ತಮಿಳುನಾಡಿನಲ್ಲಿ ಪೆಪ್ಸಿ, ಕೋಕಾಕೋಲಾಗೆ ನಿಷೇಧ
ತಮಿಳುನಾಡಿನಲ್ಲಿ ಪೆಪ್ಸಿ ಹಾಗೂ ಕೋಕಾ ಕೋಲಾಗೆ ಕೊಕ್ ನೀಡುವ ಕಾಲ ಬಂದಿದೆ. ಈ ಎರಡು ತಂಪು ಪಾನೀಯ ಹಾಗೂ ಅದರ ಉತ್ಪನ್ನಗಳಿಗೆ ಇಲ್ಲಿನ ವರ್ತಕರ ಸಂಘ ನಿಷೇಧ ಹೇರಿದೆ.
ಚೆನ್ನೈ, ಮಾರ್ಚ್ 01: ತಮಿಳುನಾಡಿನಲ್ಲಿ ಪೆಪ್ಸಿ ಹಾಗೂ ಕೋಕಾ ಕೋಲಾಗೆ ಕೊಕ್ ನೀಡುವ ಕಾಲ ಬಂದಿದೆ. ಈ ಎರಡು ತಂಪು ಪಾನೀಯ ಹಾಗೂ ಅದರ ಉತ್ಪನ್ನಗಳಿಗೆ ಇಲ್ಲಿನ ವರ್ತಕರ ಸಂಘ ನಿಷೇಧ ಹೇರಿದೆ. ಆದರೆ, ಸೂಪರ್ ಮಾರ್ಕೆಟ್ ಗಳಿಂದ ಈ ನಿಷೇಧಕ್ಕೆ ಬೆಂಬಲ ವ್ಯಕ್ತವಾಗಿಲ್ಲ.
ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧ ಸಣ್ಣ ವರ್ತಕರ ಸಂಘ ಈ ನಿರ್ಣಯ ಕೈಗೊಂಡಿದೆ. ಜಲ್ಲಿಕಟ್ಟು ನಿಷೇಧ ತೆರವಿಗಾಗಿ ಆಗ್ರಹಿಸಿ ಮರೀನಾ ಬೀಚಿನಲ್ಲಿ ನಡೆದ ಬೃಹತ್ ಪ್ರತಿಭಟನೆ ವೇಳೆಯಲ್ಲೇ ದೇಶಿ ಉತ್ಪನ್ನಗಳಿಗೆ ಮಾನ್ಯತೆ ನೀಡಲು ಮುಂದಾಗಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು ಇದರ ಮೊದಲ ಹೆಜ್ಜೆಯಾಗಿ ಮಾರ್ಚ್ 1 ರಿಂದ ಸರಿ ಸುಮಾರು 20 ಲಕ್ಷಕ್ಕೂ ಅಧಿಕ ವರ್ತಕರು ಪೆಪ್ಸಿ, ಕೋಕಾ ಕೋಲಾ ಮಾರಾಟ ನಿಷೇಧಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ತಂಪು ಪಾನೀಯಗಳು ಪರಿಸರ ವಿರೋಧಿ, ಆರೋಗ್ಯಕ್ಕೆ ಮಾರಕ, ಲಾಭ ಎಲ್ಲಾ ಪರದೇಶಕ್ಕೆ ಹೋಗುತ್ತದೆ ಎಂದು ಅಂಗಡಿ ಮಾಲೀಕರ ಒಕ್ಕೂಟ ನಿರ್ಣಯ ತೆಗೆದುಕೊಂಡಿದೆ. ಪೆಪ್ಸಿ, ಕೋಕಾ ಕೋಲಾಕ್ಕೆ ಬದಲಾಗಿ ಸ್ಥಳೀಯ ಬ್ರ್ಯಾಂಡ್ ಗಳಾದ ಟೊರಿನೋ, ಬೊವೊಂಟೋಗೆ ಮಣೆ ಹಾಕಲಾಗಿದೆ.
ರೈತರಿಗೆ ಸಿಗಬೇಕಾಗಿರುವ ನೀರನ್ನು ಈ ಕಂಪನಿಯ ಬಾಟ್ಲಿಂಗ್ ಘಟಕಗಳಿಗೆ ನೀಡುತ್ತಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗಿದೆ. ಈಗ ರೈತರು ಹಾಗೂ ಸ್ಥಳೀಯ ಉತ್ಪನ್ನಗಳ ಪರ ಇಲ್ಲಿನ ಅಂಗಡಿ ಮಾಲೀಕರು ನಿಂತಿದ್ದಾರೆ. ಇಂಥ ದಿನ ಕರ್ನಾಟಕದಲ್ಲಿ ಎಂದು ಬರುವುದೋ?.












Click it and Unblock the Notifications