 ಕಿ.ಮೀ ವ್ಯಾಪ್ತಿಯಲ್ಲಿರುವ ಎಲ್ಲಾ ಬಸ್ ನಿಲ್ದಾಣಗಳ ಹೆಸರನ್ನು ಸೂಚಿಸುತ್ತದೆ.
5. ಎಂಟಿಸಿ (ತಮಿಳುನಾಡು ಸಾರಿಗೆ ಸಂಸ್ಥೆ) ಬಸ್ ಗಳಲ್ಲಿ ಪ್ರಯಾಣ ಮಾಡಿದ ಬಳಿಕ ಜನರು ಈ ಅಫ್ಲಿಕೇಷನ್ ಕಾರ್ಯದ ಬಗ್ಗೆ ಮತ್ತು ಪ್ರಯಾಣದ ಬಗ್ಗೆ ತಮ್ಮ ಪ್ರತಿಕ್ರಿಯೆಗಳನ್ನ ಸಂಗ್ರಹ ಮಾಡುತ್ತದೆ.
6. ಅಪ್ಲಿಕೇಷನ್ ಬಳಕೆದಾರರು 'ಬಸ್ ಮಾರ್ಗ' ಆಯ್ಕೆಯನ್ನು ಕ್ಲಿಕ್ ಮಾಡಿದಾಗ ಮತ್ತು ತಮ್ಮ ಮಾರ್ಗದ ಬಸ್ ಸಂಖ್ಯೆಯನ್ನು ಹಾಕಿದಾಗ ತಾವು ಪ್ರಯಾಣಿಸುವ ಬಸ್ಸುಗಳನ್ನ ಅಪ್ಲಿಕೇಷನ್ ನಲ್ಲಿ (Dislplay) ತೋರಿಸುತ್ತದೆ

7. ಬಳಕೆದಾರರಿಗೆ ಇಂಗ್ಲಿಷ್ ಮತ್ತು ತಮಿಳು ಎರಡೂ ಭಾಷೆಯಲ್ಲಿ ಭಾಷೆಯಲ್ಲಿ ಈ ಅಪ್ಲಿಕೇಷನ್ ಬಳಕೆಗೆ ಸಿಗುತ್ತದೆ.
8. ಕೆಲಸಗಳಿಗೆ ಹೋಗುವವರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ದಿನನಿತ್ಯ ಒಂದೇ ಮಾರ್ಗದಲ್ಲಿ ಪ್ರಯಾಣಿಸುವವರು 'ಮೆಚ್ಚಿನವುಗಳು' ಆಯ್ಕೆ ಬಟನ್ ಬಳಸಿಕೊಂಡು ತಮ್ಮ ನೆಚ್ಚಿನ ಮಾರ್ಗಗಳು ಮತ್ತು ಸ್ಥಳಗಳನ್ನು ಉಳಿಸಿಕೊಂಡು ದಿನನಿತ್ಯದ ಆಯ್ಕೆ ಪ್ರಕ್ರಿಯೆ ಮುಂದುವರೆಸಬಹುದು.
9. MTC ಬಸ್‌ಗಳ ಸ್ಥಳನ್ನು ಗುರುತಿಸುವುದರ ಜೊತೆಗೆ, ಸರಿಯಾದ ಸಮಯದ ಆಧಾರದ ಮೇಲೆ ಒದಗಿಸುವ ಮೊಬೈಲ್ ಅಪ್ಲಿಕೇಶನ್ ಇದಾಗಿರುತ್ತದೆ.
10. ಒಟ್ಟು 3,233 MTC ಬಸ್‌ಗಳ ಚಲನೆಯನ್ನು ಗಮನಿಸಲು ಈ ಅಪ್ಲಿಕೇಶನ್ ಜನರಿಗೆ ಸಹಕಾರಿಯಾಗಿದೆ.

