Get Updates
Get notified of breaking news, exclusive insights, and must-see stories!

ಚೆನ್ನೈನಲ್ಲಿ 700 ಟನ್ ಅಮೋನಿಯಂ ನೈಟ್ರೇಟ್, ಆತಂಕಕಾರಿ!

ಚೆನ್ನೈ, ಆ. 6: ಸುಮಾರು 2,750 ಟನ್‌ನಷ್ಟು ಅಮೋನಿಯಂ ನೈಟ್ರೇಟ್ ಸ್ಫೋಟಗೊಂಡ ಪರಿಣಾಮ ಲೆಬನಾನ್‌ ರಾಜಧಾನಿ ಬೈರುತ್ ಛಿದ್ರ ಛಿದ್ರವಾಗಿದೆ. ನೂರಾರು ಜನರು ಮೃತಪಟ್ಟು, 5000 ಸಾವಿರಕ್ಕೂ ಹೆಚ್ಚು ಮಂದಿ ಆಸ್ಪತ್ರೆ ಸೇರಿದ್ದಾರೆ. ಈ ಹೊತ್ತಲ್ಲೇ ಚೆನ್ನೈ ನಿವಾಸಿಗಳು ಬೆಚ್ಚಿಬೀಳುವ ಶಾಂಕಿಂಗ್ ಸುದ್ದಿಯೊಂದು ಬಹಿರಂಗವಾಗಿದೆ. ಚೆನ್ನೈ ಹೊರವಲಯದಲ್ಲಿ ಸುಮಾರು 700 ಟನ್‌ ಅಮೋನಿಯಂ ನೈಟ್ರೇಟ್ ಸಂಗ್ರಹ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಪಿಎಂಕೆ ಮುಖ್ಯಸ್ಥ ಡಾ. ರಾಮದಾಸ್ ಹೇಳಿಕೆಯಂತೆ ಕಸ್ಟಮ್ಸ್ ಅಧಿಕಾರಿಗಳು ಇಷ್ಟು ದೊಡ್ಡ ಪ್ರಮಾಣದಲ್ಲಿ ಅಮೋನಿಯಂ ನೈಟ್ರೇಟ್ ಸಂಗ್ರಹಿಸಿದ್ದಾರೆ. ಹಲವು ವರ್ಷಗಳಿಂದ ವಿವಿಧ ಪ್ರಕರಣಗಳಲ್ಲಿ ಸುಮಾರು 700 ಟನ್‌ಗೂ ಹೆಚ್ಚು ಪ್ರಮಾಣದ ಅಮೋನಿಯಂ ನೈಟ್ರೇಟ್ ವಶಕ್ಕೆ ಪಡೆಯಲಾಗಿದೆ. ಇಷ್ಟು ಪ್ರಮಾಣದ ರಾಸಾಯನಿಕವನ್ನು ಚೆನ್ನೈ ಹೊರವಲಯದಲ್ಲಿ ಇಡಲಾಗಿದೆ ಎನ್ನಲಾಗುತ್ತಿದ್ದು, ತೀವ್ರ ಆತಂಕ ಸೃಷ್ಟಿಸಿದೆ.

ಆದರೆ ಪಿಎಂಕೆ ಮುಖ್ಯಸ್ಥ ಡಾ. ರಾಮದಾಸ್ ಹೇಳಿಕೆಯನ್ನು ಚೆನ್ನೈ ಕಸ್ಟಮ್ಸ್ ಅಧಿಕಾರಿಗಳು ತಳ್ಳಿಹಾಕಿದ್ದಾರೆ. ಇನ್ನೊಂದ್ಕಡೆ ಇದೇ ಕಸ್ಟಮ್ಸ್ ಡಿಪಾರ್ಟ್‌ಮೆಂಟ್‌ನ ಕೆಲ ಅಧಿಕಾರಿಗಳು ಅಮೋನಿಯಂ ನೈಟ್ರೇಟ್ ಸಂಗ್ರಹವಾಗಿರೋದನ್ನ ಒಪ್ಪಿಕೊಂಡಿದ್ದಾರೆ. ಕಸ್ಟಮ್ಸ್ ಸುಪರ್ದಿಯಲ್ಲಿ ತಲಾ 20 ಟನ್‌ನಂತೆ 36 ಕಂಟೇನರ್‌ಗಳಲ್ಲಿ ಅಮೋನಿಯಂ ನೈಟ್ರೇಟ್ ಸಂಗ್ರಹಿಸಲಾಗಿದೆಯಂತೆ.

ಚೂರು ಎಡವಟ್ಟಾದರೂ ಎಲ್ಲೆಲ್ಲೂ ಹೊಗೆ..!

ಚೂರು ಎಡವಟ್ಟಾದರೂ ಎಲ್ಲೆಲ್ಲೂ ಹೊಗೆ..!

ಅಮೋನಿಯಂ ನೈಟ್ರೇಟ್ ಸಾಮಾನ್ಯ ರಾಸಾಯನಿಕವಲ್ಲ. ಸಾಮಾನ್ಯ ತಾಪಮಾನದಲ್ಲಿ ಅಮೋನಿಯಂ ನೈಟ್ರೇಟ್ ಶಾಂತ ಮೂರ್ತಿಯಂತೆ ಇರುತ್ತದೆ. ಆದರೆ ಒಂದಿಷ್ಟು ಎಡವಟ್ಟಾದರೂ, ಪರಿಸ್ಥಿತಿ ನಿಯಂತ್ರಣಕ್ಕೆ ಸಿಗೋದೆ ಇಲ್ಲ. ಇದು ಬೈರುತ್ ಘಟನೆಗೆ ಮಾತ್ರ ಸಂಬಂಧಿಸಿದ್ದಲ್ಲ. ಈ ಹಿಂದೆಯೂ ಅಮೋನಿಯಂ ನೈಟ್ರೇಟ್ ಹಲವು ಭೀಕರ ದುರಂತಗಳಿಗೆ ಹೊಣೆಯಾಗಿತ್ತು. ತಣ್ಣಗೆ ಇರುವ ಅಮೋನಿಯಂ ನೈಟ್ರೇಟ್‌ನ ಕೆಣಕಿದರೆ ಮಾತ್ರ ನಡೆಯಬಾರದ್ದು ನಡೆದುಹೋಗುತ್ತದೆ.

170 ಡಿಗ್ರಿ ಫ್ಯಾರನ್ ಹೀಟ್‌ ಸಾಕು..!

170 ಡಿಗ್ರಿ ಫ್ಯಾರನ್ ಹೀಟ್‌ ಸಾಕು..!

ಸುಮಾರು 170 ಡಿಗ್ರಿ ಫ್ಯಾರನ್ ಹೀಟ್‌ನಷ್ಟು ಬಿಸಿ ತಾಗಿದರೆ ಸಾಕು ಅಮೋನಿಯಂ ನೈಟ್ರೇಟ್ ಒಳಗೆ ಧಹನ ಕ್ರಿಯೆಗೆ ಚಾಲನೆ ಸಿಗುತ್ತದೆ. ಹೀಗೆ ಆರಂಭವಾಗುವ ರಾಸಾಯನಿಕ ಕ್ರಿಯೆ ಕ್ಷಣಕ್ಷಣಕ್ಕೂ ಹೆಚ್ಚುತ್ತಾ ಸಾಗಿ ನೈಟ್ರೋಜೆನ್, ಆಕ್ಸಿಜೆನ್ ಗ್ಯಾಸ್ ಹಾಗೂ ನೀರಿನ ಆವಿ ಬಿಡುಗಡೆ ಆಗುತ್ತೆ. ನಿಮಗೆ ನೆನಪಿರಲಿ ಇಷ್ಟು ರಾಸಾಯನಿಕಗಳು ಮಾತ್ರ ರಿಲೀಸ್ ಆಗಿದ್ದರೆ ಅಮೋನಿಯಂ ನೈಟ್ರೇಟ್ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯತೆ ಇರಲಿಲ್ಲ. ಆದರೆ ಇದರ ಜೊತೆಗೆ ಊಹೆಗೂ ನಿಲುಕದಷ್ಟು ಪ್ರಮಾಣದಲ್ಲಿ ಶಕ್ತಿ ಅಥವಾ ಎನರ್ಜಿ ಸ್ಫೋಟದ ರೂಪದಲ್ಲಿ ಬಿಡುಗಡೆಯಾಗುತ್ತದೆ. ಈಗ ಲೆಬನಾನ್ ರಾಜಧಾನಿ ಬೈರತ್‌ನಲ್ಲೂ ಇದೇ ಆಗಿರುವುದು. ಆದರೆ ಅದೃಷ್ಟವಶಾತ್ ಅಲ್ಲಿ ಸಂಗ್ರಹಿಸಿದ್ದ ಅಷ್ಟೂ ಅಮೋನಿಯಂ ನೈಟ್ರೇಟ್ ಹೊತ್ತಿ ಉರಿದಿಲ್ಲ. ಹೀಗೆ ಆಗಿದ್ದರೆ ಬೈರುತ್ ಪರಿಸ್ಥಿತಿ ಊಹೆಗೂ ನಿಲುಕದಷ್ಟು ಗಂಭೀರವಾಗಿರುತ್ತಿತ್ತು.