ಹೀಗೆ ಹತ್ತು ಹಲವು ಉಪಯುಕ್ತವಾದ 'ಚೆನ್ನೈ ಬಸ್ ಆಪ್' ಅಪ್ಲಿಕೇಷನ್ ಜನರನ್ನ ಆಕರ್ಷಣೆ ಮಾಡುವ ಜೊತೆಗೆ ಹೆಚ್ಚು ಹುಚ್ಚು ಪ್ರಯಾಣಿಕರು ಬಸ್ ಗಳಲ್ಲಿ ಪ್ರಯಾಣ ಮಾಡಲು ಆಕರ್ಷಿಸುವ ಜೊತೆಗೆ ಜನರ ಉಪಯೋಗಕ್ಕಾಗಿ ತಮಿಳುನಾಡು ಸರ್ಕಾರ ಈ ಅಪ್ಲಿಕೇಷನ್ ಬಿಡುಗಡೆ ಮಾಡಿದೆ.
3,233 ಬಸ್‌ಗಳ ಮಾಹಿತಿ
ಈ ಬಗ್ಗೆ ಮಾಹಿತಿ ನೀಡಿದ ತಮಿಳುನಾಡು ಸಾರಿಗೆ ಮಂತ್ರಿ ಎಸ್.ಎಸ್ ಶಿವಶಂಕರ್, "ಪ್ರಸ್ತುತ ಈ ಆ್ಯಪ್ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ ಮತ್ತು ತಮಿಳು ಮತ್ತು ಇಂಗ್ಲಿಷ್ ಎಂಬ ಎರಡು ಭಾಷೆಯ ಆಯ್ಕೆಗಳನ್ನು ಹೊಂದಿದೆ. 'ಚೆನ್ನೈ ಬಸ್' ಆಪ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು,'' ಎಂದು ಹೇಳಿದರು.
"ಸದ್ಯಕ್ಕೆ 3,233 MTC ಬಸ್‌ಗಳಲ್ಲಿ ಈ ವ್ಯವಸ್ಥೆ ಅಳವಡಿಸಿದ್ದು, ಈ ಬಸ್ಸುಗಳು 602 ಮಾರ್ಗಗಳ ಮೂಲಕ ಚಲಿಸುತ್ತವೆ ಮತ್ತು ಮತ್ತು ಬಹುಮುಖ್ಯ ನಿಲ್ದಾಣ ಒಳಗೊಂಡಂತೆ 6,026 ನಿಲುಗಡೆಗಳಲ್ಲಿ ನಿಲ್ಲುತ್ತವೆ. ಪ್ರತಿದಿನ ಸುಮಾರು 25 ಲಕ್ಷ ಜನರು ಎಂಟಿಸಿ ಬಸ್‌ಗಳನ್ನು ಬಳಸುತ್ತಾರೆ. COVID-19 ಪ್ರಾರಂಭವಾದಾಗಿನಿಂದ ಈ ಸಂಖ್ಯೆಯು ತೀವ್ರವಾಗಿ ಕಡಿಮೆಯಾಗಿತ್ತು. ಸಾಂಕ್ರಾಮಿಕ ರೋಗಕ್ಕೆ ಮೊದಲು, ಪ್ರತಿದಿನ ಸುಮಾರು 35 ಲಕ್ಷ ಜನರು ಎಂಟಿಸಿ ಬಸ್‌ಗಳ ಮೂಲಕ ಪ್ರಯಾಣಿಸುತ್ತಿದ್ದರು. ಇದೀಗ ಮತ್ತೆ ಬಸ್ ಗಳಲ್ಲಿ ಹೆಚ್ಚು ಹೆಚ್ಚು ಜನರು ಪ್ರಯಾಣಿಸಲುನಮ್ಮ ಸರ್ಕಾರ ಈ ವಿನೂತನವಾದ ಅಪ್ಲಿಕೇಷನ್ ಅನ್ನು ಜನರಿಗಾಗಿ ಬಿಡುಗಡೆ ಮಾಡಲಾಗಿದೆ,'' ಎಂದು ಶಿವಶಂಕರ್ ವಿವರಿಸಿದರು.












Click it and Unblock the Notifications