ಸ್ಫೋಟದ ಬಳಿಕ ಭಯಂಕರ ವಿಷಗಾಳಿ..!

ಸ್ಫೋಟದ ಬಳಿಕ ಭಯಂಕರ ವಿಷಗಾಳಿ..!

ಅಮೋನಿಯಂ ನೈಟ್ರೇಟ್ ಸ್ಫೋಟಗೊಂಡರೆ ತಕ್ಷಣಕ್ಕೆ ಕೆಲವರನ್ನು ಮಾತ್ರ ಕೊಂದು ಹಾಕುತ್ತದೆ. ಆದರೆ ದುರಂತದಲ್ಲಿ ಬದುಕುಳಿದವರ ಪಾಡು ಇನ್ನೂ ಕರುಣಾಜನಕ. ಏಕೆಂದರೆ ಅಮೋನಿಯಂ ನೈಟ್ರೇಟ್ ಸ್ಫೋಟಗೊಳ್ಳುವ ಸಂದರ್ಭದಲ್ಲಿ ನೈಟ್ರೋಜೆನ್ ಆಕ್ಸೈಡ್‌ನಂತಹ ವಿಷಕಾರಿ ಅನಿಲಗಳು ಉತ್ಪತ್ತಿ ಆಗುತ್ತವೆ. ಇದರ ಪರಿಣಾಮ ಕೆಂಪು ಹಾಗೂ ಕಂದು ಬಣ್ಣದ ಹೊಗೆ ಮುಗಿಲೆತ್ತರಕ್ಕೆ ಹಬ್ಬುತ್ತದೆ. ಈಗ ಬೈರುತ್‌ ಬ್ಲಾಸ್ಟ್‌ನಲ್ಲಿ ನಡೆದಿದ್ದು ಕೂಡ ಇದೆ.

ಚೀನಾ, ಅಮೆರಿಕದಲ್ಲೂ ಅಮೋನಿಯಂ ಸ್ಫೋಟ

ಚೀನಾ, ಅಮೆರಿಕದಲ್ಲೂ ಅಮೋನಿಯಂ ಸ್ಫೋಟ

ಅಮೋನಿಯಂ ನೈಟ್ರೇಟ್ ವಿಧ್ವಂಸಕ ಕೃತ್ಯಕ್ಕೆ ಬೈರುತ್ ಒಂದು ಸಾಕ್ಷಿ ಮಾತ್ರ. ಇತಿಹಾಸದಲ್ಲಿ ಇದಕ್ಕೂ ಭಯಾನಕ ಘಟನೆಗಳು ಸಂಭವಿಸಿವೆ. 2015ರಲ್ಲಿ ಚೀನಾ ರಾಜಧಾನಿ ಬೀಜಿಂಗ್‌ನ ಬಂದರಿನಲ್ಲಿ ಸುಮಾರು 800 ಟನ್‌ನಷ್ಟು ಅಮೋನಿಯಂ ನೈಟ್ರೇಟ್ ರಾಕೆಟ್‌ಗಳು ಬ್ಲಾಸ್ಟ್ ಆಗಿದ್ದವು. ಪರಿಣಾಮ 173 ಚೀನಿಯರು ಮೃತಪಟ್ಟಿದ್ದರು. 1947ರಲ್ಲಿ ಅಮೆರಿಕದ ಟೆಕ್ಸಾಸ್ ಸಿಟಿ ಬಂದರಿನಲ್ಲಿ 2,300 ಟನ್ ಅಮೋನಿಯಂ ನೈಟ್ರೇಟ್ ಇದ್ದ ಹಡಗು ಸ್ಫೋಟಿಸಿತ್ತು. ಘಟನೆಯಲ್ಲಿ 581 ಜನ ಪ್ರಾಣಬಿಟ್ಟಿದ್ದರು. ಈ ಘಟನೆಗಳೆಲ್ಲಾ ಉದಾಹರಣೆಗಳಷ್ಟೇ, ಇದರಿಂದ ಎಚ್ಚೆತ್ತುಕೊಳ್ಳಬೇಕಿದೆ. ಚೆನ್ನೈನ ಹೊರವಲಯದಲ್ಲಿ ಇದೆ ಎನ್ನಲಾಗುತ್ತಿರುವ ಅಮೋನಿಯಂ ನೈಟ್ರೇಟ್ ಕುರಿತು ಸೂಕ್ತ ತನಿಖೆ ನಡೆಸಿ, ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+